KSRTC: ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಹೋಗೋಣ-ಜಂಟಿ ಕ್ರಿಯಾ ಸಮಿತಿಗೆ ಒಕ್ಕೂಟ ಮನವಿ


ಬೆಂಗಳೂರು: ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಸಿಕೊಳ್ಳು ಸಂಸ್ಥೆಯಲ್ಲಿ ಚಾಲ್ತಿಯಾಲ್ಲಿರುವ ಎಲ್ಲ ಸಂಘಟನೆಗಳು ಒಮ್ಮತದಿಂದ ಒಗ್ಗೂಡಿ ಮುಂದಿನ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಿ ತೀರ್ಮಾನಿಸಲು ನೀವೆ ಸಮಯ ನಿಗದಿ ಪಡಿಸಿ ಇಲ್ಲ ನಮಗೆ ಹೇಳಿದರೆ ನಾವೆ ದಿನಾಂಕವನ್ನು ನಿಗದಿಪಡಿಸುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮನವಿ ಮಾಡಿದೆ.
ಇಂದು ರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ಕೂಟದ ಪದಾಧಿಕಾರಿಗಳಾದ ಕೃಷ್ಣ ಗುಡುಗುಡಿ, ಸಲೀಂ ಹಾಗೂ ಮಕಂದರ್ ಸಾಬ್ ಅವರು ಜಂಟಿ ಕ್ರಿಯಾ ಸಮಿತಿಯ ಕಚೇರಿಗೆ ತೆರಳಿ ಮುಖಂಡರಾದ ಅನಂತ ಸುಬ್ಬರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೂಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಈ ಮನವಿ ಪತ್ರ ಸಲ್ಲಿಸಿದ್ದು, ಸಂಘಟನೆಗಳು ಒಮ್ಮತದಿಂದ ಒಗ್ಗೂಡಿ ಮುಂದಿನ ಹೋರಾಟಗಳನ್ನು ಹಮ್ಮಿಕೊಳ್ಳುವ ವಿಷಯಕ್ಕೆ ಸಂಬಂಧಪಟ್ಟಂತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಹಾಗೂ ನೌಕರರ ಕೂಟ ವತಿಯಿಂದ ಈ ಮನವಿ ಸಲ್ಲಿಸಿರುವುದಾಗಿ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಇನ್ನು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಮ್ಮ ನಮ್ಮ ಸಂಘಟನೆಗಳ ಪ್ರತಿಷ್ಠೆಯನ್ನು ಸಮಸ್ತ ಸಾರಿಗೆ ನೌಕರರ ಒಳತಿಗಾಗಿ ಬದಿಗಿರಿಸಿ ಎಲ್ಲರೂ ಒಗ್ಗೂಡಿ ಶಾಂತಿಯುತ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಾವು ಈ ಹಿಂದೆ ತಮಗೆ ಮೂರು ಬಾರಿ ಪತ್ರಗಳನ್ನು ಬರೆದಿದ್ದರೂ ಸಹ, ಯಾಕೋ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಆದರಿಂದ ಪ್ರಸ್ತುತ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಹಿತಾದೃಷ್ಟಿಯಿಂದ ನಾವೆಲ್ಲ ಒಗ್ಗೂಡಿ ಒಮ್ಮತದ ನಿರ್ಧಾರಗಳನ್ನು ಕೈಗೊಂಡು, ಹೋರಾಟಗಳನ್ನು ಹಮ್ಮಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಎಲ್ಲ ಸಂಘಟನೆಗಳು ಒಗ್ಗೂಡಿ ತುರ್ತಾಗಿ ಸಭೆ ಮಾಡುವ ಅವಶ್ಯಕತೆ ಇದೆ.
ಹೀಗಾಗಿ ಸಭೆ ಆಯೋಜನೆಗೆ (ಸಂಘಟನೆಗಳ ಕಚೇರಿಗಳನ್ನು ಹೊರತು ಪಡಿಸಿ) ಸ್ಥಳ ಹಾಗೂ ದಿನಾಂಕವನ್ನು ತಾವೂಗಳು ನಿಗದಿಪಡಿಸಿದ್ದರೂ ಸರಿ ಅಥವಾ ನಮಗೆ ನಿಗದಿ ಮಾಡುವ ಜವಾಬ್ದಾರಿ ನೀಡಿದರೂ ಸರಿ ಸಮಸ್ತ ಸಾರಿಗೆ ನೌಕರರ ಒಳಿತಿಗಾಗಿ ನಾವು ಸಿದ್ಧರಿದ್ದೇವೆ ಎಂದು ತಿಳಿಸುತ್ತಾ ತಮ್ಮ ಮರು ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ಚಂದ್ರಶೇಖರ್ ಮನವಿ ಪತ್ರದಲ್ಲಿ ಕೋರಿದ್ದಾರೆ. ಪಿಡಿಎಫ್ ಫೈಲ್- Kuta manavi

Related
