ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಲ್ಲೇ ನಮ್ಮವರು ನಮ್ಮ ಸಹೋದ್ಯೋಗಿಗಳು ಎಂಬುದರ ಬಗ್ಗೆ ಭಾರಿ ಅಸಹನೆ ಇದೆ ಎಂಬುವುದು ಆಗಿಂದಾಗೆ ಕಾಣಿಸುತ್ತಲೇ ಇರುತ್ತದೆ.
ಬಸ್‌ಗಳಲ್ಲಿ ಸಹೋದ್ಯೋಗಿಗಳು ಪ್ರಯಾಣ ಮಾಡುವುದಕ್ಕೆ ಬಿಡದೆ ನಮ್ಮ ಬಸ್‌ನಲ್ಲಿ ನಿಮಗೆ ಅನುಮತಿ ಇಲ್ಲ ಎಂದು ಗಲಾಟೆ ಮಾಡಿ ಕೆಳಗಿಳಿಸಿ ಅವಮಾನಿಸುವುದು ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಕಾರಣ ನೌಕರರು ನೌಕರರ ನಡುವೆಯೇ ಒಗ್ಗಟ್ಟಿಲ್ಲ ಎಂಬುವುದು.
ಈ ನಿಮ್ಮ ವೀಕ್‌ನೆಸ್ಸನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಸಂಘಟನೆಗಳ ಪದಾಧಿಕಾರಿಗಳು ನಿಮ್ಮನ್ನು ಒಡೆದು ಆಳುತ್ತ ತಮ್ಮ ತಿಜೋರಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ, ಸಾರಿಗೆಯ ಕೆಲ ಮೂರ್ಖರಿಗೆ ಇದು ಈವರೆಗೂ ಅರ್ಥವಾಗದೆ ಇರುವುದು ಆ ನೌಕರರ ಮೂರ್ಖತನವನ್ನು ಎತ್ತಿ ತೋರಿಸುತ್ತದೆ.
ಇದೆಲ್ಲ ಹೇಳುತ್ತಿರುವುದು ಏಕೆಂದರೆ, ಮೊನ್ನೆ ಶನಿವಾರ ತಮ್ಮ ಸಹೋದ್ಯೋಗಿಯೊಬ್ಬರು ಬಿಎಂಟಿಸಿ ಸಂಸ್ಥೆ ಕೊಡುವ ಒಂದು ತಿಂಗಳ ಉಚಿತ ಕುಟುಂಬದ ಬಸ್‌ಪಾಸ್ ಪಡೆದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹದೇಶ್ವರ ಬೆಟ್ಟಕ್ಕೆ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹೋಗುತ್ತಿದ್ದರು. ಈ ವೇಳೆ ಪಾಸ್ ಚೆಕ್ ಮಾಡಿದ ನಿರ್ವಾಹಕ ಈ ಪಾಸ್‌ನಲ್ಲಿ ಇರುವ ಮಕ್ಕಳಿಗೂ ನೀನು ಕರೆದುಕೊಂಡು ಹೋಗುತ್ತಿರುವ ಮಕ್ಕಳಿಗೂ ಹೋಲಿಕೆ ಇಲ್ಲ ಎಂದು ಹೇಳಿ ಗಲಾಟೆ ಮಾಡಿದ್ದಾರೆ.
ಇದರಿಂದ ಗಾಬರಿಗೊಂಡ ಸಹೋದ್ಯೋಗಿ ಮಕ್ಕಳ ಆಧಾರ್ ಕಾರ್ಡ್ ಕೂಡ ತೋರಿಸಿ ಇಲ್ಲ ನೋಡಿ ಇವು ನಮ್ಮ ಮಕ್ಕಳೆ ಎಂದು ವಿವರಣೆ ಕೂಡ ಕೊಟ್ಟಿದ್ದಾರೆ. ಆದರೆ, ಅದನ್ನು ಕೇಳಿಸಿಕೊಳ್ಳದ ನಿರ್ವಾಹಕರು ಸಾರ್ವಜನಿಕರು ಹಾಗೂ ಕುಟುಂಬದವರ ಎದುರೆ ಸಹೋದ್ಯೋಗಿಗೆ ಅವಮಾನ ಮಾಡಿದ್ದಾರೆ.
ಈ ರೀತಿ ತಮ್ಮ ಸಹೋದ್ಯೋಗಿಗೆ ಅವಮಾನ ಮಾಡಿದ ನಿರ್ವಾಹಕ ಕೋಲಾರ ವಿಭಾಗದವರು. ಅವಮಾನಕ್ಕೊಳಗಾದವರು ಮಹೇಶ್, ಘಟಕ 33 ಬಿಎಂಟಿಸಿ ಚಾಲಕ. ಇವರು ಕುಟುಂಬ ಸಮೇತ ಸಂಸ್ಥೆಯೇ ನೀಡಿರುವ ಉಚಿತ ಬಸ್‌ಪಾಸ್ ಪಡೆದು ಬೆಟ್ಟಕ್ಕೆ ಹೋಗುವಾಗ ಈ ನಿರ್ವಾಹಕ ಅವಮಾನ ಮಾಡಿರುವುದು ಎಷ್ಟು ಸರಿ?
ಉಚಿತ ಪಾಸ್ಸನ್ನು ಸಹ ನೋಡಿ ಪಾಸ್ಸಲ್ಲಿರುವ ಮಕ್ಕಳು ಮಗು ಹೋಲಿಕೆ ಇಲ್ಲ ನಿಮ್ಮದಲ್ಲ ಎಂದು ಹೇಳಿ ಅವಮಾನಿಸಿದರೆ ಆ ಕ್ಷಣ ಏನನಿಸುವುದಿಲ್ಲ. ಆದರೂ ತಾಳ್ಮೆ ಕಳೆದುಕೊಳ್ಳ ಮಹೇಶ್ ಕೂಡಲೇ ಆಧಾರ್ ಕಾರ್ಡ್ ಎಲ್ಲವನ್ನು ತೋರಿಸಿದ್ದಾರೆ. ಆದರೂ ಸಹ ಬಸ್ಸಿನಲ್ಲಿರುವ ಎಲ್ಲ ಪ್ಯಾಸೆಂಜರ್‌ಗಳಿಗೆ ಈ ನಿರ್ವಾಹಕ ತೋರಿಸಿ ಅವಮಾನಿಸಿದ್ದಾರೆ.
ಬಳಿಕ ಮಹೇಶ್ ಅವರು ಡಿಪೋಗೆ ಫೋನ್ ಮಾಡಿ ಕೇಳಿ ಎಂದು ಹೇಳಿದ್ದಾರೆ. ಕಾಲ್ ಸೆಂಟರ್ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ ಇವರು ಸಂಸ್ಥೆಯ ಒಬ್ಬ ನಿಷ್ಠಾವಂತ ನೌಕರನಿಗೆ ಅವಮಾನಿಸಿದ್ದು ಸರಿಯಲ್ಲ. ಹೀಗಾಗಿ ನಿರ್ವಾಹಕರಿಗೆ ಶಿಕ್ಷೆ ಆಗಲೇ ಬೇಕು. ಸರಿಯಾಗಿ ಪರಿಶೀಲಿಸದೆ ಈ ರೀತಿ ನಡೆದುಕೊಂಡಿರುವುದಕ್ಕೆ ಕೋಲಾರ ವಿಭಾಗದ ಅಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳು ಶಿಕ್ಷೆ ಕೊಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಅಲ್ಲದೆ ಈ ರೀತಿ ತಮ್ಮ ಸಹೋದ್ಯೋಗಿಗಳನ್ನೇ ಅವಮಾನಿಸುವ ನಡೆ ಇನ್ನುಮೇಲಾದರೂ ನಿಲ್ಲಬೇಕು. ನಮ್ಮರೆ ನಮ್ಮನ್ನು ಜನರ ಮಧ್ಯೆಯೆ ಕೀಳಾಗಿ ಕಾಣುವುದು ಜನರಿಗೆ ಯಾವ ಸಂದೇಶ ರವಾಸನಿಸಿದಂತಾಗುತ್ತದೆ ಎಂಬುದರ ಬಗ್ಗೆಯೂ ಅರಿತುಕೊಳ್ಳಬೇಕು.
ಮೊದಲು ನಮ್ಮವರನ್ನು ಪ್ರೀತಿಸುವುದ ಕಲಿಯಬೇಕು. ಹೀಗಾದಾಗ ಮಾತ್ರ ಸಂಸ್ಥೆಯ ನೌಕರರಿಗೆ ಗೌರವ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಜನರ ಎದುರೇ ಮಾನ ಹರಾಜುಹಾಕಿಕೊಂಡು ತಮಗೆ ತಾವೇ ಅವಮಾನಕ್ಕೆ ಒಳಗಾಗಬೇಕಾಗುತ್ತದೆ ಎಂದು ಪ್ರಜ್ಞಾವಂತ ನೌಕರರು ತಿಳಿಹೇಳಿದ್ದಾರೆ.
ಇನ್ನು ಸಂಸ್ಥೆಯಿಂದ ಫ್ಯಾಮಿಲಿ ಪಾಸ್ ಪಡೆದುಕೊಳ್ಳುವವರು ಇತ್ತೀಚಿನ ಫೋಟೋಗಳನ್ನು ಕೊಟ್ಟು ಪಾಸ್ ಪಡೆದುಕೊಳ್ಳುವುದು ಒಳ್ಳೆಯದು ಇಲ್ಲದಿದ್ದರೆ ಈ ರೀತಿ ಕಂಡಕ್ಟರ್‌ಗಳಿಗೆ ಗೊಂದಲವಾಗಿ ಫೋಟೋದಲ್ಲಿ ಇರುವುದು ಇವರೋ ಅಲ್ಲವೋ ಎಂದು ಅನುಮಾನಗೊಂಡು ಈ ರೀತಿ ಬೇಡದ ಕಿರಿಕುಗಳು ಉಂಟಾಗುತ್ತವೆ. ಹೀಗಾಗಿ ಪಾಸ್ ಪಡೆಯುವ ಸಹೋದ್ಯೋಗಿಗಳು ಈ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.