NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 2006ರಲ್ಲಿ ಡ್ಯೂಟಿಗೆ ಸೇರಿ ಹಲವರು ನಿವೃತ್ತರಾಗುತ್ತಿದ್ದಾರೆ- ಅಚ್ಚರಿ ಎಂದರೆ ಬೇಸಿಕ್‌ ಪೇ 27 ಸಾವಿರ ದಾಟಲೇ ಇಲ್ಲಆದರೆ..!

ವಿಜಯಪಥ ಸಮಗ್ರ ಸುದ್ದಿ
  • ಸರ್ಕಾರಿ ಡಿ ಗ್ರೂಪ್‌ ನೌಕರರ ಮೂಲ ವೇತನ ಸೇರಿದ ಕೂಡಲೇ 27 ಸಾವಿರ ಬೇಸಿಕ್‌ ಪೇ
  • ನಮ್ಮ ಈ ದುರಂತ ಕತೆಗೆ ನಾಯಕರು ಯಾರು? ಜಂಟಿ ಸಂಘಟನೆಗಳ ನಾಯಕರೆ ಉತ್ತರಿಸುವಿರಾ? 

ಬೆಂಗಳೂರು: ಸರ್ಕಾರದ ಅಧಿನದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ  2006ರಲ್ಲಿ ಸೇರಿದ ಮಾಜಿ ಯೋಧರು, ನೌಕರರು ಹಲವಾರು ಕಾರಣಗಳಿಂದ ಇವತ್ತಿನ ದಿನಗಳಲ್ಲಿ ನಿವೃತ್ತಿ ಹೊಂದಿದ್ದಾರೆ ಹಾಗೂ ಹೊಂದುತ್ತಿದ್ದಾರೆ. ಅವರು 2006 ರಿಂದ 31/05/2025 ವರೆಗೆ ಸೇವೆ ಸಲ್ಲಿಸಿದ್ದರು ಸಹ ಅವರ ಬೇಸಿಕ್ ಪೇ 27 ಸಾವಿರ ರೂಪಾಯಿ ಸಹ ತಲುಪಲಿಲ್ಲ.

ಆದರೆ ವಿಪರ್ಯಾಸದ ಸಂಗತಿ ಏನೆಂದರೆ ಸರಕಾರದ ಏಳನೇ ವೇತನದ ಆಯೋಗದ ಪ್ರಕಾರ ಸರ್ಕಾರಿ ನೌಕರನ ಮೊದಲನೆಯ ಬೇಸಿಕ್ ಪೇ 27 ಸಾವಿರ ರೂಪಾಯಿ ಇದೆ. ಹಾಗೆ ಸಾರಿಗೆ ಸಂಸ್ಥೆಯಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಸಹ 27 ಸಾವಿರ ರೂಪಾಯಿ ಬೇಸಿಕ್ ಪೇ ತಲುಪಲಿಲ್ಲ. ಇದಕ್ಕೆ ಯಾರು ಕಾರಣಕರ್ತರು?

ಇದು ನಮ್ಮ ನಾಯಕರ ಗಮನಕ್ಕೆ ಏಕೆ ಬರುತ್ತಿಲ್ಲ? ನಮ್ಮ ಸಾರಿಗೆ ಸಂಸ್ಥೆಯಲ್ಲಿರುವ ನಮ್ಮ ಮಹಾನ್ ನಾಯಕರು ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇವತ್ತಿನ ದಿನಗಳಲ್ಲಿಯೂ ಸಹ ಸಾರಿಗೆ ನೌಕರರ ವೇತನ ಸರ್ಕಾರಿ ನೌಕರನಗಿಂತ ಹೆಚ್ಚು ಕಡಿಮೆ 50% ಕಡಿಮೆ ವೇತನ ಇದೆ.

ಆದರೆ, ನಮ್ಮ ಮಹಾನ್ ನಾಯಕರು ಇವತ್ತಿನ ಅಗ್ರಿಮೆಂಟ್ ವಿಷಯಕ್ಕೆ ಸಂಬಂಧಿಸಿದಂತೆ 1/1/2024ರಿಂದ  ಮತ್ತೆ 25% ಡಿಮಾಂಡ್ ಏಕೆ ಇಟ್ಟಿದ್ದಾರೆ? ಇದು ಎಷ್ಟು ಸರಿ? ನಮ್ಮ ರಾಜ್ಯ ಸರ್ಕಾರವೇ ಇವತ್ತಿನ ದಿನಗಳಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವುದಾಗಿ ಹೇಳುತ್ತಿರುವಾಗ ನಮ್ಮ ಮಹಾನ್ ನಾಯಕರು ಏಕೆ ತಿರಸ್ಕಾರ ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಜಂಟಿ ಸಂಘಟನೆಗಳ ನಾಯಕರು ಸಾರಿಗೆ ಸಂಸ್ಥೆಯ ನೌಕರರಿಗೆ ಸ್ಪಷ್ಟೀಕರಣ ಕೊಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ಇನ್ನು ಈಗಲೂ ನಮಗೆ ಒಬ್ಬ ಡಿ ಗ್ರೂಪ್‌ ನೌಕರನಿಗೆ ಸಿಗುವ ಬೇಸಿಕ್‌ ಪೇ ಅಂದರೆ 27 ಸಾವಿರ ರೂಪಾಯಿ 23ವರ್ಷ ಸೇವೆ ಸಲ್ಲಿಸಿದರೂ ಪಡೆಯಲಾಗುತ್ತಿಲ್ಲ. ಇದರ ನಡುವೆ ಅಡುಗೋಲಜ್ಜಿ ಕಥೆ ಹೇಳಿಕೊಂಡು ಈಗಲೂ ಬರಿ ಶೇ.25ರಷ್ಟು ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೀರಿ ಎಂದರೆ ನಿಮ್ಮ ಮನಸ್ಥಿತಿಗೆ ನಾವು ಏನನ್ನ ಬೇಕು ನೀವೆ ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ.

ಈಗಲಾದರೂ ಬದಲಾಗಿ ಸಾರಿಗೆ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ ಈಗಿನ 17 ತಿಂಗಳ ವೇತನ ಹೆಚ್ಚಳವಾಗುವ ಅದರ ಹಿಂಬಾಕಿಯನ್ನು ಕೊಡಿಸುವ ಜತೆಗೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಅದನ್ನು ಬಿಟ್ಟು ಈ ರೀತಿ ಕಥೆ ಕಟ್ಟಿಕೊಂಡು ಕೂರಬೇಡಿ ಈಗಾಗಲೇ ನಾವು ತುಂಬ ನೊಂದಿದ್ದೇವೆ ಬೇಯುತ್ತಿದ್ದೇವೆ.

ಇನ್ನೆಷ್ಟು ನೋಯಿಸುತ್ತೀರಿ.. ಸಾಕು ಇನ್ನಾದರೂ ನಮಗೆ ನೆಮ್ಮದಿಯಿಂದ ಡ್ಯೂಟಿ ಮಾಡುವುದಕ್ಕೆ ಅವಕಾಶವಾಗುವ ರೀತಿಯಲ್ಲಿ ಸರ್ಕಾರದ ಜತೆ ಮತುಕತೆ ನಡೆಸಿ ನಮ್ಮೆಲ್ಲ ನೌಕರರಿಗೆ ಬೆಳಕಾಗಿ. ಅದನ್ನು ಬಿಟ್ಟು ಈ ರೀತಿ ನಡೆದುಕೊಳ್ಳಬೇಡಿ ಇದು ನಮ್ಮ ನೋವಿನ ನುಡಿ ಎಂದು ನೌಕರರು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!