NEWSನಮ್ಮಜಿಲ್ಲೆನಮ್ಮರಾಜ್ಯ

KSRTC-ಪ್ರಯಾಣಿಕರು ಟಿಕೆಟ್‌ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಬಾರದು: 2020ರಲ್ಲೇ ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಟಿಕೆಟ್‌ ಕಳೆದುಕೊಂಡಿರುವುದು  ತನಿಖಾ ಸಿಬ್ಬಂದಿಗೆ ತಪಾಸಣೆ ವೇಳೆ ತಿಳಿದು ಬಂದರೆ ಅಂಥವರಿಗೆ ಮತ್ತೆ ಟಿಕೆಟ್‌ಕೊಡಬೇಕು. ಅದನ್ನು ಬಿಟ್ಟು ನಿರ್ವಾಹಕರ ವಿರುದ್ಧ ಯಾವುದೆ ಕ್ರಮ ತೆಗೆದುಕೊಳ್ಳಬಾರದು ಎಂದು 2020ರಲ್ಲೇ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಆದೇಶ ಹೊರಡಿಸಿದ್ದಾರೆ.

ಆದರೆ, ಈ ಆದೇಶವನ್ನು ಪಾಲಿಸದ ಕೆಲ ತನಿಖಾ ಸಿಬ್ಬಂದಿಗಳು ಪ್ರಯಾಣಿಕರಿಗೆ ದಂಡ ವಿಧಿಸುವ ಜತೆಗೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಿ ದೋಷಾರೋಪಣ ಪತ್ರ ನೀಡುತ್ತಿದ್ದಾರೆ. ಇದು ಆದೇಶಕ್ಕೆ ವಿರುದ್ಧವಾಗಿದೆ ಎಂದು ಶಿಕ್ಷೆಗೆ ಒಳಗಾಗುತ್ತಿರುವ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದಿನ ಎಂಡಿ ಶಿವಯೋಗಿ ಸಿ. ಕಳಸದ ಅವರು 20/02/2020ರಂದು ಸಂಖ್ಯೆ/ಕರಾಸಾ/ಕೇಕ/ಸಂ/ಕೇ.ತ.ದ/ 4936 /19-20 ಸುತ್ತೋಲೆ ಸಂಖ್ಯೆ: 1531ರಡಿ ಮಾರ್ಗ ತನಿಖಾ ಪದ್ಧತಿಯಲ್ಲಿನ ಮಾರ್ಗದರ್ಶನಗಳ ಬಗ್ಗೆ ಆದೇಶ ಹೊರಡಿಸಿದ್ದು ಈ ಆದೇಶ ಅಂದಿನಿಂದಲೇ ಜಾರಿಗೆ ಬಂದಿದೆ.

ರಾಜ್ಯದೊಳಗೆ ಹಾಗೂ ನೆರೆ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡುತ್ತಿರುವ ನಿಗಮದ ವಾಹನಗಳನ್ನು ಪರಿಣಾಮಕಾರಿಯಾಗಿ ತನಿಖೆಗೆ ಒಳಪಡಿಸಿದಾಗ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಂದರೆ, ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಪ್ರಯಾಣದ ಟಿಕೆಟ್ ಕಳೆದುಕೊಂಡ (Loss of ticket) ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳು ಇಲ್ಲ, ಈ ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿಗಳು ಈ ಮಾರ್ಗಸೂಚಿಗಳನ್ನು ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದುಕೊಂಡು, ಆಕಸ್ಮಿಕವಾಗಿ ಕಳೆದುಕೊಂಡ ಸಂರ್ದಭದಲ್ಲಿ (Loss of ticket) ಮಾರ್ಗ ತನಿಖಾ ಸಿಬ್ಬಂದಿಯು ಇಟಿಎಂ/ಮುಂಗಡ ಕಾಯ್ದಿರಿಸಿದ ಟ್ರಿಪ್‌ ಶೀಟ್‌ಗಳಿಂದ ಆ ಪ್ರಯಾಣಿಕರು ಟಿಕೆಟ್ ಪಡೆದಿದ್ದು, ತದನಂತರ ಕಳೆದುಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಆ ಬಳಿಕ ತನಿಖಾ ಸ್ಥಳದಿಂದ ಮುಂದೆ ಪ್ರಯಾಣಿಕರು ಪ್ರಯಾಣಿಸುವ ಸ್ಥಳಕ್ಕೆ ನಿರ್ವಾಹಕರ ಇಟಿಎಂ ಯಂತ್ರದಿಂದ ಮರುಟಿಕೆಟ್ ವಿತರಿಸುವುದು ಹಾಗೂ ಮರುವಿತರಣೆ ಟಿಕೆಟ್‌ನ ಮೊತ್ತವನ್ನು ಸಂಬಂಧಿಸಿದ ಪ್ರಯಾಣಿಕರಿಂದ ಪಡೆಯುವುದು ಹಾಗೂ ಈ ಬಗ್ಗೆ ಮಾರ್ಗಪತ್ರದಲ್ಲಿ ಪರಾ ದಾಖಲಿಸುವುದು. ಈ ರೀತಿಯ ಸಂದರ್ಭದಲ್ಲಿ ನಿರ್ವಾಹಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು.

ಈ ಸುತ್ತೋಲೆಯಲ್ಲಿನ ಅಂಶಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಮಾರ್ಗ ತನಿಖಾ ಸಿಬ್ಬಂದಿಗೆ ಅಗತ್ಯ ತಿಳಿವಳಿಕೆಯನ್ನು ನೀಡುವುದು. ಈ ಸುತ್ತೋಲೆ ಈ ಕೂಡಲೇ ಜಾರಿಗೆ ಬರುತ್ತದೆ. ಸುತ್ತೋಲೆ ಸ್ವೀಕರಿಸಿದ್ದಕ್ಕೆ ಸ್ವೀಕೃತಿ ಮತ್ತು ಅನುಸರಣಾ ವರದಿ ನೀಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ 2020ರ ಫೆಬ್ರವರಿ 20ರಂದೆ ಆದೇಶ ಹೊರಡಿಸಿದ್ದಾರೆ.

ಇನ್ನಾದರೂ ತನಿಖಾ ಸಿಬ್ಬಂದಿಗಳು ಈ ಆದೇಶವನ್ನು ಪಾಲನೆ ಮಾಡುವ ಮೂಲಕ ನಿರ್ವಾಹಕರ ವಿರುದ್ಧ ದೋಷಾರೋಪಣ ಪತ್ರ ನೀಡಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ನೌಕರರು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ