KSRTC ಕೋಲಾರ: ನೌಕರರ ದುಡಿಮೆಗೆ ತಕ್ಕ ವೇತನಕೊಡದೆ ಕಾಡುತ್ತಿರುವ ಡಿಸಿ, ಡಿಟಿಒಗಳ ಅಮಾನತು ಮಾಡಿ- ಸಾರಿಗೆ ಸಚಿವರಿಗೆ ಸೈಕಲ್ ರೆಡ್ಡಿ ಪತ್ರ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ನಿಯಂತ್ರಣಾಧಿಕಾರಿಗಳ ಅಧಿಕಾರ ದುರ್ಬಳಕೆ, ನೌಕರರಿಗೆ ಕಿರುಕುಳ ಮತ್ತು ಲಂಚಾವತಾರ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಜಾಗೊಂಡ ನೌಕರ ರಾಮಚಂದ್ರರೆಡ್ಡಿ (ಸೈಕಲ್ ರೆಡ್ಡಿ) ಪತ್ರ ಬರೆದು ಮಮನವಿ ಮಾಡಿದ್ದಾರೆ.
ಸೈಕಲ್ ರೆಡ್ಡಿ ಅವರ ಪತ್ರದಲ್ಲೇನಿದೆ: ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ ಮತ್ತು ಸಂಚಲನಾಧಿಕಾರಿ ಮಂಜುನಾಥ ಅವರ ದಬ್ಬಾಳಿಕೆಗೆ ಸಿಲುಕಿರುವ ನೌಕರರಲ್ಲಿ ನಿಷ್ಠಾವಂತ ನೌಕರನಾದ ರಾಮಚಂದ್ರರೆಡ್ಡಿ (ಸೈಕಲ್ ರೆಡ್ಡಿ) ಆದ ನನಗೆ ಇವರು ಹೇಳಲಾಗದಷ್ಟು ಅನ್ಯಾಯ ಮಾಡಿದ್ದಾರೆ.
ಅಧಿಕಾರ ದರ್ಪ ಮೆರೆದಿದ್ದು ಇವರ ಬದುಕು ನೌಕರರ ಮೇಲೆ ಅವಲಂಬಿತವಾಗಿದ್ದರೂ ಸಹ ಇವರು ಮಾಡುವ ಖ*ಚಡ ಕೆಲಸಗಳನ್ನು ಮುಚ್ಚಿಕ್ಕಿ ಅಂದರೆ ನೌಕರರ ರಕ್ತ ಹೀರುವ ಒಂದು ರೀತಿ ಹೇಳಬೇಕೆಂದರೆ ದಿನನಿತ್ಯ ಯಾರಿಗೂ ಗೊತ್ತಾಗದಂತೆ ನೌಕರರಿಗೆ ವಿಷ ಪ್ರಯೋಗ ಮಾಡಿ ಬದುಕಿದ್ದರೂ ಮನಶಾಂತಿಯಿಲ್ಲದೆ ನೌಕರರು ನಿತ್ಯ ನರಳುವಂತೆ ಮಾಡುತ್ತಿದ್ದಾರೆ.
ಇನ್ನು ಸಂಸ್ಥೆಯ ಕಾನೂನುಗಳನ್ನು ಬದಿಗಿಟ್ಟು ಕೋಲಾರ ವಿಭಾಗವನ್ನು ಸ್ವಂತ ಖಾಸಗಿ ಸಂಸ್ಥೆಯಾಗಿ ಪರಿವರ್ತನೆ ಮಾಡಿಕೊಂಡು ವಿಭಾಗದಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ವಿಭಾಗಗಳಿಗೂ ದುಡಿಮೆಗೆ ತಕ್ಕ ಸಂಬಳ ಅಂದರೆ ಹೆಚ್ಚುವರಿ ಡ್ಯೂಟಿಗೆ ಹೆಚ್ಚುವರಿ (OT) ಕೊಡುತ್ತಿದ್ದು ಈ ಕೋಲಾರ ವಿಭಾಗವನ್ನು ಮಾತ್ರ ಕೇಂದ್ರ ಕಚೇರಿಯಿಂದ ದತ್ತುಪಡೆದ ರೀತಿ ಸುಮಾರು 2019ರಿಂದ ಘಟಕಗಳ ಎಲ್ಲ ಮಾರ್ಗಗಳನ್ನೂ 3 ರೀತಿಯ ಕಾರ್ಯಾಚರಣೆ ಮಾಡಿ ಒಟಿ ನಿಲ್ಲಿಸಿದ್ದಾರೆ.
ಅಂದರೆ ಒಂದನೆಯದಾಗಿ ರಿಟರ್ನ್ ಮಾರ್ಗ, ಎರಡನೆಯದಾಗಿ ಎ-ಬಿ ಮಾರ್ಗ ಮತ್ತು ಮೂರನೆಯದಾಗಿ ರಾತ್ರಿ ಪಾಳಿ ಮಾರ್ಗಗಳಾಗಿದ್ದು ಕಾನೂನು ರೀತ್ಯಾ RTOದ MTW act ಪ್ರಕಾರ 8 ಗಂಟೆ ಕೆಲಸದ ಅವಧಿಯ ನಂತರ ಹೆಚ್ಚುವರಿ ಕೆಲಸವೆಂದು ಪರಿಗಣಿಸದೆ ಅದಕ್ಕೆ ವಿರುದ್ಧವಾಗಿ ರಿಟರ್ನ್ 12 ಗಂಟೆ ಡ್ಯೂಟಿಗೆ ಒಂದೂವರೆ ಎರಡು ಗಂಟೆ ಒಟಿ ಕೊಟ್ಟು ಸುಮಾರು ಒಬ್ಬ ನೌಕರನಿಂದ 2 ಗಂಟೆ ಕಸಿಯುತ್ತಾರೆ.
ಎಬಿ ಮಾರ್ಗದಲ್ಲೂ ಕಾನೂನು ಬಾಹಿರವಾಗಿ ಹೆಚ್ಚುವರಿ ಕಿಲೋ ಮೀಟರ್ ಅಳವಡಿಸಿ ನೌಕರರ ರಕ್ತ ಹೀರುತ್ತಿದ್ದಾರೆ. ಇನ್ನು ರಾತ್ರಿ ಪಾಳಿ ಮಾರ್ಗಗಳಲ್ಲಿ ಸುಳ್ಳು ಸಿಬ್ಬಂದಿ ಬದಲಾವಣೆ (crew change) ಅಂದರೆ ಕಾನೂನು ರೀತ್ಯಾ 8ಗಂಟೆ ಡ್ಯೂಟಿ ಮುಗಿದ ಬಳಿಕ ಬದಲಿ ಸಿಬ್ಬಂದಿಯನ್ನು ಕೊಡುವ ರೀತಿ form-4ಗಳನ್ನು ಸೃಷ್ಟಿಸಿ ಬದಲಿ ಸಿಬ್ಬಂದಿಯನ್ನು ಕೊಡದೆ ಒಂದು ಡ್ಯೂಟಿನಲ್ಲಿ ಸುಮಾರು 6 ರಿಂದ 7 ಗಂಟೆ ಹೆಚ್ಚುವರಿ ಕೆಲಸವನ್ನು ತೆಗೆದುಕೊಂಡು ನೌಕರಿಗೆ ಮೋಸಮಾಡುತ್ತಿದ್ದಾರೆ.
ಇನ್ನು ನೌಕರರಿಗೆ ಕೊಡಬೇಕಾದ ಹೆಚ್ಚುವರಿ ವೇತನ ಒಟಿ ಕೊಡದೆ ಕೋಲಾರ ವಿಭಾಗಕ್ಕೆ ಲಾಭ ತೋರಿಸಿ ಕೇಂದ್ರ ಕಚೇರಿಯಿಂದ ಪ್ರಶಸ್ತಿ ಪಡೆಯುವುದು ಇವರ ಕುತಂತ್ರ ಬುದ್ದಿಗೆ ಸಾಕ್ಷಿಯಾಗಿದೆ. ಇವರ ಮೋಸದ ಕೃತ್ಯವನ್ನು ನಾನು ಸುಮಾರು 3 ವರ್ಷದ ನನ್ನಿಂದ ಹೆಚ್ಚುವರಿ ಶ್ರಮ ಸುಮಾರು 1400 ಗಂಟೆಗಳು (ಸುಮಾರು 6 ಲಕ್ಷ ರೂ ಒಟಿ ಹಣ) ನ್ಯಾಯಬದ್ಧವಾಗಿ ಕೊಡದಿದ್ದಕ್ಕೆ ನಾನು ಕಾನೂನು ರೀತ್ಯಾ ಕಾರ್ಮಿಕ ಇಲಾಖೆಯಲ್ಲಿ ನ್ಯಾಯ ಕೇಳಿದ್ದು ಇದರ ವಿಚಾರವಾಗಿ ಜಿಲ್ಲಾಧಿಕಾರಿಗಳು ಇಲ್ಲಿನ ಮೋಸದ ಕೃತ್ಯದ ಬಗ್ಗೆ ನಿಯಂತ್ರಣಾಧಿಕಾರಿಗಳಿಗೆ ಕೇಳಿದ್ದಾರೆ.
ಅವರು ಕೇಳಿದ್ದರಿಂದ ಎಲ್ಲಿ ನಮ್ಮ ಕಪಟ ಬಯಲಾಗಿ ನೌಕರರು, ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಗೊತ್ತಾಗುತ್ತದೋ ಎಂದು ನಮ್ಮ ಡ್ಯೂಟಿಗೆ ಕಂಟಕವಾಗಬಹುದೆಂದು ಗ್ರಹಿಸಿ ಸಂಸ್ಥೆಯ ಹೆಗ್ಗಳಿಕೆಗೆ 30 ವರ್ಷಗಳು ದುಡಿದು ನನ್ನನ್ನು ಹೀನಾಯವಾಗಿ ವಜಾ ಮಾಡಿದ್ದಾರೆ. ಇವರ ಮಣ್ಣು ತಿನ್ನುವ ಕೆಲಸಗಳು ಆಧಾರಗಳ ಸಹಿತ. ಇನ್ನು ನನ್ನ ಬಳಿ ಇವರ ಎಲ್ಲ ಕಪಡಗಳಿಗೂ ದಾಖಲೆಗಳಿವೆ.
ನನ್ನನ್ನು ವಜಾ ಮಾಡಿದರೆ ಇವರ ಸುಲಿಗೆ ಬದಲಾಗುವುದಿಲ್ಲವೆಂದು ಕೆಟ್ಟ ಆಲೋಚನೆಯಿಂದ ನನ್ನನ್ನು ವಜಾ ಮಾಡಿದ್ದಾರೆ. ಆದರೆ ಇವರು ನಿಷ್ಠಾವಂತರಾದರೆ ನನ್ನ ಮೇಲೆಸಗಿರುವ ಸುಳ್ಳು ಆರೋಪಗಳನ್ನು ಸಾಬೀತು ಪಡಿಸುವವರೆಗೂ ನಾನು ಹೋರಾಟವನ್ನು ನಿಲ್ಲಿಸದೆ ಕರ್ನಾಟಕದ ಎಲ್ಲ ಸಾರ್ವಜನಿಕರಿಗೂ ನೌಕರರ ಜೀವನದ ಮೇಲೆ ಚೆಲ್ಲಾಟವಾಡುವ ಈ ದರ್ಪ ಅಧಿಕಾರಿಗಳ ನಾಟಕವನ್ನು ಬಯಲು ಮಾಡುವವರೆಗೂ ಬಿಡುವುದಿಲ್ಲ.
ಇವರು ತಿಳಿದಂತೆ ನಾನು ಮಾನಸಿಕವಾಗಿ ಕುಂದು ಅವಮಾನವಾಗಿ ಯಾರಿಗೂ ಮುಖತೋರಸದೆ ಇರುತ್ತೇನೆಂದು ಇವರು ಭ್ರಮಿಸಿರಬಹುದು. ಆದರೆ ನಾನು ಕಾನೂನು ರೀತ್ಯಾ ಹೋರಾಟ ಮಾಡುವುದು ನನ್ನ ನಿಲುವಾಗಿದೆ. ನೌಕರರನ್ನು ಬದುಕಿರುವಾಗಲೇ ಕಿತ್ತು ತಿನ್ನುವ ಅಧಿಕಾರಿಗಳು (ನಿಯಂತ್ರಣಾಧಿಕಾರಿ, ಸಂಚಲನಾಧಿಕಾರಿ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿ) ನಮ್ಮ ಕೋಲಾರ ವಿಭಾಗಕ್ಕೆ ಬೇಕಾ? ನಮಗೆ ಖಂಡಿತ ಬೇಡ ಇವರನ್ನು ಕೂಡಲೇ ಅಮಾನತು ಮಾಡಿ ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...