CRIMENEWSನಮ್ಮರಾಜ್ಯ

KSRTC ಕೋಲಾರ: ಮುಷ್ಕರ ಹತ್ತಿಕ್ಕಲು ಕಿಡಿಗೇಡಿಗಳಿಂದ ಬಸ್‌ಗೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿಪುಡಿ

ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮೇಲೆ ಕಲ್ಲು ತೂರುವ ಮೂಲಕ ಬಸ್‌ನ ಗ್ಲಾಸ್‌ಗಳನ್ನು ಕಿಡಿಗೇಡಿಗಳು ಒಡೆದಿರುವ ಘಟನೆ ನಗರ ಬಸ್‌ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಯುತ್ತಿರುವ ಮುಷ್ಕರವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದು ಬಸ್‌ಗಳ ಮೇಲೆ ಕಲ್ಲು ತೂರಟ ಮಾಡುತ್ತಿದ್ದಾರೆ.

ಇನ್ನು ನಿನ್ನೆ ಸಂಜೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ ಮೇಲೆ ಕಲ್ಲು ತೂರಿ ಬಸ್‌ನ ಮುಂದಿನ ಗ್ಲಾಸ್‌ ಅನ್ನು ಜಖಂ ಮಾಡಿದ್ದಾರೆ. ಬಸ್‌ಗಳು ಸಾರ್ವಜನಿಕ ಆಸ್ತಿಗಳಾಗಿದ್ದು, ಈ ರೀತಿಯ ಕೃತ್ಯ ನಡೆಸುವುದು ಹಾಗೂ ಕಾನೂನು ಬಾಹಿರವಾಗಿ ವರ್ತಿಸುವ ಕಿಡಿಕೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಪೊಲೀಸರು ತಿಳಿಸಿದ್ದಾರೆ.

ಮುಷ್ಕರದ ಕಾವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತೀವ್ರತೆ ಪಡೆದುಕೊಂಡಿದೆ. ಆದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಸಾಮಾನ್ಯವಾಗಿ ಸಂಚರಿಸುತ್ತಿವೆ. ಅಂದರೆ, ಈವರೆಗೂ ಬಿಎಂಟಿಸಿಯ ಬಸ್‌ಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಬಸ್‌ಗಳು ಡಿಪೋದಲ್ಲೇ ಇದ್ದು, ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಓಡಾಡುತ್ತಿವೆ ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಈ 11.30ಕ್ಕೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಭೆ ಆಯೋಜಿಸಿದ್ದು, ಹೈ ಕೋರ್ಟ್‌ ನಿನ್ನೆ  ನೀಡಿದ ನಿರ್ದೇಶನದ ಬಗ್ಗೆ ತಮ್ಮ ಕಾನೂನು ಸಲಹೆಗಾರರ ಜತೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜತೆಗೆ ಕರೆ ನೀಡಿರುವ ಮುಷ್ಕರವನ್ನು ಮುಂದುವರಿಸಬೇಕೋ ಇಲ್ಲ ಏನು ಮಾಡಬೇಕು ಎಂಬುದರ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಸಾರಿಗೆ ನೌಕರರ ಹೋರಾಟಕ್ಕೆ KSRTCಯ ಬಹಳಷ್ಟು ಅಧಿಕಾರಿಗಳು ಸಾಥ್‌ ನೀಡುತ್ತಿದ್ದು, ನಮಗೂ ವೇತನ ಹೆಚ್ಚಳವಾಗಬೇಕು ಎಂದು ಹೇಳುತ್ತಿದ್ದಾರೆ. ಜತೆಗೆ ನಾವು ಕೂಡ ಇಲ್ಲಿಯವರೆಗೂ ಸರ್ಕಾರ ನಮ್ಮ ಕೂಗಿಗೆ ಧ್ವನಿಯಾಗುತ್ತದೆ ಎಂದು ಭಾವಿಸಿದ್ದೆವು ಆದರೆ ಸರ್ಕಾರ ಸ್ಪಂದಿಸುತ್ತಿದ್ದಲ್ಲ ಎಂಬ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರ ಬೆಂಬಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇದು ಸಾರಿಗೆ ನಿಗಮಗಳ ಇತಿಹಾಸದಲ್ಲೇ ಮೊದಲು. ಏಕೆಂದರೆ ಈವರೆಗೂ ಅಧಿಕಾರಿಗಳು ವೇತನ ಹೆಚ್ಚಳ ಸಂಬಂಧ ಹೋರಾಟವನ್ನು ಬೆಂಬಲಿಸಿಯೇ ಇಲ್ಲ. ಆದರೆ, ಈ ಬಾರಿ ದೃಢ ನಿರ್ಧಾರ ತೆಗೆದುಕೊಂಡು ನಮಗೂ ಅನ್ಯಾಯವಾಗುತ್ತಿದೆ ಎಂದು ಸಿಡಿದೆದ್ದಿರುವುದು ಅಚ್ಚರಿಯ ಜತೆಗೆ ಒಳ್ಳೆಯ ಬೆಳವಣಿಗೆ ಕೂಡ ಎಂದು ನೌಕರರು ಹೇಳುತ್ತಿದ್ದಾರೆ.

Megha
the authorMegha

Leave a Reply

error: Content is protected !!