NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 15-20ದಿನ ಮುಂಚಿತವಾಗಿ HRMSನಲ್ಲಿ ಪಡೆದ ರಜೆ ಏಕಾಏಕಿ ರದ್ದು- ಡಿಎಂಗಳ ವಿರುದ್ಧ ಕಿಡಿ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ಎಲ್ಲ ಘಟಕಗಳಲ್ಲಿ ಚಾಲನಾ ಸಿಬ್ಬಂದಿಗಳ ಎಚ್‌ಆರ್‌ಎಂಎಸ್ ರಜೆಗಳನ್ನು ಘಟಕ ವ್ಯವಸ್ಥಾಪಕರು ಏಕಾಏಕಿ ರದ್ದು ಪಡಿಸುತ್ತಿದ್ದಾರೆ ಎಂದು ಆರೋಪಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ತುಮಕೂರು ವಿಭಾಗದ ಎಲ್ಲ ಘಟಕಗಳಲ್ಲಿಯೂ ಘಟಕ ವ್ಯವಸ್ಥಾಪಕರು ಅಥವಾ ಸಂಚಾರ ಶಾಖೆಯ ಸಿಬ್ಬಂದಿ ಚಾಲನಾ ಸಿಬ್ಬಂದಿಗಳು ಎಚ್‌ಆರ್‌ಎಂಎಸ್‌ನಲ್ಲಿ ತೆಗೆದುಕೊಂಡಿರುವ ರಜೆಗಳನ್ನು ಏಕಾಏಕಿ ಕೇವಲ ಒಂದು ದಿನ ಮುಂಚೆ ರದ್ದು ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಕೇಂದ್ರ ಕಚೇರಿಯ ಸಿಬ್ಬಂದಿಗಳ ಅನುಕೂಲಕ್ಕಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದರೂ ಕೆಲವು ಘಟಕಗಳ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆ ಸಿಬ್ಬಂದಿ ತಮ್ಮ ಇಚ್ಛೆಗನುಸಾರವಾಗಿ ಏಕಾಏಕಿ ರಜೆಗಳನ್ನು ರದ್ದುಗೊಳಿಸುತ್ತಾರೆ. ಅವರಿಗೆ ಬೇಕಾದವರಿಗೆ ಮಾತ್ರ ರಜೆ ಅರ್ಜಿ ಪಡೆದು ರಜೆ ಮಂಜೂರು ಮಾಡುತ್ತಾರೆ.

ಆದರೆ, ರಜೆ ಪಡೆದಿರುವ ಸಿಬ್ಬಂದಿ ಅವರ ವೈಯಕ್ತಿಕ ಕೆಲಸಗಳಿಗಾಗಿ 15-20 ದಿನಗಳ ಮುಂಚೆ ರಜೆ ಪಡೆದಿದ್ದರೂ ಆ ರಜೆಗಳನ್ನು ಏಕಾಏಕಿ ರದ್ದು ಪಡಿಸುತ್ತಿದ್ದಾರೆ. ಇದರಿಂದ ಕೆಲಸ ನಿರ್ವಹಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೊಳಗಾಗುತ್ತಿದ್ದಾರೆ.

ಇನ್ನು ಆಸ್ಪತ್ರೆಗೆ ಅಥವಾ ಯಾವುದೇ ಕೋರ್ಟ್ ಕಚೇರಿಯ ಕೆಲಸಗಳಿಗೆ ಹೋಗಬೇಕಾಗಿರುವ ಸಂದರ್ಭವಿದ್ದರೂ ರಜೆ ರದ್ದಾಗಿದೆ ಎಂದು ಹೇಳಿ ಕೆಲಸಕ್ಕೆ ಬರುವಂತೆ ಬಲವಂತಮಾಡುತ್ತಿದ್ದಾರೆ. ಈ ರೀತಿ ಏಕಾಏಕಿ ರಜೆಗಳನ್ನು ರದ್ದು ಮಾಡಿದರೆ ವೈದ್ಯರ ಭೇಟಿ ಸಾಧ್ಯವಾಗುವುದಿಲ್ಲ.

ಆದಕಾರಣ ತಾವು ಸಂಚಾರ ಶಾಖೆಯವರಿಗೆ ಹಾಗೂ ಘಟಕ ವ್ಯವಸ್ಥಾಪಕರಗಳಿಗೆ ಏಕಾಏಕಿ ರಜೆ ರದ್ದು ಮಾಡದಂತೆ ಸೂಚನೆ ನೀಡಬೇಕು ಎಂದು ಎಸ್.ಎಲ್.ಲೋಕೇಶ್ ಹುಳಿಯಾರ್ ಒತ್ತಾಯ ಪೂರ್ವಕವಾಗಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Vijayapatha - ವಿಜಯಪಥ

1 Comment

  • ಈ ಹೆಚ್. ಆರ್.ಎಂ.ಎಸ್. ನಿಗಮದಲ್ಲಿ ಅಳವಡಿಸಲು ಕರಡು ತಯಾರಿಸಿದ ಅಧಿಕಾರಿ ವರ್ಗದವರು ತಮ್ಮ ಸಮೀಪದ ಆಡಳಿತ ಸಿಬ್ಬಂದಿಗಳ ಸೌಲಭ್ಯಕ್ಕಾಗಿ. ಆದರೆ ಸಂಸ್ಥೆಯ ಹಣವನ್ನು ಅವರಿಗೆ ಮೀಸಲಿಡಲು ಅಸಾಧ್ಯದ ಮಾತಾದ್ದರಿಂದ ಚಾಲನಾ ಸಿಬ್ಬಂದಿಗಳ ಹಾಜರಾತಿಯನ್ನೂ ಅದರಲ್ಲಿ ಒಳಪಡಿಸಿದರು. ಆದರೆ ಚಾಲನಾ ಸಿಬ್ಬಂದಿಗಳಿಗೆ ಆ ಸೌಲಭ್ಯ ವಿಸ್ತರಿಸಲು ಕೀಳರಿಮೆ ಉಳ್ಳವರಾಗಿರುವ ಕರಡು ತಯಾರಿಕರು ಅದರ ನಿಯಂತ್ರಣ ಕೊಂಡಿಯನ್ನು ಘಟಕ ವ್ಯವಸ್ಥಾಕರು, ಸಂಚಾರ ಅಧಿಕಾರಿಗಳಿಗೆ ನೀಡಿರುವರು.

    ಇದು ಒಂದೇ ಅಲ್ಲಾ ವಿಭಾಗ ಕಚೇರಿಯಲ್ಲಿ ಚಾಲನಾ ಸಿಬ್ಬಂದಿಗಳ ಸೇವಾ ವಿವರದ ಸೇವಾ ಪುಸ್ತಕದಲ್ಲಿನ ದಾಖಲಾತಿಗಳನ್ನು ಸೇವಾ ನಿಯಮಗಳ ನಿಯಮಬಾರದಲ್ಲಿ ಗೌಪ್ಯ ಎಂದು ಪ್ರತಿಪಾದಿಸಿದ್ದು ಈ ಸಮಯದಲ್ಲಿ ಅವರ ಸೇವಾ ವಿವರವನ್ನು ಯಥಾವತ್ತಾಗಿ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ದಾಖಲಿಸುವಾಗ ಹಲವಾರು ತಿದ್ದುಪಡಿ ಮಾಡಿ ದಾಖಲಿಸುತ್ತಿರುವುದು. ಚಾಲನಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ನಡೆಯುತ್ತಿರುವುದು. ಏಕೆಂದರೆ ಸಂಸ್ಥೆಯ ಆಡಳಿತ ಕಾರ್ಯ ವೈಖರಿಯನ್ನು ನಿಗಮದ ಹೊರಗಿನವರಿಂದ ಅವದಿವಾರು ಪರಿಶೀಲನೆಯ ವ್ಯವಸ್ಥೆಯ ಹೊರತಾಗಿರುವುದೇ ಮೂಲವಾಗಿರುವುದು.

Leave a Reply

error: Content is protected !!
LATEST
BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ? KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!?? ಹರಿಯಾಣದಲ್ಲಿ ಸಮಾವೇಶ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಅನ್ನದಾತರ ಪಟ್ಟು ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ : ಉಸ್ತುವಾರಿ ಸಚಿವ ಮುನಿಯಪ್ಪ BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು