NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?

ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗದ ಹಾಲಿ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಪ್ರಭಾರ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನೌಕರರು ತಮ್ಮ ಸಮಸ್ಯೆ ಹೇಳಿಕೊಂಡು ಹೋದರೆ ಸ್ಪಂದಿಸುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಒಬ್ಬ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿಯಾದವರು ಮೊದಲು ನೌಕರರ ಸಮಸ್ಯೆಗೆ ಸ್ಪಂದಿಸಬೇಕು. ಆದರೆ ಕೋಲಾರ ವಿಭಾಗದ ವಿಭಾಗೀಯ ಸಹಾಯಕ ಕಾರ್ಮಿಕ ಕಲ್ಯಾಣ ಟಿ.ಎಲ್. ನಾಗರಾಜ್ ಅವರು ನೌಕರರ ಸಮಸ್ಯೆಗೆ ಸ್ಪಂದಿಸದೆ ತುಂಬ ಕೀಳಾಗಿ ನಡೆಸಿಕೊಂಡಿದ್ದಾರೆ. ಅಲ್ಲದೆ 2023ರ ಡಿಸೆಂಬರ್‌ನಲ್ಲಿ ನೌಕರರೊಬ್ಬರಿಗೆ ರಜೆ ಕೊಡದೆ ಅಸಭ್ಯವರ್ತನೆ ಆರೋಪ ಮಾಡಿದ್ದು, ಈಗ ಚಾರ್ಜ್‌ ಶೀಟ್‌ ಕೊಡಿಸಲು ಮುಂದಾಗಿದ್ದಾರೆ.

ಇನ್ನು ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ಅವರು ನನಗೆ ನಿಮ್ಮ ಸಮಸ್ಯೆ ಹೇಳಬೇಡಿ ಅದು ನಿಮ್ಮ ಕರ್ಮ. ನಿಮಗೆ ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಿ. ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ರಜೆ ಕೋರಿಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದವರಿಗೆ ಕಟುಶಬ್ದಗಳಿಂದ ರೇಗಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ರಜೆ ನೀಡುವುದಿಲ್ಲ. ಅಂತರ್ಜಾಲದಲ್ಲಿ ಬಂದರೆ ತೆಗೆದುಕೊಳ್ಳಿ ಎಂದು ವಾಪಸ್‌ ಕಳಿಸಿದ್ದಾರೆ.

ಘಟನೆ ವಿವರ: ಚಾಲಕ ಕಂ ನಿರ್ವಾಹಕರೊಬ್ಬರು ಕರ್ತವ್ಯದ ವೇಳೆ ಬಸ್ಸಿಂದ ಕೆಳಗೆ ಇಳಿಯುವಾಗ ಆಯತಪ್ಪಿ ಜಾರಿ ಬಿದ್ದಿದ್ದು ಅವರ ಕೈಗೆ ನೋವಾಗಿದೆ. ಅವರು ವೈದ್ಯರ ಬಳಿ ಹೋದಾಗ ವೈದ್ಯರು ರೆಸ್ಟ್‌ ಮಾಡಬೇಕು ಎಂದು ಹೇಳಿದ್ದಾರೆ. ಅವರ ಸಲಹೆಯಂತೆ ವೈದ್ಯರು ನೀಡಿದ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವಿಶ್ರಾಂತಿ ಪಡೆಯಲು ರಜೆ ಕೋರಿಕೆ ಮನವಿ ಸಲ್ಲಿಸಿದ ನೌಕರನಿಗೆ ರಜೆ ಕೊಡದೆ ಈ ಚೀಟಿ ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಎಷ್ಟು ಬೇಕಾದರೂ ಸಿಗುತ್ತದೆ ಸ್ಕ್ಯಾನಿಂಗ್ ರಿಪೋರ್ಟ್ ಇದ್ದರೆ ತೋರಿಸು ಎಂದು ಉದ್ಧಟತನದಿಂದನ ನಡೆದುಕೊಂಡಿದ್ದಾರೆ.

ಆ ವೇಳೆ ನೌಕರ ಮೂಳೆಗೆ ಸಂಬಂಧಪಟ್ಟ  ವಿಚಾರಕ್ಕೆ ಸ್ಕ್ಯಾನಿಂಗ್ ಬರುವುದಿಲ್ಲ ಸರ್ ಎಂದು ಹೇಳಿದ್ದಕ್ಕೆ ನೀನು ನನಗೆ ಹೇಳಿ ಕೊಡ್ತೀಯಾ, ನನಗೆಲ್ಲ ಗೊತ್ತು ನಾನು ಎಷ್ಟು ವರ್ಷಗಳಿಂದ ಕೋಲಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸುಮ್ಮನೆ ಉಡಾಫೆ ಮಾತುಗಳನ್ನು ಹೇಳುತ್ತಿದ್ದೀಯ ರಜೆ ಮಂಜೂರು ಮಾಡೋದಿಲ್ಲ ಹೋಗು ನೀನು ಏನು ಬೇಕೋ ಮಾಡಕೋ ಹೋಗು, ನೀನು ಯಾರತ್ರ ಬೇಕಾದರೂ ಹೋಗು ನನಗೆ ಭಯವಿಲ್ಲ ಎಂದು ಹೇಳಿ ರಜೆ ಕೊಡದೆ ಕಳಿಸಿದ್ದಾರೆ.

ಅಲ್ಲದೆ ನಿನ್ನನ್ನು  ಏನು ಮಾಡಬೇಕೆಂದು ನನಗೆ ಗೊತ್ತು.  ಹಿರಿಯ ಅಧಿಕಾರಿಗಳಿಗೆ ವರದಿ ಕೊಟ್ಟು ನಿನ್ನನ್ನು ಕೆಲಸದಿಂದ ವಜಾ ಮಾಡಿಸುತ್ತೇನೆ. ನಿನ್ನ ಅಂತ್ಯ ನೋಡುತ್ತೇನೆ ಎಂದು ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವೈದ್ಯರ ಸಲಹೆಯಂತೆ ರಜೆ ಚೀಟಿ ನೀಡಿ ಕೋರಿಕೆ ಸಲ್ಲಿಸಲು ವಿಭಾಗೀಯ ಕಚೇರಿಯ ಸಹಾಯಕ ಕಾರ್ಮಿಕರ ಅಧಿಕಾರಿಗಳ ಕೊಠಡಿಗೆ ಹೋಗಿದ್ದ ಒಬ್ಬ ನೌಕರ ರಜೆ ನೀಡಲು ನಿವೇದಿಸಿದರೆ ನಾಗರಾಜ್ ರಜೆ ನೀಡಲು ನಿರಾಕರಿಸಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಕೆಲ ನೌಕರರನ್ನು ಬಲವಂತವಾಗಿ ಅವರ ಬಳಿ  ತಮ್ಮ ಪರವಾಗಿ ನೌಕರನ ವಿರುದ್ಧವಾಗಿ ಹೇಳಿಕೆ ನೀಡುವಂತೆ ಅಧಿಕಾರ ದುರುಪಯೋಗಪಡಿಸಿಕೊಂಡು ಅವರ ಬಳಿ ಹೇಳಿಕೆ ಪಡೆದು ಬಳಿಕ ರಜೆ ಕೇಳಲು ಹೋಗಿದ್ದ ನೌಕರನ ಮೇಲೆ ಸುಳ್ಳು ಆರೋಪ ಮಾಡಿ ವರದಿ ನೀಡಿದ್ದಾರೆ.

ಅದೇ ರೀತಿ ಮತ್ತೊಬ್ಬ ನೌಕರನ  ಮೇಲೆ ಅದೇ ಘಟಕದಲ್ಲಿ ಪ್ರಭಾರ ಘಟಕ ವ್ಯವಸ್ಥಾಪಕರಾಗಿದ್ದ ವಿಭಾಗಿಯ ಸಹಾಯದ ಕಾರ್ಮಿಕ ಕಲ್ಯಾಣ ಅಧಿಕಾರಿ ನಾಗರಾಜ್ ಅವರಿಗೆ ವಾಹನ ಪರಿವೀಕ್ಷಕರು  ತಡವಾಗಿ  ಮಾರ್ಗಕ್ಕೆ ವಾಹನವನ್ನು ನೀಡಿದ್ದಾರೆ. ಆದಕಾರಣ ಕಿಲೋಮೀಟರ್ ರದ್ದಾಗಿದೆ ಎಂದು ಹೇಳಿದರೆ. ಅದೆಲ್ಲ ನಮಗೆ ಗೊತ್ತಿಲ್ಲ. ನಾನು ಒಪ್ಪಿಕೊಳ್ಳುವುದಿಲ್ಲ  ನನಗೆ  ಸಂಪೂರ್ಣ ಕಿಲೋಮೀಟರ್ ಮಾಡಿಕೊಂಡು ಬರಬೇಕು ಎಂದು ಹೇಳಿದ್ದಾರೆ.

ಇಲ್ಲಿ ವಾಹನವನ್ನು  ತಡವಾಗಿ ಕೊಟ್ಟರೆ ಸಾಮಾನ್ಯ ಸಾರಿಗೆಗಳ ಮಾರ್ಗಗಳಲ್ಲಿ ಕಿಲೋಮೀಟರ್ ಮಾಡಲು ಹೇಗೆ ಸಾಧ್ಯ ಎಂದು ಕೇಳಿದ ನೌಕರನ ವಿರುದ್ಧವು ವರದಿ ನೀಡಿ, ಬಳಿಕ ತನಿಖೆ ಮಾಡಲು ವಿಭಾಗಿಯ ಭದ್ರತಾ ನಿರೀಕ್ಷಕರಿಗೆ ವಹಿಸಿ ತನಿಖೆ ಮಾಡಿಸಿದ್ದಾರೆ. ವರದಿಯಲ್ಲಿ ಸಾಕ್ಷಿಯಾಗಿ ಸುಮಾರು 20 ನೌಕರರ ಸಹಿ ಪಡೆದಿದ್ದಾರೆ.

ಇನ್ನು ಈ ಎಲ್ಲ 20 ನೌಕರರ ಬಳಿ ಹೇಳಿಕೆಯನ್ನು ಪಡೆದ ವಿಭಾಗೀಯ ಭದ್ರತಾ ನಿರೀಕ್ಷಕ ಡ್ಯಾನಿಯಲ್ ಆನಂದ್ ಕುಮಾರ್ ಅವರು ಕೆಲವು ನೌಕರರ ಹೇಳಿಕೆಯನ್ನು ಮಾತ್ರ ಪರಿಗಣಿಸಿ ಇನ್ನುಳಿದಂತೆ ಕೆಲವು ನೌಕರರು ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿಗಳ ವಿರುದ್ಧ ನೀಡಿರುವ ಹೇಳಿಕೆಗಳನ್ನು ವರದಿಯಲ್ಲಿ ಪರಿಗಣಿಸಿಲ್ಲ. ಏಕ ಪಕ್ಷಿಯವಾಗಿ ಅಧಿಕಾರಿಗಳ ಪರವಾಗಿ ವರದಿಯನ್ನು ತಯಾರಿಸಿ ಶಿಸ್ತು ಪಾಲನಾಧಿಕಾರಿಗಳಿಗೆ ನೀಡಿದ್ದಾರೆ.

ಈ ವರದಿಯನ್ನು ತನಿಖೆ ಮಾಡಿದ ವಿಭಾಗೀಯ ಭದ್ರತಾ ನಿರಿಕ್ಷಕರು  ಹೇಳಿಕೆ ಪಡೆದಿರುವ ನೌಕರರ ಹೇಳಿಕೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸದೆ ಅಧಿಕಾರಿಗಳ ಪರ ಏಕ ಪಕ್ಷವಾಗಿ ವಿಬಾಗೀಯ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ನೌಕರನ ವಿರುದ್ಧದ ಆರೋಪ ದೃಢಪಟ್ಟಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿದ್ದಾರೆ.

ಆದರೆ ವಿಭಾಗೀಯ  ನಿಯಂತ್ರಣಾಧಿಕಾರಿಗಳು ಸಂಪೂರ್ಣ ವರದಿಯನ್ನು ಪರಿಶೀಲಿಸಿ ನೊಂದ  ನೌಕರರಿಗೆ ನ್ಯಾಯ ಕೊಡಬೇಕಿದೆ. ಆ ನಿಟ್ಟಿನಲ್ಲಿ ಡಿಸಿ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ನೊಂದ ನೌಕರರು ಕಾಯುತ್ತಿದ್ದಾರೆ.

ಒಟ್ಟಾರೆ ಇಲ್ಲಿ ನೌಕರರ ಪರವಾಗಿ ನಿಲ್ಲಬೇಕಾದ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ನೌಕರರ ವಿರುದ್ಧ ನಿಂತಿದ್ದಾರೆ. ಅಲ್ಲದೆ ನ್ಯಾಯಯುತವಾಗಿ ನಡೆದುಕೊಳ್ಳಬೇಕಾದ ವಿಭಾಗೀಯ ಭದ್ರತಾ ನಿರಿಕ್ಷಕರು  ಅಧಿಕಾರಿಯ ಪರನಿಂತು ವರದಿ ನೀಡುತ್ತಾರೆ ಎಂದರೆ ನೌಕರರು ನ್ಯಾಯಕ್ಕಾಗಿ ಯಾರ ಬಳಿ ಹೋಬೇಕು. ಈ ರೀತಿ ನೌಕರರನ್ನು ಹಿಂಸಿಸುವುದನ್ನು ಇನ್ನಾದರು ಬಿಟ್ಟು ತಮ್ಮ ಹುದ್ದಗೆ ನಿಷ್ಠೆಯಿಂದ ನಡೆದುಕೊಳ್ಳಬೇಕು ಎಂಬುವುದು ಸಮಸ್ತರ ಒತ್ತಾಯವಾಗಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ