NEWSನಮ್ಮರಾಜ್ಯನಿಮ್ಮ ಪತ್ರಲೇಖನಗಳು

KSRTC: ಸಚಿವರೆ ನಿಮ್ಮ ಸಹಾನುಭೂತಿ ನಮಗೆ ಬೇಡ ವೇತನ ಹೆಚ್ಚಳದ ಹಿಂಬಾಕಿ ಕೊಡಿ- ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಪತ್ರಪಥ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ವೇತನ ಪರಿಷ್ಕರಣೆಯ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ 1-1-2020ರಿಂದ ನೌಕರರಿಗೆ ಸಂದಾಯವಾಗಬೇಕಿದ್ದು, ಈ ಸಂಬಂಧ ಹಲವು ಮಾಹಿತಿಗಳನ್ನು ತರಬಯಸುತ್ತೇವೆ.

2020ರ ಜನವರಿ 1ರಂದು ವಾಡಿಕೆಯಂತೆ ನಮ್ಮ ನಿಗಮಗಳಲ್ಲಿ 4 ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದ ವೇತನ ಪರಿಷ್ಕರಣೆಯು ಜಾರಿಗೊಳ್ಳಬೇಕಾಗಿದ್ದು, ಕೋವಿಡ್‌-19 ಮತ್ತಿತರ ಕಾರಣಗಳಿಂದಾಗಿ ನಿಗಮದ ಆಡಳಿತ ಮಂಡಳಿಯು ವಿಳಂಬ ಮಾಡಿ ಅಂತಿಮವಾಗಿ ಮಾರ್ಚ್‌ 2023ರಂದು ಶೇ.15ರಷ್ಟು ಹೆಚ್ಚುವರಿ ಮಾಡಿ ಆದೇಶ ನೀಡಿದೆ. ಇತ್ತೀಚೆಗೆ ನಿವೃತ್ತಿ ಹೊಂದುತ್ತಿರುವ ಎಲ್ಲ ನೌಕರರಿಗೂ ಪರಿಷ್ಕೃತ ವೇತನ ನಿಗದಿಪಡಿಸಿ ಅದರಂತೆ ಗ್ರಾಚ್ಯುಟಿ ಮತ್ತು ಇನ್ನಿತರೆ ಆರ್ಥಿಕ ಸೌಲಭ್ಯವನ್ನು ಸಹ ನೀಡಿದ್ದಾರೆ.

ವಾಸ್ತವಾವಗಿ 1-1-2020ರಲ್ಲಿ ಸೇವೆಯಲ್ಲಿದ್ದ ಎಲ್ಲ ನೌಕರರಿಗೂ ಇದರ ಲಾಭವು ಸಲ್ಲಬೇಕಾಗಿದ್ದು, 2020 ಜನವರಿಯಿಂದ-2023ರ ಫ್ರೆಬ್ರವರಿಯಲ್ಲಿ ನಿವೃತ್ತಿ ಹೊಂದಿರುವ ಈ ನೌಕರರಿಗೆ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ ಈವರೆಗೂ ನಿಗಮವು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಇಚ್ಛಾಶಕ್ತಿ ತೋರುತ್ತಿಲ್ಲ. 2020-22ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಸುಮಾರು 18 ತಿಂಗಳವರೆಗೆ ವೇತನ ಹಿಂಬಾಕಿ ಇನ್ನಿತರ ಆರ್ಥಿಕ ಸೌಲಭ್ಯಗಳು ಸಂದಾಯವಾಗಬೇಕಿದೆ.

ಈ ಬಗ್ಗೆ ಸರ್ಕಾರದ ಮತ್ತು ನಿಗಮದ ಗಮನ ಸೆಳೆಯಲು ಕೆಎಸ್‌ಆರ್‌ಟಿಸಿ ನೌಕರರ ಜಿಂಟಿಕ್ರಿಯಾ ಸಮಿತಿ ಕಳೆದ ಅ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿತು. ಆ ವೇಳೆ ಸ್ಥಳಕ್ಕೆ ಆಗಮಿಸಿದ ನಿಗಮದ ವುವಸ್ಥಾಪಕ ನಿರ್ದೇಶಕರು ನೌಕರರನ್ನುದ್ದೇಶಿಸಿ ಮಾತನಾಡಿ, ನಿವೃತ್ತ ನೌಕರರಿಗೆ ವಂಚನೆ ಮಾಡುವುದಿಲ್ಲ. ರ್ಕಾರದೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.

ಆದರೆ, ಇಲ್ಲಿಯವರೆಗೂ ಹಲವು ಸಭೆಗಳನ್ನು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾಡಿದರೂ ಯಾವುದೇ ನಿಖರ ನಿರ್ಧಾರವನ್ನು ಪ್ರಕಟಸಸಿಲ್ಲ. ಇನ್ನು ಡಿ.4ರಿಂದ ಅಂದರೆ ನಿನ್ನೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಈ ವೇಳೆ ಬೆಳಗಾವಿಯಲ್ಲಿ ನಾಳೆ ಡಿ.6ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲು ಜಿಂಟಿ ಕ್ರಿಯಾಸಮಿತಿಯು ನಿರ್ಧಾರ ತೆಗೆದುಕೊಂಡಿತ್ತು.

ಆದರೆ, ಡಿ.2ರಂದು ಸಾರಿಗೆ ಸಚಿವರು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರನ್ನು ಡಿ.6ರಂದು ಧರಣಿ ಕೂರದಂತೆ ಮನವೊಲಿಸಿ, ಅಧಿವೇಶನದ ನಂತರ ಈ ವಿಷಯವನ್ನು ಸಹಾನುಭೂತಿಯಿಂದ ಪರಿಗಣಿಸಿ ತೀರ್ಮಾನಿಸಲಾಗುದೆಂದು ಹೇಳಿ ಕಳಿಸಿದ್ದಾರೆ.

ಮಾರ್ಚ್‌ 2023ರಲ್ಲಿ ಜಾರಿಯಾದ ಒಪ್ಪಂದಕ್ಕೆ ಇಲ್ಲಿಯವರೆಗೂ ಸುಮಾರು 8 ತಿಂಗಳು ಕಳೆದರೂ ಚಕಾರ ಎತ್ತದಿರುವ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿ ಅಧಿವೇಶನ ಮುಗಿದ ತಕ್ಷಣ ಇತ್ಯರ್ಥಗೊಳಿಸುತ್ತದೆ ಎಂದರೆ ನೌಕರರಿಗೆ ನಂಬಿಕ ಬರುತ್ತಿಲ್ಲ. ಇದೂ ಕೂಡ ಮೂಗಿಗೆ ತುಪ್ಪ ಸವರುವ ತಂತ್ರವೆಂದೇ ಎನಿಸುತ್ತಿದೆ. ಒಂದು ವೇಳೆ ಅಧಿವೇಶನದಲ್ಲಿ ಧರಣಿ ಮಾಡಿದ್ದರೇ ಇದು ದೊಡ್ಡ ಸುದ್ದಿಯಾಗಿ ನೌಕರರಿಗೆ ಶೀಘ್ರ ನ್ಯಾಯಸಿಗುತ್ತಿತ್ತೇನೋ ಎಂದಿಸಿಸುತ್ತಿದೆ.

ಜಂಟಿ ಸಮಿತಿಯ ಪದಾಧಿಕಾರಿಗಳಿಗೆ ಡಿ.2ರಂದು ಧರಣಿ ಸತ್ಯಾಗ್ರಹ ನಿಲ್ಲಿಸಲು ನೀಡಿರುವ ಪತ್ರದಲ್ಲಿ ವಿಷಯವನ್ನು ಸಹಾನುಭೂತಿಯಿಂದ ಪರಿಶೀಲಿಸಿ ತೀರ್ಮಾನಿಸುತ್ತೇವೆ ಎಂದು ತಿಳಿಸಲಾಗಿದೆ. ವಾಸ್ತವವಾಗಿ ಇದು ಸಹಾನಿಭೂತಿಗೆ ಸಂಬಂಧಿಸಿದ ವಿಷಯವೇ ಅಲ್ಲ. ನೌಕರರಿಗೆ 2020ರ ವೇತನ ಪರಿಷ್ಕರಣೆ (ಕೈಗಾರಿಕಾ ಒಪ್ಪಂದ)ಯಿಂದ ಸಲ್ಲಬೇಕಾಗಿರುವ ನ್ಯಾಯಯುತವಾದ ಹಿಂಬಾಕಿ ಮೊತ್ತವಾಗಿದ್ದು, ಯಾರೂ ಯಾವ ದಾನವನ್ನು ಭಿಕ್ಷೆಯನ್ನು ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ಹೀಗಾಗಿ ನಮಗೆ ಯಾವುದೇ ಸಹಾನುಭೂತಿ ತೋರಿಸುವ ಅಗತ್ಯವಿಲ್ಲ, ತಾವು ನಮಗೆ ಕೊಡಬೇಕಿರುವ ವೇತನ ಹಿಂಬಾಕಿ ಸೇರಿದಂತೆ ಇತರ ಆರ್ಥಿಕ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ