ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳನ್ನು ಹೇಗೆ ಕಿತ್ತು ತಿನ್ನುತ್ತಾರೆ ಎಂದರೆ ಇತ್ತ ಪ್ರಯಾಣ ಮಾಡಿದ ಜನರು ಅವರು ತಲುಪುವ ನಿಲ್ದಾಣದವರೆಗೆ ತೆದುಕೊಂಡ ಟಿಟೆಕ್ ದರಕ್ಕಿಂತ ಒದೇಒಂದು ರೂಪಾಯಿ ಹೆಚ್ಚಿಗೆ ಇದ್ದರೂ ಕಾರಣ ಕೇಳಿ ಮೆಮೊ ಕೊಟ್ಟು ವಸೂಲಿ ಮಾಡುವ ತನಕ ಕಿತ್ತು ತಿನ್ನುತ್ತಿದ್ದಾರೆ.
ಜತೆಗೆ ಆ ವಿಚಾರಣೆ ಈ ವಿಚಾರಣೆ ಎಂದು ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಗೆ ಕರೆಸಿಕೊಂಡು ಬೆಳಗ್ಗೆಯಿಂದ ರಾತ್ರಿವರೆಗೂ ಕಚೇರಿಯ ಹೊರಗಡೆಯೇ ಒಂದು ರೀತಿ ಅಪರಾಧಿಗಳಂತೆ ಕಾಯಿಸಿ ಕಾಯಿಸಿ ಬಳಿಕ ಸಾಹೇಬರು ಬೇರೆ ಕೆಲಸದಲ್ಲಿ ಬ್ಯುಸಿ ಇದ್ದಾರೆ ನಾಳೆ ಬಾ ಎಂದು ಸ್ವಲ್ಪವೂ ಗೌರವ ಕೊಡದೆ ಭದ್ರತಾ ಸಿಬ್ಬಂದಿ ಏಕವಚನದಲ್ಲೇ ಹೇಳಿಸುವ ಮೂಲಕ ಒಂದು ರೀತಿ ಹೊರದಬ್ಬುತ್ತಿದ್ದಾರೆ.
ಅದರ ಜತೆಗೆ ಕೆಲ ಅಧಿಕಾರಿಗಳು ತಾಯಿ ಗರ್ಭದಿಂದ ನಾವು ಬಂದವರಲ್ಲ ಮೇಲಿಂದ ಉದುರಿದವರು ಎಂಬಂತೆ ಚಾಲನಾ ಸಿಬ್ಬಂದಿಗಳನ್ನು ಅತ್ಯಂತ ಕೀಳಾಗಿ ಕಾಣುತ್ತಾರೆ ಅಲ್ಲದೆ ಅದೇ ರೀತಿ ನಡೆಸಿಕೊಳ್ಳುತ್ತಾರೆ.ಈಗಲೂ ನಡೆಸಿಕೊಳ್ಳುತ್ತಿದ್ದಾರೆ ಕೂಡ. ಇನ್ನು ಕೇಂದ್ರ ಕಚೇರಿಯಲ್ಲಿ ಇರುವ ಕೆಲ ಭದ್ರತಾ ಸಿಬ್ಬಂದಿಗಳು ಮತ್ತು ಕೆಳಹಂದತ ಅಧಿಕಾರಿಗಳು ಹಾಗೂ ಸಿಬ್ಬಂಗಳು ಕೂಡ ಆ ಸಾಹೇಬರ ಮೀರಿಸುವ ರೀತಿಯಲ್ಲೇ ನೌಕರರ ಮುಂದೆ ನಡೆಸಿಕೊಳ್ಳುತ್ತಾರೆ.
ಇವರು ದರ್ಪ ತೋರುವ ಚಾಲನಾ ಸಿಬ್ಬಂದಿಗಳು 15 ದಿನಗಳ ಕಾಲ ಒಂದೇವೊಂದು ವಾಹನವನ್ನು ಹೊರಗೆ ತೆಗೆಯದೆ ಹೋದರೆ ಇವರಿಗ್ಯಾರಿಗೂ ವೇತನವೇ ಬರುವುದಿಲ್ಲ, ಬಂದ್ರೆ ಅದು ಸರ್ಕಾರದ ಖಜಾನೆಯಿಂದ ಬಳುವಳಿಯಾಗಿ ಬರಬೇಕು. ಅಂದರೆ ಚಾಲನಾ ಸಿಬ್ಬಂದಿಗಳ ಮುಖ್ಯ ಶ್ರಮದಿಂದ ಇವರೂ ಸೇರಿದಂತೆ ಇವರ ಕುಟುಂಬ ನೆಮ್ಮದಿಯಿಂದ ಮೂರು ಹೊತ್ತು ಊಟ ಮಾಡುತ್ತಿದೆ. ಆದರೆ ಆ ಸತ್ಯವನ್ನೇ ಈ ಮೂರ್ಖರು ಮರೆತ್ತಿದ್ದಾರೆ ಎಂದರೆ ಏನು ಹೇಳಬೇಕು.
ಆದರೂ ಅವರು ಕೇಂದ್ರ ಕಚೇರಿಗೆ ಬಂದರೆ ಸಾಮಾನ್ಯನಿಗೆ ಅಂದರೆ ಒಬ್ಬ ಸಾರ್ವಜನಿಕ ಬಂದರೆ ಕೊಡುವ ಗೌರವದಲ್ಲಿ 10% ಕೂಡ ಗೌರವ ಕೊಡದೆ ನಡೆಸಿಕೊಳ್ಳುತ್ತೀರ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು. 300-400 ಕಿಲೋ ಮೀಟರ್ ದೂರದಿಂದ ನಿಮ್ಮನ್ನು ನೋಡಲು ಬರುವ ನೌಕರರಿಗೆ ನೀವು ಕೊಡುವ ಗೌರವ ಇದೇನಾ? ಅವರು ಬರುವುದು ಏತಕ್ಕೆ ನಿಮ್ಮ ಬಳಿ ಬಂದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಲ್ವಾ?.
ಆದರೆ, ನಿಮಗೆ ನಿಮ್ಮ ಡ್ಯೂಟಿಗಿಂತ ಹರಟೆ ಹೊಡೆದುಕೊಂಡು ಕೆಲ ಡಿಪೋಗಳಿಂದ ಬರುವ ಸೂಟ್‌ಕೇಸ್ ಎತ್ತಿಕೊಂಡು ಹೋಗುವುದೇ ನಿಮ್ಮ ಡ್ಯೂಟಿ ಎಂದು ದಿನಬೆಳಗಾದರೆ ಕಚೇರಿಗೆ ಬರುತ್ತೀರಿ ಅಲ್ವಾ? ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು. ಇಂಥ ಕೆಟ್ಟ ಸಂಸ್ಕೃತಿಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರಿಗೆ ಮೊದಲು ಛೀಮಾರಿ ಹಾಕಬೇಕು.
ಹೌದು ಇಷ್ಟೆಲ್ಲ ಏಕೆ ವಿವರವಾಗಿ ಹೇಳಬೇಕಾಗಿದೆ ಎಂದರೆ ಇಂದು ಚಾಲನಾ ಸಿಬ್ಬಂದಿಗಳು ಕೇಂದ್ರ ಕಚೇರಿಗೆ ಹೋದರೆ ಅಲ್ಲಿ ಕೆಲ ಅಧಿಕಾರಿಗಳು ನೌಕರರನ್ನು ಭಾರಿ ಕೀಳಾಗಿ ಕಾಣುತ್ತಿದ್ದಾರೆ. ಅಲ್ಲದೆ ಅವರನ್ನು ಗಂಟೆಗಟ್ಟಲೆ ಹೊರಗಡೆ ನಿಲ್ಲಿಸಿ ಅವಮಾನ ಮಾಡುತ್ತಿದ್ದಾರೆ. ಪಾಪ ಆ ಚಾಲನಾ ಸಿಬ್ಬಂದಿಗಳು ಇವರನ್ನು ಭೇಟಿ ಮಾಡಲು ನೂರಾರು ಕಿಲೋ ಮೀಟರ್ ದೂರದಿಂದ ಬಸವಳಿದು ಬಂದಿರುತ್ತಾರೆ. ಆದರೆ ಇವರು ಸಮಸ್ಯೆ ಪರಿಹರಿಸಿ ಎಂದು ಕೇಳಿಕೊಂಡು ಬರುವ ನೌಕರರ ಸಮಸ್ಯೆ ಪರಿಹರಿಸುವ ಬದಲು ಸೌಜನ್ಯಕ್ಕಾದರೂ ಭೇಟಿ ಮಾಡದೆ ವಾಪಸ್ ಕಳುಹಿಸುತ್ತಿದ್ದಾರೆ.
ಇದರಿಂದ ನಿದ್ರೆ ಆಹಾರವನ್ನು ಬಿಟ್ಟು ಬರುವ ನೌಕರರು ಕಚೇರಿಗೆ ಬಂದು ಸಾಹೇಬರು ಎಲ್ಲಿ ವಾಪಸ್ ಹೋಗಿಬಿಡುತ್ತಾರೋ ಎಂಬ ದಿಗಿಲಿನಲ್ಲೇ ಮೂತ್ರ ವಿಸರ್ಜನೆಗೆ ಹೋಗಬೇಕಿದ್ದರೂ ಅದನ್ನು ಗಂಟೆಗಟ್ಟಲೆ ತಡೆದುಕೊಂಡು ಈಗ ಕರೆಯುತ್ತಾರೇನೋ ಈಗ ಕರೆಯುತ್ತಾರೇನೋ ಎಂದು ಸಾಹೇಬರ ಕೊಠಡಿಯಿಂದ 50 ಮೀಟರ್ ದೂರದಲ್ಲೇ ನಿಂತು ಅತ್ತ ಕಡೆಯೇ ನೋಡುತ್ತಿರುತ್ತಾರೆ. ಆದರೆ ಆ ಸಾಹೇಬ ಸೂಟ್‌ಕೇಸ್ ತೆಗೆದುಕೊಂಡ ಬಂದವರ ಹತ್ತಿರ ಸ್ನ್ಯಾಕ್ಸ್ ತಿಂಡಿ, ಕಾಫಿ ಸೇವಿಸುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿರುತ್ತಾರೆ.
ಆದರೆ ಪಾಪ ನೌಕರರು ನಮ್ಮ ಸಾಹೇಬರು ಏನೋ ಬ್ಯುಸಿಯಾಗಿದ್ದಾರೆ ಎಂದು ನಿಂತಿದ್ದ ಸ್ಥಳದಿಂದ ಅತ್ತಿತ್ತ ಅಲುಗಾಡದೇ ಈ ಸಾಹೇಬನ ಕರೆಗಾಗಿ ಕಾಯುತ್ತಿರುತ್ತಾರೆ. ಆದರೆ ಮುಟ್ಟಾಳ ಸಾಹೇಬ ಸೂಟ್‌ಕೇಸ್ ತೆಗೆದುಕೊಂಡು ಹೋಗುವುದಕ್ಕೆ ರೆಡಿಯಾಗಿ ನಿಂತಮೇಲೆ ಭದ್ರತಾ ಸಿಬ್ಬಂದಿಯನ್ನು ಕರೆದು ಹೇ ನೋಡು ಇವತ್ತು ನಾವು ಯಾವ ನೌಕರರನ್ನು ಭೇಟಿಯಾಗುವುದಕ್ಕೆ ಆಗುವುದಿಲ್ಲ ಕೆಲಸದ ನಿಮಿತ್ತ ಹೊರೆಗೆ ಹೋಗುತ್ತಿದ್ದೇವೆ ಎಲ್ಲರಿಗೂ ತಿಳಿಸಿಬಿಡು ಎಂದು ಹೇಳಿ ಹೊರಡುತ್ತಾನೆ.
ಇತ್ತ ಸಾಹೇಬರಿಗೆ ಭಾರಿ ನಿಷ್ಠೆಯಿಂದ ಇರುವ ಟೇಬಲ್ ಕೆಳಗೆ ಆ ಸಾಹೇಬರಿಂದಲೇ ಅದನ್ನು ತೆಗೆದುಕೊಳ್ಳುವ ಭದ್ರತಾ ಸಿಬ್ಬಂದಿ ಸರಿ ಸಾಹೇಬರೆ ಎಂದು ಹೇಳಿ ಹೊರಗೆ ಬರುತ್ತಾನೆ. ಬಳಿಕ ಗತ್ತಿನಲ್ಲಿ ನೋಡಿ ಇವತ್ತು ಟೈಮ್ ಆಗಿದೆ ಅಲ್ಲದೆ ಸಾಹೇಬರಿಗೆ ಬೇರೆ ಕೆಲಸವಿರುವುದರಿಂದ ಇಂದು ಅವರು ಸಿಗುವುದಿಲ್ಲ ನೀವೆಲ್ಲ ಹೊರಡಿ ಎಂದು ಒಂದು ರೀತಿ ಅವಾಜ್‌ಹಾಕುವ ರೀತಿಯಲ್ಲೇ ಹೇಳುತ್ತಾನೆ.
ಪಾಪ ನೂರಾರು ಕಿಲೋ ಮೀಟರ್ ದೂರದಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ನೌಕರರು ಸಮಸ್ಯೆ ಪರಿಹರಿಸುವುದಿರಲಿ ಹೇಳಿಕೊಳ್ಳುವುದಕ್ಕೂ ಅವಕಾಶ ಸಿಗಲಿಲ್ಲವಲ್ಲ ಎಂದು ಮತ್ತೆ ತಮ್ಮೂರಿನತ್ತ ಹೋಗುತ್ತಾರೆ. ಅಂದರೆ ಕೆಲ ಅಧಿಕಾರಿಗಳ ನಡೆಯಿಂದ ಸಾವಿರಾರು ನೌಕರರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಅಲ್ಲದೆ ಇಂಥ ಅಧಿಕಾರಿಗಳಿಂದ ಪರಿಹಾರ ಸಿಗುತ್ತದೆ ಎಂದು ಬಂದು ನೋವಿನಲ್ಲಿ ವಾಪಸ್ ಹೋಗುವಂತಾಗುತ್ತಿದೆ.
ಹೀಗಾಗಿ ಈ ಬಗ್ಗೆ ಸಾರಿಗೆ ಆಡಳಿತ ಮಂಡಳಿ ಮತ್ತು ಸರ್ಕಾರ, ಸಾರಿಗೆ ಸಚಿವರು ಈ ಬಗ್ಗೆ ಗಮನಹರಿಸಿ ನೊಂದ ನೌಕರರ ಸಮಸ್ಯೆ ಆಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಮಾಣಿಕ ಅಧಿಕಾರಿಗಳು ಮತ್ತು ನೊಂದ ನೌಕರರ ಒತ್ತಾಯಿಸಿದ್ದಾರೆ.