NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಶ್ವಮೇಧ ಕ್ಲಾಸಿಕ್‌ ಬಸ್‌ಗಳಿಗೆ ಮೈಸೂರಲ್ಲಿ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಂದ ವಿವಿಧೆಡೆ ಸಂಚರಿಸಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 20 ನೂತನ ಅಶ್ವಮೇಧ ಕ್ಲಾಸಿಕ್‌ ಬಸ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಸಂಸ್ಥೆಯ ಮೈಸೂರು ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಗ್ರಾಮಾಂತರ ಘಟಕದಿಂದ ಸಂಚರಿಸಲಿರುವ 20 ನೂತನ ಅಶ್ವಮೇಧ ಕ್ಲಾಸಿಕ್‌ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಈಗಾಗಲೇ ಬೆಂಗಳುರು, ಮಂಡ್ಯ ಸೇರಿದಂತೆ ವಿವಿಧ ಘಟಕಗಳಿಂದ ಅಶ್ವಮೇಧ ಬಸ್‌ಗಳು ಕಾರ್ಯಾಚೆಣೆ ಮಾಡುತ್ತಿದ್ದು, ಪ್ರಯಾಣಿಕರ ಮನಗೆದ್ದಿವೆ. ಇದೀಗ ಮೈಸೂರು ಘಟಕಕ್ಕೆ ಹೊಸದಾಗಿ 20 ಅಶ್ವಮೇಧ ಬಸ್‌ಗಳು ಸೇರ್ಪಡೆಗೊಂಡಿದ್ದು ಜನರ ಸೇವೆ ಆರಂಭಿಸಿವೆ.

ಮೈಸೂರು-ಬೆಂಗಳೂರು ನಡುವೆ 3 ಬಸ್, ನಂಜನಗೂಡು-ಮೈಸೂರು-ಬೆಂಗಳೂರು ನಡುವೆ 3 ಬಸ್, ನಂಜನಗೂಡು-ತಿ.ನರಸೀಪುರ-ಬೆಂಗಳೂರು ನಡುವೆ 7 ಬಸ್, ಎಚ್.ಡಿ.ಕೋಟೆ-ಬೆಂಗಳೂರು ನಡುವೆ 2 ಬಸ್, ಹುಣಸೂರು-ಬೆಂಗಳೂರು ನಡುವೆ 2 ಬಸ್, ಹಾಸನ- ಬೆಂಗಳೂರು ನಡುವೆ 2 ಬಸ್ ಹಾಗೂ ಮೈಸೂರು- ವಿರಾಜಪೇಟೆ ನಡುವೆ ಒಂದು ಬಸ್‌ ಸಂಚರಿಸಲಿದೆ.

ಅಶ್ವಮೇಧ ಬಸ್‌ಗಳ ವಿಶೇಷ: ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್‌ಗಳಾಗಿ ಅಶ್ವಮೇಧ ಕ್ಲಾಸಿಕ್ ಬಸ್‌ಗಳು ಸಂಚರಿಸಲಿವೆ. ಬಿ.ಎಸ್-6 ಮಾದರಿಯ ಈ ಬಸ್‌ಗಳು ಪರಿಸರ ಸ್ನೇಹಿ ಬಸ್‌ಗಳಾಗಿವೆ. ಸೆನ್ಸಾರ್ ಚಾಲಿತ ನ್ಯೂಮ್ಯಾಟಿಕ್ ಬಾಗಿಲು, ತುರ್ತು ಬಟನ್ ಅಳವಡಿಸಲಾಗಿದೆ. ಸಾಮಾನ್ಯ ಬಸ್‌ಗಳಿಗಿಂತ ಒಂದು ಅಡಿ ಎತ್ತರ ಹೊಂದಿರುವುದರಿಂದ ಬೆಳಕು, ಗಾಳಿ ಚನ್ನಾಗಿದೆ. ಪ್ರಯಾಣಿಕರ ಸೀಟ್ ನಡುವೆ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.

ನೀರಿನ ಬಾಟಲ್ ಹಾಗೂ ಪತ್ರಿಕೆ ಇಡಲು ಪೌಚ್ ವ್ಯವಸ್ಥೆ ಇದೆ. ಮೊಬೈಲ್ ಚಾರ್ಜಿಂಗ್, ಪ್ಯಾನಿಕ್ ಬಟನ್, ಬಸ್‌ನ ಮುಂದೆ ಹಾಗೂ ಹಿಂದೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಶಾಸಕರಾದ ಕೆ.ಹರೀಶ್‌ಗೌಡ, ತನ್ವೀರ್‌ಸೇಠ್‌, ಮಂಜೇಗೌಡ, ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್‌, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್‌, ಕಾರ್ಮಿಕ ಕಲ್ಯಾಣಾಧಿಕಾರಿ ಪುಟ್ಟೇಗೌಡ ಮತ್ತಿತರರು ಇದ್ದರು.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ