NEWSನಮ್ಮಜಿಲ್ಲೆಮೈಸೂರು

KSRTC ಮೈಸೂರು: ಜು.29ರಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಹಿನ್ನೆಲೆ ನಾಳೆ ತುರ್ತು ಸಭೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುರಿತು ನೌಕರರ ಸಲಹೆ ಮತ್ತು ಸೂಚನೆಗಳನ್ನು ಕೇಳಿ ತೀರ್ಮಾನಿಸಲು ತುರ್ತು ಸಭೆಯನ್ನು ಇದೇ ಜು.27ರಂದು ಆಯೋಜಿಸಲಾಗಿದೆ.

ಈ ಸಭೆಯನ್ನು ಅಂದು ಸಾಯಂಕಾಲ 4 ಗಂಟೆಗೆ ಮೈಸೂರಿನ ಬಸ್ ಸ್ಟ್ಯಾಂಡ್ ಬಳಿಯ ಪಿಡಬ್ಲ್ಯೂಡಿ ಗೆಸ್ಟ್ ಹೌಸ್‌ನಲ್ಲಿ ಆಯೋಜಿಲಾಗಿದೆ.

ಹೀಗಾಗಿ ಕೂಟದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ, ಪದಾಧಿಕಾರಿಗಳು ಮತ್ತು ಸಕ್ರಿಯ ಕಾರ್ಯಕರ್ತರು ಜು.27ರ ಭಾನುವಾರ ಸಾಯಂಕಾಲ 4ಗಂಟೆಗೆ ನೌಕರರ ಕೂಟದ ಗೌರವಾಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಗೆ ಆಗಮಿಸಿ ಜು. 29ರಿಂದ ಹಮ್ಮಿಕೊಳ್ಳುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುರಿತು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಮ್ಮ ಸಲಹೆ ಹಾಗೂ ಸೂಚನೆಗಳು ಭಾರಿ ಅಮೂಲ್ಯವಾಗಿದ್ದು ತಾವು ಈ ತುರ್ತು ಸಭೆಯಲ್ಲಿ ಭಾಗವಹಿಸಿ ಅಂತಿಮವಾಗಿ ತೀರ್ಮಾನಿಸಲು ಎರಡು ವಿಭಾಗದ ನೌಕರರು ಭಾಗವಹಿಸಬೇಕೆಂದು ಪದಾಧಿಕಾರಿಗಳು ಕೋರಿದ್ದಾರೆ.

ಇದರ ನಡುವೆ ಜು.29ರಿಂದ ಹಮ್ಮಿಕೊಳ್ಳುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮೈಸೂರು ನಗರ ಪೊಲೀಸರಿಂದ ಅನುಮತಿ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದೂ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!