ಬೆಂಗಳೂರು: ಸಾರಿಗೆ ನೌಕರರಿಗೆ 2020ರ ಜನವರಿ 1ರಿಂದ ಬರಬೇಕಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಸಂಬಂಧ ಕಳೆದ 2023ರ ಆ.10ರಂದು ನೌಕರರ ವಿವಿಧ ಸಂಘಟನೆಗಳ ಮುಖಂಡರ ಸಭೆ ಕರೆದು ಒನ್ ಮ್ಯಾನ್ ಕಮಿಟಿ ಅಧ್ಯಕ್ಷ ನಿವೃತ್ತ ಐಎಎಸ್‌ಅಧಿಕಾರಿ ಎಂ.ಆರ್.ಶ್ರೀನಿವಾಸ್‌ಮೂರ್ತಿ ಅವರು ಆ ಸಭೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ನೌಕರರಿಗೆ ಬರಬೇಕಿರುವ ಈ ಹಿಂಬಾಕಿ ಕುರಿತು ಚರ್ಚಸಲು ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 10ರಂದೆ ಸಭೆ ನಡೆದಿದೆ. ಆದ್ರೂ 2020ರ ಜನವರಿ 1ರಿಂದಲೇ ಹಿಂಬಾಕಿ ( Arrears) ಕೊಡುವ ಸಂಬಂಧ ಮಾರ್ಚ್‌ನಿಂದ ಈವರೆಗೂ ಸರ್ಕಾರ ಮಾತ್ರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಒನ್ ಮ್ಯಾನ್ ಕಮಿಟಿ ಸಭೆ ನಡೆದಾಗ ಸಾರಿಗೆ ಉನ್ನತ ಅಧಿಕಾರಿಗಳು, ಸರ್ಕಾರದ ಅಧಿಕಾರಿಗಳು, ನೌಕರರ ಸಂಘಟನೆಗಳು ಹಾಗೂ ನ್ಯಾಯಾಲಯದ ಅಧಿಕಾರಿಗಳು ಸಭೆ ನಡೆಸಿ ಅಂದು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸರ್ಕಾರಕ್ಕೆ ವರದಿ ಮಾಡಲಾಗಿದೆ.
ಆದರೆ ಅಂದಿನ ಸಭೆಯಲ್ಲಿ ಏನು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸಭೆಯಲ್ಲಿ ಹಾಜರಾದ ಸಂಘಟನೆಗಳ ಮುಖಂಡರು ಹೇಳಿಲ್ಲ. ಇತ್ತ ಸರ್ಕಾರವೂ ಈ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಇದರಿಂದ ನೌಕರರು ಹಿಂಬಾಕಿಗಾಗಿ ಚಾತಕಪಕ್ಷಿಯಂತೆ ಕಾಯುತ್ತ ಕುಳಿತಿದ್ದಾರೆ.
ಜತೆಗೆ ಇದರಿಂದ ಬೇಸತ್ತಿದ್ದು, ಸಾರಿಗೆ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈಗ ಮಾಡಿರುವ ಹೋರಾಟದಿಂದ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇದಕ್ಕೆ ಅಂತ್ಯ ಕಾಣಬೇಕು ಎಂದರೆ ನಾವು ಹೈ ಕೋರ್ಟ್ ಮೊರೆ ಹೋಗುವುದೊಂದೆ ಬಾಕಿ ಎಂದು ಕೆಲ ನಿವೃತ್ತ ನೌಕರರು ನಿರ್ಧರಿಸಿರುದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಸರ್ಕಾರ ಈಗಲಾದರೂ ನಮಗೆ ಹಿಂಬಾಕಿಯನ್ನು ಕೊಡುವ ಬಗ್ಗೆ ಸ್ಪಷ್ಟಪಡಿಸಬೇಕು, ಇಲ್ಲದಿದ್ದರೆ ಇನ್ನು 15ದಿನಗಳ ವರೆಗೆ ಕಾದು ನೋಡಿ ಅಷ್ಟರೊಳಗೆ ಸರ್ಕಾರ ತನ್ನ ನಿಲುವನ್ನು ಪ್ರಕಟಿಸದಿದ್ದರೆ ನಾವು ಹೈಕೋರ್ಟ್ ಮೆಟ್ಟಿರೇರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.