
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದಲ್ಲಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಫಾರಂ-4 ಬದಲಾಯಿಸಿ ನೌಕರರಿಗೆ ಕಳೆದ 2017ರಿಂದ ಈವರೆಗೂ ಸರಿಯಾಗಿ ಓಟಿ ಕೊಡದೆ ಸುಮಾರು 12 ಕೋಟಿ ರೂ.ಗಳನ್ನು ನಷ್ಟಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 2017ಕ್ಕೂ ಹಿಂದೆ 4 ನೌಕರರಿಗೆ ಡ್ಯೂಟಿ ಮತ್ತು ಓವರ್ ಟೈಮ್ ಡ್ಯೂಟಿಗೆ ತಕ್ಕ ಓಟಿ ಕೊಡುತ್ತಿದ್ದರು. ಆದರೆ 2017 ಮತ್ತು ನಂತರ ಬಂದ ಅಧಿಕಾರಿಗಳು ಮನಬಂದಂತೆ ಫಾರಂ-4 ಬದಲಾಯಿಸಿ ಈ ಹಿಂದೆ ಇದ್ದ 4ರಿಂದ 5 ಗಂಟೆ ಓಟಿಯನ್ನು ಕೇವಲ 1.30 ಗಂಟೆಗೆ ಬದಲಾಯಿಸಿ ಚಾಲನಾ ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಓಟಿ ಕೊಡದೆ ಕಾಡುತ್ತಿದ್ದಾರೆ.
ಇನ್ನು ಈ ಅಧಿಕಾರಿಗಳು ದರ್ಪಕ್ಕೆ ನೌಕರರ ಅಮಾನತಿಗೂ ಒಳಗಾಗುತ್ತಿದ್ದಾರೆ. ನಾವು ಮಾಡಿದ್ದೇ ರೂಲ್ಸ್ ಅದನ್ನು ನೀನು ಪಾಲಿಸಬೇಕು ಅಷ್ಟೆ ಎಂದು ನೌಕರರಿಗೆ ತಾಕೀತು ಮಾಡುವ ಮೂಲಕ ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು. ಇನ್ನು ಸಾರಿಗೆ ನಿಗಮಗಳಲ್ಲಿ ಓವರ್ ಟೈಂ ಕೆಲಸಕ್ಕೆ ಅಂದರೆ ಎಂಟು ಗಂಟೆ ಕರ್ತವ್ಯದ ಬಳಿಕ ಮಾಡುವ ಡ್ಯೂಟಿಗೆ ಒಂದೂವರೆ ಪಟ್ಟು ಹೆಚ್ಚಾಗಿ ವೇತನ ಕೊಡಬೇಕು ಆದರೆ, ಆ ರೀತಿ ಮಾಡದೆ 4-5 ಗಂಟೆ ಮಾಡಿದರೂ ಬಿಡಿಗಾಸುಕೊಟ್ಟು ನೌಕರರನ್ನು ಯಾಮಾರಿಸುತ್ತಿದ್ದಾರೆ.
ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಳೆದ 30-40 ದಶಕಗಳಿಂದ ಚಾಲನಾ ಸಿಬ್ಬಂದಿಗಳಿಗೆ ನಷ್ಟವಾಗುತ್ತಿದ್ದರು ಸುಮ್ಮನಿದ್ದಾರೆ. ಇದನ್ನು ಗಮನಿಸಿದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರಿಗೆ ನೌಕರರ ಪರ ಇರುವ ಹಳೆಯ ಮತ್ತು ಹೊಸ ಸಂಘಟನೆಗಳ ಜವಾಬ್ದಾರಿ ಏನು? ಎಂಬುವುದೆ ಗೊತ್ತಾಗುತ್ತಿಲ್ಲ.
ಇನ್ನು ಕಡೂರು ಘಟಕದ ವಿಷಯಕ್ಕೆ ಬಂದರೆ, ಇಲ್ಲಿ 60 ರಿಂದ 70 ಅನುಸೂಚಿಗಳಿದ್ದು, ಈ ರೂಟ್‌ಗಳಲ್ಲಿ ಬಹುತೇಕ ಎಲ್ಲ BAR ಡ್ಯೂಟಿಗಳಾಗಿದ್ದು ಬೆಳಗ್ಗೆ 7ಗಂಟೆಗೆ ಡ್ಯೂಟಿ ಪ್ರಾರಂಭವಾದರೆ ನಾಳೆ ರಾತ್ರಿ 7.30ಕ್ಕೆ ಮುಗಿಯುತ್ತವೆ. ಅದರೆ ಕರ್ತವ್ಯದ ಅವಧಿ 34ರಿಂದ 35 ಗಂಟೆಗಳಿವೆ.
ಈ 34ರಿಂದ 35 ಗಂಟೆಗಳು ಬಸ್‌ನಲ್ಲೇ ಕಳೆಯುತ್ತಿದ್ದು ನೌಕರರಿಗೆ ಯಾವುದೇ ಸಮಯ ಸಿಗುತ್ತಿಲ್ಲ. ರಾತ್ರಿ ಬಸ್‌ನಲ್ಲೇ ಮಲಗಬೇಕು ಮನೆಗೆ ಹೋಗಲಿಕ್ಕೆ ಬರಲಿಕ್ಕೂ ಸರಿಯಾಗಿ ಸಮಯ ಸಿಗುತ್ತಿಲ್ಲ. ಆದರೆ, ಈ 34ರಿಂದ 35 ಗಂಟೆಗಳು ಬಸ್‌ನಲ್ಲೇ ಇದ್ದರೂ ಮೊದಲದಿನ 8 ಗಂಟೆ ಮತ್ತು ಎರಡನೇ ದಿನ 8 ಗಂಟೆ ಮತ್ತು ರಾತ್ರಿ ಮಲಗಲಿಕ್ಕೆ 8 ಗಂಟೆ ಎಂದು ಒಟ್ಟಾರೆ 24ಗಂಟೆ ತೆಗೆದರು ಹಾಕಿದರು, ಉಳಿದ ಇನ್ನೂ 10ರಿಂದ 11 ಗಂಟೆ ಹೆಚ್ಚುವರಿಯಾಗಿ ನೌಕರರು ಡ್ಯೂಟಿ ಮಾಡುತ್ತಿದ್ದಾರೆ.
ಅಂದರೆ 10ರಿಂದ 11 ಗಂಟೆಗಳು ಓಟಿ ಮಾಡುತ್ತಿದ್ದರೂ ನೌಕರರಿಗೆ ಕೇವಲ 1.30ಗಂಟೆಯಿಂದ 2ಗಂಟೆಯಷ್ಟೇ ಓಟಿ ಲೆಕ್ಕ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ಮೊದಲದಿನ 13ಗಂಟೆಗಳು ನಿರಂತರವಾಗಿ ಮತ್ತು ಮಾರನೆಯ ದಿನ 13ಗಂಟೆಗಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸರಿಯಾದ ಓಟಿ ಕೊಡದೆ ಈ ಅಧಿಕಾರಿಗಳು ನೌಕರರಿಂದ ದುಡಿಸಿಕೊಳ್ಳುತ್ತಿದ್ದಾರೆ.
ಅಂದರೆ 9ರಿಂದ 9.30ಗಂಟೆಗಳು ಫ್ರೀಯಾಗಿ ನೌಕರರು ದುಡಿಯುತ್ತಿದ್ದಾರೆ. ಹೀಗೆ ಓವರ್ ಟೈಂ ಡ್ಯೂಟಿ ಮಾಡುತ್ತಿರುವ ನೌಕರರ ಜಾಗದಲ್ಲಿ ಈ ಅಧಿಕಾರಿಗಳನ್ನು ಸುಮ್ಮನೇ ನೀವು ಡ್ಯೂಟಿ ಮಾಡಬೇಡಿ ನಮ್ಮ ಜೊತೆ ಒಂದು ದಿನ ಬಸ್‌ನಲ್ಲಿ ಬಂದು ಹೋಗಿ ಸಾಕು ಎಂದು ಹೇಳಬೇಕು.
ಎಸಿ, ಫ್ಯಾನ್ ಕೆಳಗೆ ಕುಳಿತು ಫಾರಂ-4ಅನ್ನು ತಮಗಿಷ್ಟ ಬಂದರೀತಿ ಬದಲಾಯಿಸಿ ಈ ರೀತಿ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರು ಮಾಡಿದ ಕೆಲಸಕ್ಕೆ ತಕ್ಕ ಓಟಿಯನ್ನು ಕೊಡದೆ ದರ್ಪಮೆರೆಯುತ್ತಿರುವುದಕ್ಕೆ ನಿಮಗ ನಾಚಿಕೆ ಆಗುವುದಿಲ್ಲವೆ? ಖಾಸಗಿ ಕಂಪನಿಗಳಲ್ಲಿ ಡ್ಯೂಟಿ ಟೈಂ ಮಗಿದ ಮೇಲೆ ಓಟಿ 2ಗಂಟೆ ಓಟಿ ಮಾಡಿದರೆ ವೇತನ ಒಂದೂವರೆ ಪಟ್ಟು ಹೆಚ್ಚು ವೇತನ ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲ? ಅಥವಾ ಈ ಕಾರ್ಮಿಕ ನಿಯಮ ನಿಮಗೆ ಅನ್ವಯವಾಗುವುದಿಲ್ಲವೇ?
ಅಧಿಕಾರಿಗಳು ಅತಿ ಬುದ್ಧಿವಂತರ ರೀತಿ ನಡೆದುಕೊಳ್ಳುವ ಮೂಲಕ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರ ಶ್ರಮಕ್ಕೆ ಸಿಗಬೇಕಾದ ಫಲವನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ಇನ್ನಾದರೂ ಕನಿಷ್ಟಪಕ್ಷ ಅವರ ಶ್ರಮಕ್ಕೆ ತಕ್ಕ ಓಟಿಯನ್ನು ಕೊಡಬೇಕಿದೆ.
ಇನ್ನು ಪ್ರಮುಖವಾಗಿ ಇಲ್ಲಿ 204 ಕಿಮೀಗೆ 2.15ಗಂಟೆ ಓಟಿ ಕೊಡುತ್ತಿದ್ದು, 610 ಮತ್ತು 600 ಕಿಮಿಗೆ ಕೇವಲ 1.45ಗಂಟೆ ಮತ್ತು 1.30ಗಂಟೆ ಓಟಿ ಕೊಡುತ್ತಿದ್ದಾರೆ. ಇದು ಕಡೂರು ಡಿಪೋನಲ್ಲೇ ಈ ರೀತಿ ತಾರತಮ್ಯತೆ ಮೆರೆಯುತ್ತಿದ್ದಾರೆ ಅಧಿಕಾರಿಗಳು, ಇದು ಮೊದಲು ನಿಲ್ಲಬೇಕು ನಮಗೆ ಓಟಿಗೆ ತಕ್ಕ ವೇತನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
