Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರಿಗೆ ಮಾರಕವಾಗುವ ರೀತಿ ಆಡಳಿತ ವರ್ಗಕ್ಕೆ ಸಲಹೆ ಕೊಡುತ್ತಿರುವ ಸಾರಿಗೆಯ ಕೆಲ ಕಾರ್ಮಿಕ ಸಂಘಟನೆಗಳು..!!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ ಕೋವಿಡ್‌ ನೆಪವೊಡ್ಡಿ 1ನೇ ಜನವರಿ 2020ರಿಂದ ಜಾರಿಯಾಗಿರುವ ವೇತನ ಪರಿಷ್ಕರಣೆಯನ್ನು 2020 ಜನವರಿಯಿಂದ 2021ರ ಡಿಸೆಂಬರ್‌ ವರೆಗೆ  ನಿವೃತ್ತರಾದ ನೌಕರರಿಗೆ ಕೊಡದೆ ವಂಚಿಸಲು ಕೆಲ ಸಂಘಟನೆಗಳೇ ಪಿತೋರಿ ನಡೆಸುತ್ತಿವೆ ಎಂದು ನಿವೃತ್ತ ನೌಕರರು ಆರೋಪಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕೋವಿಡ್‌ ನೆಪ ಹೇಳಿಕೊಂಡು 2020 ಮತ್ತು 2021ರ ವರೆಗೆ ಅಂದರೆ 2 ವರ್ಷದ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ಕೊಡದೆ 2022ರಿಂದ ಕೊಡುವುದಕ್ಕೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ ತೀರ್ಮಾಸಲು ಹೊರಟಿದೆ. ಇದಕ್ಕೆ ನೌಕರರ ಕೆಲ ಸಂಘಟನೆಗಳು ಒಳ ಒಪ್ಪಂದ ಮಾಡಿಕೊಂಡು ಒಪ್ಪಿಕೊಂಡಿವೆ ಎಂದು ನಿವೃತ್ತ ನೌಕರರು ಕಿಡಿಕಾರುತ್ತಿದ್ದಾರೆ.

ಇನ್ನು ಈ 2020 ಮತ್ತು 2021ರ ನಡುವೆ ನಿವೃತ್ತರಾಗಿರುವ ಸಾರಿಗೆ ನೌಕರರಿಗಷ್ಟೇ ಈ ಅನ್ಯಾಯವಾಗುತ್ತಿದ್ದು ಇವರೆಲ್ಲರೂ ಒಟ್ಟಾಗಿ ಸೇರಿ ಕೋರ್ಟ್‌ ಮೊರೆಹೋಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಾರಿಗೆ ನಿಗಮಗಳ ಆಡಳಿತ ಮಂಡಳಿ ಈ ರೀತಿ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳದಿದ್ದರೂ ಕೆಲ ಸಂಘಟನೆಗಳ ಮುಖಂಡರು ಇದೇ ರೀತಿ ಮಾಡಿ ಎಂದು ಸಲಹೆ ನೀಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ನಮ್ಮ ಪರ ಧ್ವನಿ ಎತ್ತಬೇಕಾದ ಈ ಮೂರ್ಖರು ಈ ರೀತಿ ಇಬ್ಬಗೆ ನೀತಿ ಅನುಸರಿಸುತ್ತಿರುವುದರಿಂದ ನಮಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಉಳಿದಂತೆ 2022ರ ಜನವರಿಯಿಂದ ಈಚೆಗೆ ನಿವೃತ್ತರಾಗುತ್ತಿರುವ ನೌಕರರಿಗೆ ಇದು ಅನ್ವಯವಾಗುವುದಿಲ್ಲ. ಅವರಿಗೆ ಬರುಬೇಕಿರುವ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ನಮಗೆ ಮಾತ್ರ ಈರೀತಿ ಅನ್ಯಾಯಮಾಡಲು ಹೊರಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಿದ್ದಾರೆ.

ಇತ್ತ ಕೋವಿಡ್‌ ವೇಳೆ ಯಾವುದೇ ಜನಪ್ರತಿನಿಧಿಯಾಗಲೀ ಇಲ್ಲ ಯಾವುದೇ ಸರ್ಕಾರಿ ನೌಕರರಾಗಲಿ ಅಥವಾ ಬೇರೆ ನಿಗಮಗಳ ನೌಕರರಾಗಲಿ ಈ ರೀತಿ ಬರಬೇಕಿರುವುದನ್ನು ಬಿಟ್ಟಿಲ್ಲ. ಎಲ್ಲರೂ ವೇತನ ಹೆಚ್ಚಳ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಆದರೆ ನಮಗೆ ಮಾತ್ರ ಏಕೆ 2 ವರ್ಷದ ಸೌಲಭ್ಯವನ್ನು ಕೊಡಲಾಗುತ್ತಿಲ್ಲ ಎಂದು ಹೇಳಬೇಕು. ಇದಕ್ಕೆ ಕುಂಟುನೆಪ ಸಲ್ಲದು ಎಂದು ಕಿಡಿಕಾರಿದ್ದಾರೆ.

ಸಾರಿಗೆ ನಿಗಮಗಳಲ್ಲಿ ದುಡಿಯುವವರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರು ಕೇಳಬೇಕಾದ ಕೆಲ ಸಂಘಟನೆಗಳು ಕಣ್ಣುಮುಚ್ಚಿ ಕುಳಿತಿದ್ದರೆ ಇನ್ನು ಕೆಲ ಸಂಘಟನೆಗಳು ಈ ಎರಡು ವರ್ಷ ನಿಗಮಕ್ಕೆ ನಷ್ಟವಾಗಿದೆ ಹಾಗಾಗಿ ಕೊಡದಿದ್ದರೂ ನಡೆಯುತ್ತದೆ ಎಂದು ಸಲಹೆ ನೀಡುತ್ತಿವೆ. ನಮ್ಮ ಪರ ನಿಲ್ಲಬೇಕಾದ ಸಂಘಟನೆಗಳೇ ನಮ್ಮ ವಿರುದ್ಧ ನಿಂತರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಸರ್ಕಾರ ಮತ್ತು ಸಾರಿಗೆ ನಿಗಮ ಮಂಡಳಿಗಳ ಆಡಳಿತ ಈರೀತಿ ತಾರತಮ್ಯತೆ ಮಾಡಿದರೆ ನಾವು ಕೋರ್ಟ್‌ ಮೊರೆ ಹೋಗುವುದು ಖಚಿತ ಎಂದು ನಿವೃತ್ತ ನೌಕರರು ಹೇಳುತ್ತಿದ್ದಾರೆ. ಇನ್ನು ಈ ನಾವು ಕೋರ್ಟ್‌ ಮೊರೆ ಹೋದರೆ ಸಾರಿಗೆಯ ನಾಲ್ಕೂ ನಿಗಮ ಮಂಡಿಗಳಿಗಳ ಆಡಳಿತಕ್ಕೆ ಕೋರ್ಟ್‌ ಛೀಮಾರಿ ಹಾಕಲಿದೆ. ಜತೆಗೆ ನಮಗೆ ಬರಬೇಕಿರುವುದನ್ನು ಕೊಡಿಸಲಿದೆ ಎಂಬ ನಂಬಿಕೆ ಇದೆ ಎಂದು ಹೇಳುತ್ತಿದ್ದಾರೆ.

ಒಟ್ಟಾರೆ ಸಾರಿಗೆ ನಿಗಮಗಳಲ್ಲಿ ಏನು ಸರಿಯಿಲ್ಲ ಎನ್ನುವುದಕ್ಕೆ ಈ ರೀತಿ ಕೆಲ ಸಂಘಟನೆಗಳ ಮುಖಂಡರೆ ಬೇಡದ ಮತ್ತು ನೌಕರರಿಗೆ ಮಾರಕವಾಗುವ ರೀತಿಯಲ್ಲಿ ಸರ್ಕಾರಕ್ಕೆ ಮತ್ತು ಆಡಳಿತಕ್ಕೆ ಸಲಹೆ ನೀಡಿ ನೌಕರರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...