- ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು
- ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್ ಅಧಿಕಾರಿಗಳ ಬಣ್ಣ ಬಯಲು
- BMTC ಮಹಿಳಾ DTO ಒಬ್ಬಳು ಟಿಸಿಗಳಿಗೆ ತರಕಾರಿ ತರುವುದಕ್ಕೆ ಬ್ಯಾಗ್ ಕೊಟ್ಟು ಕಳಿಸುತ್ತಾಳೆ
- ಇವರಪ್ಪ ಕೊಟ್ಟಿದ್ದಾನಾ ಟಿಸಿಗಳಿಗೆ ಹಣ – ಈಕೆ ಟಿಸಿಗಳನ್ನು ಮನೆಯಾಳುಗಳಂತೆ ಕಾಣುತ್ತಾಳಂತೆ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ನಿಗಮಗಳಲ್ಲಿ ಪ್ರತಿ ತಿಂಗಳು ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಎಲ್ಲ ಸಂಚಾರ ನಿಯಂತ್ರಕರಿಂದ ಅಧಿಕಾರಿಗಳು ತಲಾ 1000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಇದು ಆರೋಪವಲ್ಲ ಪ್ರತಿ ತಿಂಗಳು ನಡೆಯುತ್ತಿರುವುದು ಸತ್ಯ ಎಂದು ನಿಷ್ಠಾವಂತ ಟಿಸಿಗಳು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಕಣ್ಣೀರು ಹಾಕುವ ಮೂಲಕ ತಮಗಾಗುತ್ತಿರುವ ಕಿರುಕುಳವನ್ನು ವಿಜಯಪಥ ವರದಿಗಾರರ ಬಳಿ ತೋಡಿಕೊಂಡಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಆರ್‌ಟಿಐ ಕಾರ್ಯಕರ್ತ ಗೋಳೂರು ನಾಗರಾಜ್ ಅವರು ಕೂಡ ಈ ಸಂಬಂಧ KSRTC ವ್ಯವಸ್ಥಾಪಕ ನಿರ್ದೇಶಕಕರಿಗೆ ಪತ್ರ ಬರೆದಿದ್ದು ಬಹುತೇಕ ಎಲ್ಲ ಲಂಚಕೋರರಾದ ವಿಭಾಗೀಯ ನಿಯಂತ್ರಣಾಧಿಕಾರಿಗಳು (DC), ವಿಭಾಗೀಯ ಸಂಚಲನಾಧಿಕಾರಿಗಳ (DTO) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಾಜ್ ಅವರು ಮಾಹಿತಿ ಕಲೆಹಾಕಿದ್ದು ತುಮಕೂರು ವಿಭಾಗದ ತುಮಕೂರು ನಗರದ ಡಿ.ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸಂಚಾರ ನಿಯಂತ್ರಕರು ಪ್ರತಿ ತಿಂಗಳು 1000 ರೂಪಾಯಿಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಯವರಿಗೆ ನೀಡಬೇಕೆಂದು ಬೇಸರ ವ್ಯಕ್ತಪಡಿಸಿರುವ ಬಗ್ಗೆ ಎಂಡಿ ಅವರ ಗಮನಕ್ಕೆ ತಂದಿದ್ದಾರೆ.
ಅಲ್ಲದೆ ನಾವು ಪ್ರತಿ ದಿನ ನಮ್ಮ ಕರ್ತವ್ಯ ಏನಿದಿಯೋ ಆ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ ನಿರ್ವಾಹಕರಿಂದ ನಾವು ಐದು ಹತ್ತು ರೂಪಾಯಿಗಳಿಗೆ ಕೈ ಒಡ್ಡುವುದಿಲ್ಲ. ಈಗೀನ ಪರಿಸ್ಥಿತಿಯಲ್ಲಿ ನಿರ್ವಾಹಕರು ಯಾರು ಕೈ ನೀಡಿ ಐದು ಹತ್ತು ರೂಪಾಯಿಗಳನ್ನು ಕೊಡುವುದಿಲ್ಲ.
ಆದರೆ, ಕೆಲವು ಸಂಚಾರ ನಿಯಂತ್ರಕರು ರಾಜಾರೋಷವಾಗಿಯೇ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಒಬ್ಬೊಬ್ಬರಿಂದ 1000 ರೂಪಾಯಿ ಕೊಡಲೇಬೇಕು ಎಂದು ಧಮ್ಕಿ ಹಾಕುವ ಮುಖಾಂತರ ವಸೂಲಿ ಮಾಡುವ ಮನೋಭಾವನೆ ಹೊಂದಿದ್ದಾರೆ.
ಅದಕ್ಕೆ ತುಮಕೂರು ವಿಭಾಗವನ್ನು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವುದು ಹೇಗೆ ಎಂದು ಹೇಳಿಕೊಡು ಟ್ರೈನಿಂಗ್ ಶಾಲೆ ಎಂದೇ ಕರೆಯಲಾಗುತ್ತಿದೆ ಹಾಗೂ ಇದು ಭ್ರಷ್ಟರ, ಲಂಚಕೋರರ ತವರು ಮನೆಯಾಗಿದೆ. ಇನ್ನು ಎಲ್ಲ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ನಿಯಂತ್ರಕರು ಪ್ರತಿ ತಿಂಗಳು 1 ಸಾವಿರ ರೂಪಾಯಿ ಕೊಡದಿದ್ದರೆ ಅವರಿಗೆ ಬೆದರಿಕೆ ಹಾಕುತ್ತಾರೆ ಈ ಭ್ರಷ್ಟ ಅಧಿಕಾರಿಗಳ ಚೇಳಗಳು.
ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಹಣ ವಸೂಲಿ ಮಾಡಿ ಕೊಡುವ ಉದ್ದೇಶಕ್ಕಾಗಿ ATS ಮಾಸಪ್ಪ ಎಂಬುವರನ್ನು ನಿಯೋಜಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರು ನೋಡುವುದಿಲ್ಲ ಎಂಬ ಗಾದೆ ಮಾತಿನಂತೆ ವಿಭಾಗೀಯ ನಿಯಂತ್ರಣಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳು ಈ ರೀತಿ ಭ್ರಷ್ಟಾಚಾರವೆಸಗುತ್ತಿರುವುದು ಸರಿಯೇ? ಈ ಅಧಿಕಾರಿಗಳ ನಡೆಯಿಂದ ತುಮಕೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರು, ಸಂಚಾರ ನಿಯಂತ್ರಕರು ಕರ್ತವ್ಯ ನಿರ್ವಹಿಸುವುದೇ ದೊಡ್ಡ ತಲೆನೋವಾಗುತ್ತಿದೆ.
ಹೀಗಾಗಿ ಮೊದಲು ಈ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಸಿಬ್ಬಂದಿಗಳಿಗೆ ನೀಡುತ್ತಿರುವ ಲಂಚದ ಹಿಂಸೆಯಿಂದ ತಪ್ಪಿಸಿ ನೌಕರರು ಅವರಷ್ಟಕ್ಕೆ ಅವರು ನಿಷ್ಠೆಯಿಂದ ಡ್ಯೂಟಿ ಮಾಡುವ ವಾತಾವರಣ ಸೃಷ್ಟಿಸಬೇಕು ಎಂದು ನಾಗರಾಜ್ ನಿಗಮದ ಎಂಡಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇನ್ನು ಈ ರೀತಿ ಬರಿ ತುಮಕೂರು ಸಾರಿಗೆ ವಿಭಾಗದಲ್ಲಿ ಮಾತ್ರನೆ ನಡೆಯುತ್ತಿಲ್ಲ. ಇದು 4 ನಿಗಮಗಳಲ್ಲೂ ಇದೆ. ಬಿಎಂಟಿಸಿಯಲ್ಲಿರುವ ಬಹುತೇಕೆ ಡಿಸಿಗಳು ಹಾಗೂ ಡಿಟಿಒಗಳು ಕೂಡ ಇದೇರೀತಿ ವಸೂಲಿ ಮಾಡುತ್ತಿದ್ದು, ಅದರಲ್ಲಿ ಡಿಟಿಒ ಮಹಿಳಾ ಅಧಿಕಾರಿಯೊಬ್ಬಳು ಟಿಸಿಗಳಿಗೆ ಮನೆಗೆ ತರಕಾರಿ ತೆಗೆದುಕೊಂಡು ಬಾ ಎಂದು ಬ್ಯಾಗ್ ಕೊಟ್ಟು ಹಣಕೊಡದೆ ಕಳಿಸುತ್ತಿದ್ದಾಳೆ.
ಅಲ್ಲದೆ ಈಕೆ ಟಿಸಿಗಳನ್ನು ಇವಳ ಮನೆ ಕೆಲದ ಆಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ವಿಜಯಪಥ ವರದಿಗಾರರ ತಂಡ ಸತ್ಯಶೋಧನೆ ಕಾರ್ಯದಲ್ಲಿ ತೊಡಗಿದೆ. ಈಕೆಯ ಲಂಚಾವತಾರ ಹಾಗೂ ಟಿಸಿಗಳಿಂದ ಮನೆಗೆ ತರಕಾರಿ ಇತರೆ ದಿನ ಬಳಕೆಯ ದವಸವನ್ನು ತರಿಸಿಕೊಳ್ಳುತ್ತಿರುವುದು ಸಿಕ್ಕರೆ ಅಂದೆ ಈ ಮಹಿಳಾ ಡಿಟಿಒ ಫೋಟೋ ಸಹಿತ ವರದಿ ಪ್ರಕಟಿಸಲಾಗುವುದು.
Related

You Might Also Like
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...