NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಿವೃತ್ತ ನೌಕರರು ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರು : ಹೈ ಕೋರ್ಟ್‌ ಮಹತ್ವದ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನಿವೃತ್ತ ನೌಕರರು ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಿದ್ದಾರೆ ಎಂದು ಕರ್ನಾಟಕ ಹೈ ಕೋರ್ಟ್‌ ಆದೇಶ ಹೊರಡಿಸಿದೆ.

ನಮಗೆ ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಸಾರಿಗೆ ನಿಗಮದ ನೌಕರ ಕೆ.ಆರ್‌.ನಾಗರಾಜ ಸೇರಿದಂತೆ 65 ಮಂದಿ 2019ರಲ್ಲೇ ಹೈ ಕೋರ್ಟ್‌ ಮೆಟ್ಟಿಲ್ಲೇರಿದ್ದರು. ಈ ನಿವೃತ್ತ ನೌಕರರ ಪರವಾಗಿ ಹಿರಿಯ ವಕೀಲ ನಂಜುಂಡೇಗೌಡ ವಕಾಲತ್ತು ವಹಿಸಿದ್ದರು.

ನಾಲ್ಕು ವರ್ಷದ ಹಿಂದೆಯೇ ಈ 65 ಮಂದಿ ಹೈ ಕೋರ್ಟ್‌ ಮೊರೆ ಹೋಗಿದ್ದರು. ( ರಿಟ್ ಅರ್ಜಿ ಸಂಖ್ಯೆ 2651/2019) ಸದ್ಯ ಈ ಅರ್ಜಿ ಸಂಬಂಧ ಹೈ ಕೋರ್ಟ್‌ ಏಕ ಸದಸ್ಯ ಪೀಟ 08-01-2024 ರಲ್ಲಿಯೇ ಆದೇಶ ಹೊರಡಿಸಿದ್ದು, ಅರ್ಜಿದಾರರು ತಮ್ಮ ಪ್ರಕರಣಕ್ಕೆ ಸಂಬಂದಿಸಿದಂತೆ, ಅಂದರೆ 2014 ಪೂರ್ವ ಅಥವಾ ನಂತರ ನಿವೃತ್ತರಾದವರು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು, ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಲ್ಲಿ ಅರ್ಜಿ ಸಲ್ಲಿಸಿ, ಹೆಚ್ಚುವರಿ ಪಿಂಚಣಿ ಪಡೆಯಲು ಆರ್ಹರಿದ್ದಾರೆ ಎಂದು ಆದೇಶ ನೀಡಿದೆ.

ಪ್ರಕರಣದ ವಿವರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಾವಿರಾರು ನಿವೃತ್ತ ನೌಕರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ದಾಖಲು ಮಾಡಿ, ತಮಗೆ ಸರ್ವೋಚ್ಚ ನ್ಯಾಯಾಲಯದ ಆರ್‌.ಸಿ.ಗುಪ್ತ ಪ್ರಕರಣದ ತೀರ್ಪಿನಾನ್ವಯ ಇಪಿಎಫ್ಒ ಅಧಿಕಾರಿಗಳು ಹೆಚ್ಚುವರಿ ಪಿಂಚಣಿ ನೀಡಬೇಕೆಂದು ಕೋರಿದ್ದರು. ಅದರ ಭಾಗವಾಗಿ ಈ ಅರ್ಜಿದಾರರ ಪ್ರಕರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ಕೈಗೆತ್ತುಕೊಂಡಿತು.

ಅರ್ಜಿದಾರರ ಪರ ಮತ್ತು ವಿರುದ್ಧ ವಕೀಲರಿಬ್ಬರ ವಾದ ಹಾಗೂ ಪ್ರತಿವಾದವನ್ನು ಆಲಿಸಿ ಹೈ ಕೋರ್ಟ್‌ ನ್ಯಾಯಪೀಠ ಜನವರಿ 8-2024 ರಂದು ಆದೇಶ ಹೊರಡಿಸಿದ್ದು, ಅರ್ಜಿದಾರರಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿದೆ.

ಅಂದರೆ, ಸರ್ವೋಚ್ಚ ನ್ಯಾಯಾಲಯವು 04- 11- 2022 ರಂದು ಸುನಿಲ್ ಕುಮಾರ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಾನ್ವಯ ಈ ಅರ್ಜಿದಾರರು ತಮ್ಮ ಎಲ್ಲ ಅಹವಾಲುಗಳನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಮುಂದೆ ಕಾನೂನಾತ್ಮಕವಾಗಿ ಮಂಡಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದು ಆದೇಶಿಸಿದೆ.

ಸಲ್ಲದ ಸುತ್ತೋಲೆಗಳನ್ನು ಹೊರಡಿಸಿದ ಇಪಿಎಫ್ಒ ಅಧಿಕಾರಿಗಳು: ಇನ್ನು ಸುನಿಲ್ ಕುಮಾರ್ ತೀರ್ಪಿನ ನಂತರ ಇಪಿಎಫ್ಒ ಅಧಿಕಾರಿಗಳು ಹಲವಾರು ಸಲ್ಲದ ಸುತ್ತೋಲೆಗಳನ್ನು (circulars) ಹೊರಡಿಸಿದ್ದು, ಸೆಪ್ಟೆಂಬರ್ 1, 2014ಕ್ಕೂ ಪೂರ್ವ ನಿವೃತ್ತರಾದ ನೌಕರರು ಹೆಚ್ಚುವರಿ ಪಿಂಚಣಿ ಪಡೆಯಬೇಕಾದರೆ ಮೂರು ನಿಬಂಧನೆಗಳಿಗೆ ಒಳಪಟ್ಟಿರಬೇಕು ಎಂದು ಹೇಳಿದ್ದಾರೆ.

1) ನೌಕರನ ಮಾಸಿಕ ಒಟ್ಟು ವೇತನದ ಮೇಲೆ 8.33% ದೇಣಿಗೆಯನ್ನು ಪಾವತಿಸಿರಬೇಕು ( ರೂ. 417/-& 541/- ಅನ್ವಯಿಸುವುದಿಲ್ಲ) 2) ಜಂಟಿ ಆಯ್ಕೆ ಪತ್ರ ಸಲ್ಲಿಸಿರಬೇಕು.3) ಅಥವಾ ಸಲ್ಲಿಸಿದ್ದ, ಜಂಟಿ ಆಯ್ಕೆ ಪತ್ರ ತಿರಸ್ಕೃತಗೊಂಡಿರಬೇಕು. ಆದರೆ, ಈ ಮೂರು ನಿಬಂಧನೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಾಲಿಸಿಲ್ಲ. ಇದರಿಂದ ನಿವೃತ್ತ ನೌಕರರು ಹೆಚ್ಚುವರಿ ಪಿಂಚಣಿ ಪಡೆಯಲು ಕಷ್ಟಸಾಧ್ಯವಾಗುತ್ತಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯದಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

2014ಕ್ಕೂ ಪೂರ್ವ ನಿವೃತ್ತರಾದವರು ದೃತಿಗೆಡುವುದು ಬೇಡ, ಆರ್‌.ಸಿ. ಗುಪ್ತ ಸಲ್ಲಿಸಿರುವ ನ್ಯಾಯಾಲಯ ನಿಂದನಾ ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದ್ದು, ಈ ತೀರ್ಪೆ, ಈ ನಿವೃತ್ತರ ಪಾಲಿಗೆ ಅಂತಿಮ ನಿರ್ಣಯವಾಗಲಿದೆ ಎಂದು ಹೇಳಿದ ಅವರು, ಇನ್ನು ಸೆಪ್ಟೆಂಬರ್ 1-2014 ನಂತರ ನಿವೃತ್ತರಾದವರಿಗೆ ಸಂಬಂಧಿಸಿದ್ದಂತೆ ಜಂಟಿ ಆಯ್ಕೆ ಪತ್ರ, ನೌಕರರ ಸೇವಾ ವಿವರ ಹಾಗೂ ವೇತನ ವಿವರ, ಇತ್ಯಾದಿ ವಿವರಗಳನ್ನು ಉದ್ಯೋಗದಾತನು (employer) ಇದೆ ಮೇ 31ರ ಒಳಗೆ ಸಲ್ಲಿಸಲು ಸಮಯಾವಕಾಶವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸಾರಿಗೆ ನೌಕರರಿಗೆ ನಿರಾಸೆ KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ... ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ: ಪುರಸಭೆ ಮಾಜಿ ಸದಸ್ಯ ನೀಲಕಂಠ