KSRTC: ಅಧಿಕಾರಿಗಳು- ನೌಕರ ಸಿಬ್ಬಂದಿಗಳ ಸಂಘಟನೆಗಳು ಬಲಗೊಳ್ಳಬೇಕು ಟ್ರೇಡ್ ಯೂನಿಯನ್‌ಗಳು ತೊಲಗಬೇಕು ಅಭಿಯಾನ!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ವೇತನ ಸೇರಿದಂತೆ ಇತರೆ ಕಾನೂನಾತ್ಮಕವಾಗಿ ಪಡೆಯಬೇಕಾದ ಸೌಲಭ್ಯಗಳಿಂದ ಹಲವು ವರ್ಷಗಳಿಂದಲೂ ವಂಚಿತರಾಗುತ್ತಿದ್ದು, ಇದರಿಂದ ನೊಂದಿರುವ ಸಮಸ್ತ ನೌಕರರು ಅಧಿಕಾರಿಗಳು- ನೌಕರ ಸಿಬ್ಬಂದಿಗಳ ಸಂಘಟನೆಗಳು ಬಲಗೊಳ್ಳಬೇಕು ಟ್ರೇಡ್ ಯೂನಿಯನ್‌ಗಳು ತೊಲಗಬೇಕು ಎಂಬ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಲ್ಲಿ ಅಧಿಕಾರಿ ವರ್ಗ ಮತ್ತು ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳ ವರ್ಗ ಎಂದು ಪ್ರತ್ಯೇಕಿಸಿ ಒಗ್ಗಟ್ಟನ್ನು ಒಡೆದು ಆಳುತ್ತಿರುವುದರಿಂದ ಸಾರಿಗೆ ನೌಕರರಿಗೆ ಕಾಲ ಕಾಲಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ನಾವು ಒಗ್ಗೂಡಬೇಕು ಎಂದು ಅಧಿಕಾರಿಗಳೇ ಕರೆ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳ ವರ್ಗದವರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಈ ಎಲ್ಲರೂ ಟ್ರೇಡ್ ಯೂನಿಯನ್‌ಗಳ ಜತೆ ಸೇರಿಕೊಂಡಿದ್ದಾರೆ.
ಇನ್ನು ಮುಂದೆ ಹೀಗಾಗಬಾರದು ನಾವೆಲ್ಲ ಸಂಸ್ಥೆಯ ನೌಕರರು ಒಟ್ಟಿಗೆ ಸೇರಿ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕಿದೆ. ಹೀಗಾಗಿ ನಾವು ಇನ್ನಾದರೂ ಜತೆಯಾಗಿ ಸೌಲಭ್ಯಗಳನ್ನು ಪಡೆಯೋಣ ಎಂದೇ ಅಧಿಕಾರಿಗಳು, ಸಿಬ್ಬಂದಿಗಳ ಸಂಘಟನೆಗಳನ್ನು ಹುಟ್ಟುಹಾಕಿರುವುದು. ಹೀಗಾಗಿ ನಮ್ಮ ಜತೆ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಎಂಬ ಬೇಧವಿಲ್ಲದೇ ಸಮಸ್ತ ನೌಕರರು ಸೇರಿಕೊಳ್ಳಬೇಕು. ಈ ಮೂಲಕ ಹೋರಾಟದ ರೂಪುರೇಷೆ ರೂಪಿಸೋಣ ಎಂದು ಕರೆ ನೀಡಿದ್ದಾರೆ.
ಈ ಕರೆಯನ್ನು ಪ್ರತಿಯೊಬ್ಬ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಗಮನಿಸಿ ಸಂಸ್ಥೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಸ್ಥಾಪಿಸಿರುವ ಸಂಘಟನೆಗಳೊಂದಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ನೋಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳ ನೌಕರರ ಪದಾಧಿಕಾರಿಗಳು 2021ರಲ್ಲಿ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ಕೊಟ್ಟರು ಆ ವೇಳೆ ಸಾವಿರಾರು ನೌಕರರಿಗೆ ಅಮಾನತು, ವರ್ಗಾವಣೆ, ವೇತನ ಬಡ್ತಿ ಕಡಿತದಂತಹ ಉಗ್ರ ಶಿಕ್ಷೆ ನೀಡಲಾಯಿತು. ಇದರಿಂದ ನಷ್ಟ ಅನುಭವಿಸಿದ್ದು ಚಾಲಕ, ನಿರ್ವಾಹಕರು ಜತೆಗೆ ಬೆರಳೆಣಿಕೆಯಷ್ಟು ತಾಂತ್ರಿಕ ಸಿಬ್ಬಂದಿ. ನೂರಾರು ಕೋಟಿ ರೂ. ನಷ್ಟ ಆಗಿದ್ದು ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ.
ಕೇಂದ್ರ ಕಚೇರಿ, ವಿಭಾಗ ಕಚೇರಿ, ಘಟಕ ಮಟ್ಟದ ಅಧಿಕಾರಿಗಳಿಗಾಗಲೀ, ಸಿಬ್ಬಂದಿಗಳಿಗಾಗಲೀ, ಭದ್ರತಾ ರಕ್ಷಕರಿಗಾಗಲೀ ಈ ಅಮಾನತು, ವಜಾದಂತಹ ಶಿಕ್ಷೆ ಆಗಿಲ್ಲ. ಇಲ್ಲಿ ಅಮಾಯಕ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳ ಬಲಿಕೊಟ್ಟು ವೇತನ ಹೆಚ್ಚಿಸುವ ದುಸ್ಸಾಹಸಕ್ಕೆ ಕೈ ಹಾಕುವುದು ನ್ಯಾಯವೇ?
ಈ ರಾಜ್ಯದ ಎಲ್ಲ ವಿಭಾಗದ ಸಾರಿಗೆ ಸಂಸ್ಥೆಗಳ ನೌಕರರು ಗಮನಿಸಲೇ ಬೇಕಾದ ಒಂದು ಅಂಶ 2021ರಲ್ಲಿ ನಡೆದ ಮಷ್ಕರ ಸೇರಿದಂತೆ ಹಿಂದಿನ ಎಲ್ಲ ಹೋರಾಟಗಳಲ್ಲೂ ಚಾಕನಾ ಮತ್ತು ತಾಂತ್ರಿಕಾ ಸಿಬ್ಬಂದಿಗಳು ಮಾತ್ರ ಶಿಕ್ಷೆಗೆ ಗುರುಯಾಗುತ್ತಿರುವುದು ಭಾರಿ ನೋವಿನ ಸಂಗತಿ.
ಇನ್ನು ಮುಷ್ಕರಕ್ಕೆ ಕರೆ ಕೊಟ್ಟ ಸಾರಿಗೆ ನೌಕರರ ಪದಾಧಿಕಾರಿಗಳು ವಜಾಗೊಂಡು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಸಂಸ್ಥೆಯಲ್ಲಿ ಯಾವುದೇ ಡ್ಯೂಟಿ ಮಾಡದೆ ಶಿಕ್ಷೆ ಅನುಭವಿಸದ ಕೆಲ ಸಂಘಟನೆಗಳ ಮುಖಂಡರು ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ನೌಕರರಿಗೆ ನ್ಯಾಯ ಮಾತ್ರ ಸಿಕ್ಕಿಲ್ಲ. ಸಂತೃಪ್ತಿಯ ಜೀವನ ನಡೆಸುತ್ತಿರುವ ಹೋರಾಟದ ಹೆಸರಿನಲ್ಲಿ ನೌಕರರ ಬಲಿಪಡೆಯುತ್ತಿರುವ ಕೆಲಸಕ್ಕೆ ಬಾರದ ಈ ಟ್ರೇಡ್ ಯೂನಿಯನ್‌ಗಳು ಸಾರಿಗೆ ನಿಗಮಗಳಿಗೆ ಬೇಕಾ ಎಂಬ ಪ್ರಶ್ನೆ ನೌಕರರಲ್ಲಿ ಹುಟ್ಟುಕೊಂಡಿದೆ.
ಈ ಮುಖಂಡರಿಂದ ನೌಕರರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವಾಗಿರುವುದೇ ಹೆಚ್ಚಿದೆ. ಆದರೂ ನಾವು ನೌಕರರ ಉದ್ಧಾರಕ್ಕೆ ಇದ್ದೇವೆ ಎಂದು ಬಣ್ಣದ ಮಾತನಾಡಿಕೊಂಡು ನೌಕರರ ನಂಬಿಸಿಕೊಂಡೇ ಈವರೆಗೂ ಬಂದಿದ್ದಾರೆ. ನೌಕರರಿಗೆ ಸರ್ಕಾರವೇ ಕೊಟ್ಟಿರುವ ಸರಿ ಸಮಾನ ವೇತನ ಭರವಸೆಯನ್ನು ಈಡೇರಿಸಿ ಎಂದು ಈವರೆಗೂ ಕೇಳಿಲ್ಲ. ಆದರೆ ಸಾರಿಗೆ ನೌಕರರ ಹೊರತುಪಡಿಸಿ ಇತರ ನಿಗಮ ಮಂಡಳಿಗಳು ಇಲಾಖೆಗಳಲ್ಲಿ ಇರುವ ಗುತ್ತಿಗೆ ನೌಕರರ ಹೋರಾಟದಲ್ಲಿ ಸರಿ ಸಮಾನ ವೇತನ ಕೊಡಿ ಎಂದು ಸರ್ಕಾರನ್ನು ಆಗ್ರಹಿಸುತ್ತಾರೆ.
ಈ ಇಬ್ಬಗೆಯ ನೀತಿ ಏಕೆ? ಗುತ್ತಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಸರ್ಕಾರ ಎಲ್ಲಿಯೂ ಭರವಸೆ ನೀಡಿಲ್ಲ. ಆದರೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿದೆ ಅದನ್ನು ಈಡೇರಿಸಿ ಎಂದು ಈ ಲಾನಾಯಕ್ ಸಂಘಟನೆಗಳ ಮುಖಂಡರು ಕೇಳುತ್ತಿಲ್ಲ ಏಕೆ?
ಇನ್ನಾದರೂ ಅಧಿಕಾರಿಗಳನ್ನೂ ಒಳಗೊಂಡಂತೆ ಸಾರಿಗೆಯ ಸಮಸ್ತ ನೌಕರರು ಈ ಟ್ರೇಡ್‌ಯೂನಿಯನ್‌ಗಳನ್ನು ಬಿಟ್ಟು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಂಘಟನೆಗಳೊಂದಿಗೆ ಪ್ರತಿಯೊಬ್ಬ ನೌಕರರನ್ನು ಸೇರಿಕೊಂಡು ತಮಗೆ ಬರಬೇಕಿರುವ ನ್ಯಾಯಯುತ ಸೌಲಭ್ಯಗಳನ್ನು ಪಡೆಯುವುದಕ್ಕೆ ಮುಂದಾಗಬೇಕಿದೆ. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆಯುತ್ತದೆ.
ಹೀಗಾಗಿ ಸಾರಿಗೆಯ ನಾಲ್ಕೂ ನಿಗಮಗಳಲ್ಲಿಯೂ ಅಧಿಕಾರಿಗಳು- ಸಿಬ್ಬಂದಿಗಳ ಸಂಘಟನೆಗಳು ಬಲಗೊಳ್ಳಬೇಕು ಟ್ರೇಡ್ ಯೂನಿಯನ್‌ಗಳು ತೊಲಗಬೇಕು ಎಂಬ ಅಭಿಯಾನಕ್ಕೆ ಪ್ರತಿಯೊಬ್ಬರು ಸಿದ್ಧರಾಗಬೇಕು ಎಂದು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳು ಜತೆಯಾಗಿ, ಬನ್ನಿ ನಾವು ನೀವು ಎಲ್ಲರೂ ಸಂಸ್ಥೆಯ ನೌಕರರು ಎಂಬ ಸಂದೇಶ ಸಾರೋಣ ಎಂದು ಅಧಿಕಾರಿಗಳು ಸಿಬ್ಬಂದಿಗಳ ಸಂಘಟನೆಗಳ ಪದಾಧಿಕಾರಿಗಳು ಕರೆ ನೀಡಿದ್ದಾರೆ.
ಈ ಕರೆಗೆ ಪ್ರತಿಯೊಬ್ಬರೂ ಓಗೊಟ್ಟರೆ ಕೆಇಬಿ, ಜಲಮಂಡಳಿ ಸೇರಿದಂತೆ ಇತರೆ ನಿಮಗ ಮಂಡಳಿಗಳಲ್ಲಿರುವ ರೀತಿಯಲ್ಲೇ ನಾವುಗಳು ಸೌಲಭ್ಯ ಪಡೆಯಬಹುದು ಎಂಬ ಅಭಿಪ್ರಾಯ ದರ್ಜೆ 1 ವರ್ಗದ ಅಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ. ನಾವು ಕೂಡ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಈ ಬಗ್ಗೆ ಕರೆಯುತ್ತಿದ್ದೇವೆ ಆದರೆ ಟ್ರೇಡ್ ಯೂನಿಯನ್‌ಗಳ ಕೆಲ ಮುಖಂಡರು ಇವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಭಾರಿ ನೋವಿನಿಂದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಈ ನಡುವೆ ನಿನ್ನೆ (ಡಿ.13) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯೂ ವಿಫಲವಾಗಿದ್ದು, ಈ ಬಗ್ಗೆ ಇದೇ ಸಂಘಟನೆಗಳು ಮತ್ತೊಂದು ಅವಕಾಶ ತೆಗೆದುಕೊಂಡಿದ್ದು, ಈ ಬಾರಿ ನಾವು ಹೋರಾಟ ಮಾಡಿ ನ್ಯಾಯಕೊಡಿಸುತ್ತೇವೆ ಎಂದು ಹೇಳಿವೆ. ಹೀಗಾಗಿ ಈ ತಿಂಗಳ ಕೊನೆಯವರೆಗೂ ಕಾದು ನೋಡುತ್ತೇವೆ ಎಂದು ಕೂಡ ತಿಳಿಸಿದ್ದಾರೆ.
Related









