NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

KSRTC: ಅಧ್ಯಕ್ಷರ ದಿಕ್ಕು ತಪ್ಪಿಸಲು ಹೊರಟ ಜಂಟಿ ಸಮಿತಿ- ನೌಕರರ ಸಮಸ್ಯೆ ಹೇಳುವ ಬದಲು ಬೇಡದ ವಿಷಯಗಳ ಬಗ್ಗೆ ಚರ್ಚೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಹಾಳುಮಾಡುವಂತಹ ಸಂಘಟನೆಗಳು ಇನ್ನು ನಿಗಮಗಳಲ್ಲಿ ಇರುವುದು ನೌಕರರ ಮತ್ತು ಅಧಿಕಾರಿಗಳ ಪಾಲಿಗೆ ದುರಂತವೇ ಸರಿ.

ಪ್ರಮುಖವಾಗಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ನಮಗೆ ನಾಲ್ಕೂ ವರ್ಷಕ್ಕೊಮ್ಮೆ ಮಾಡುತ್ತಿರುವ ಈ ಅಗ್ರಿಮೆಂಟ್‌ ಸಂದರ್ಭದಲ್ಲಿ ಆಗುವ ಮುಷ್ಕರ, ಪ್ರತಿಭಟನೆ ವೇಳೆ ನೂರಾರು ನೌಕರರು ವಜಾ, ಅಮಾನತು, ವರ್ಗಾವಣೆಯಂಥ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಇಂಥ ವ್ಯವಸ್ಥೆ ನಮಗೆ ಬೇಡ ಎಂದು ಹೇಳುತ್ತಿದ್ದಾರೆ.

ಆದರೆ, ಕೆಲ ಸಂಘಟನೆಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕೆ ಈ ಅಗ್ರಿಮೆಂಟ್‌ ಮಾಡಲೇ ಬೇಕು ಎಂಬ ಹಠಕ್ಕೆ ಬಿದ್ದಿವೆ. ಇದರಿಂದ ಈ ಸಂಘಟನೆಗಳಿಗೆ ಕೋಟ್ಯಂತರ ರೂಪಾಯಿ ಲಾಭವಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ನೌಕರರಿಗೆ ಇದು ಮಾರಕವಾಗಿ ಪರಿಣಮಿಸುತ್ತಿದೆ. ಇದನ್ನು ಸರಿ ಮಾಡಬೇಕಾದ ಈ ಸಂಘಟನೆಗಳೆ ನೌಕರರಿಗೆ ಏನಾದರಾಗಲಿ ನಮ್ಮ ಅಸ್ಥಿತಿತ್ವ ಉಳಿಯುವುದೇ ಮುಖ್ಯ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ.

ನೌಕರರಿಗೆ ಒಳ್ಳೆಯದನ್ನೇ ಮಾಡಬೇಕು ಎಂಬ ನಿಟ್ಟಿನಲ್ಲಿ ಹುಟ್ಟಿಕೊಂಡಿರುವ ಈ ಸಂಘಟನೆಗಳು ತಮ್ಮ ಮೂಲ ಆಶಯಗಳನ್ನೇ ಮರೆತು ಸ್ವಾರ್ಥಿಗಳಾಗುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ.

ನೋಡಿ ಕೆಎಸ್‌ಆರ್‌ಟಿಸಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಗುಬ್ಬಿ ಶಾಸಕ ಶ್ರೀನಿವಾಸ್‌ (ವಾಸು) ಅವರಿಗೆ ಸಂಸ್ಥೆಯಲ್ಲಿ ನೌಕರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಅದನ್ನು ಸರಿಪಡಿಸುವ ಬದಲಿಗೆ ಜಂಟಿ ಸಮಿತಿಯ ಪದಾಧಿಕಾರಿಗಳು ಬೇಡದ ವಿಷಯವನ್ನು ಮಾತನಾಡಿಕೊಂಡು ಅವರಿಗೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನು ನೋಡಿದರೆ ಇವರು ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೋ ಇಲ್ಲ ಸಂಘಟನೆಗಳ ಮೂಲಕ ತಾವು ಆರ್ಥಿಕವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ.

ಕಳೆದ 2021ರ ಮುಷ್ಕರದ ವೇಳೆ 3 ಸಾವಿರಕ್ಕೂ ಹೆಚ್ಚು ನೌಕರರು ಬೀದಿಗೆ ಬೀಳಲು ಯಾರು ಕಾರಣ ಎಂಬುವುದು ಪ್ರತಿಯೊಬ್ಬ ನೌಕರರಿಗೂ ಗೊತ್ತಿದೆ. ಆದರೆ ಅದನ್ನು ಮರೆ ಮಾಚುವ ನೆಪದಲ್ಲಿ ಮತ್ತೆ ನೌಕರರನ್ನು ಮೂರ್ಖರನ್ನಾಗಿಸುವ ನಿಟ್ಟಿನಲ್ಲಿ ನೌಕರರ ಮುಂದೆ ಒಂದು ರೀತಿ ಮಾತು ಅಧ್ಯಕ್ಷರ ಬಳಿ ಮತ್ತೊಂದು ರೀತಿ ಮಾತನಾಡಿ ನೌಕರರನ್ನು ಸಮಸ್ಯೆಯ ಸುಳಿಯಲ್ಲೇ ಸುತ್ತುವಂತೆ ಮಾಡುವ ಹುನ್ನಾರ ಜಂಟಿ ಸಮಿತಿಯ ಪದಾಧಿಕಾರಿಗಳಲ್ಲಿ ಏಕೆ ಇದೆಯೋ ಗೊತ್ತಿಲ್ಲ.

ಒಟ್ಟಾರೆ ಜಂಟಿ ಸಮಿತಿ ಪದಾಧಿಕಾರಿಗಳು ನೌಕರರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದರಲ್ಲಿ ಬೇರೆ ಮಾತಿಲ್ಲ. ಕಾರಣ ಸಭೆ ಸಮಾರಂಭಗಳಲ್ಲಿ ನೌಕರರ ಪರವಾಗಿದ್ದೇವೆ ಎಂಬ ನಿಟ್ಟಿನಲ್ಲಿ ಭಾಷಣ ಮಾಡುತ್ತಾರೆ. ಆದರೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಹಾಗೂ ಸಚಿವರ ಬಳಿ ನೌಕರರಿಗೆ ಯಾವುದೇ ಸಮಸ್ಯೆ ಇಲ್ಲ. ಈಗ ಅವರಿಗೆ ಕೊಡುತ್ತಿರುವ ಸೌಲಭ್ಯಗಳೇ ಹೆಚ್ಚು ಎಂಬಂತೆ ವರ್ತಿಸುವ ಮೂಲಕ ಅವರ ದಾರಿ ತಪ್ಪಿಸುತ್ತಿದ್ದಾರೆ.

ಅದಕ್ಕೆ ತಾಜಾ ನಿದರ್ಶನ ಎಂದರೆ ಕೆಇಬಿ ನೌಕರರಿಗೆ ಈಗಾಗಲೇ ವೇತನ ಹೆಚ್ಚಿದ್ದರೂ ಅವರಿಗೆ ಶೇ.20ರಷ್ಟು ವೇತನ ಹೆಚ್ಚಳ ಮಾಡಲಾಯಿತು. ಅದೇ ವೇಳೆ ಸಾರಿಗೆ ನೌಕರರಿಗೆ ಶೇ.15ರಷ್ಟು ಹೆಚ್ಚಳ ಮಾಡಲಾಯಿತು. ಇದನ್ನು ನೋಡಿದರೆ ಗೊತ್ತಾಗುತ್ತದೆ. ಇಲ್ಲಿ ಯಾರು ಕುತಂತ್ರ ಮಾಡಿದರು ಎಂಬುವುದು.

ವೇತನ ಹೆಚ್ಚಳದ ವೇಳೆ ನಡೆದ ಸಭೆಗಳಲ್ಲಿ ಶೇ.22ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ಧರಿದ್ದರು ಆದರೆ, ಅವರಿಗೆ ಅಷ್ಟು ಮಾಡಬೇಡಿ ಎಂದು ಕೆಲವರು ದಿಕ್ಕು ತಪ್ಪಿಸಿದರೆ ಎಂಬ ಬಗ್ಗೆ ಅಲ್ಲೇ ಇದ್ದ ಸಂಘಟನೆಗಳ ಪ್ರುಮುಖರೊಬ್ಬರು ನೊಂದು ವಿಜಯಪಥಕ್ಕೆ ತಿಳಿಸಿದ್ದಾರೆ.

ಈ ರೀತಿ ನೌಕರರಿಗೆ ಅನ್ಯಾಯ ಮಾಡುವುದಕ್ಕೆ ಈ ಸಂಘಟನೆಗಳಿಗೆ ಹೇಗೆ ಮನಸ್ಸಾಗುತ್ತದೋ ಪಾಪ ಇವರನ್ನು ನಂಬಿ ನೌಕರರ ಹಾಳಾಗುತ್ತಿದ್ದಾರೆ ಅಷ್ಟೆ. ಇನ್ನು ಯಾವುದೇ ಸಂಘಟನೆಯ ಮಾತನ್ನು ಕೇಳದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ನೌಕರರ ಸಮಸ್ಯೆಗೆ ಸ್ಪಂದಿಸುತ್ತಿದ್ದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಾಮಾಣಿಕ ಅಧಿಕಾರಿ ಜಿ.ಸತ್ಯವತಿ ಅವರನ್ನು ತಮ್ಮ ಕುತಂತ್ರ ಬುದ್ಧಿ ಉಪಯೋಗಿಸಿ ವರ್ಗಾವಣೆ ಮಾಡಿಸುವಲ್ಲಿ ಇದೆ ಜಂಟಿ ಸಂಘಟನೆಯ ಪದಾಧಿಕಾರಿಗಳು ಸಫಲರಾದರು. ಈ ಬಗ್ಗೆ ಸ್ವತಃ ಅನಂತ ಸುಬ್ಬರಾವ್‌ ಅವರೇ ನೌಕರರ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

ಇಂಥ ನೌಕರರ ವಿರೋಧಿ ಸಂಘಟನೆಗಳಿಂದ ನೌಕರರ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ನಂಬಿಕೊಂಡರೆ ನಿಮಗಿಂತ ಮೂರ್ಖರು ಮತ್ತೊಬ್ಬರಿರಲಾರರು. ಇನ್ನಾದರೂ ಎಚ್ಚೆತ್ತುಕೊಂಡು ಇಂಥ ಕುಂತಂತ್ರ ಬುದ್ಧಿಯ ಜನರು ಕರೆ ಕೊಡುವ ಸಭೆ ಸಮಾರಂಭ ಮತ್ತು ಪ್ರತಿಭಟನೆಗಳು, ಮುಷ್ಕರಗಳಿಗೆ ಹೋಗುವುದಕ್ಕೂ ಮುನ್ನಾ ಯೋಚಿಸಿ ಮುಂದಡಿಯಿಡಿ ಎಂದು ಪ್ರಜ್ಞಾವಂತ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್