NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಇಂದು ಕಾರ್ಮಿಕ ಇಲಾಖೆ ಆಯುಕ್ತರು ಕರೆದಿದ್ದ ರಾಜೀ ಸಂಧಾನ ಸಭೆ ವಿಫಲ

ಸಾಂದರ್ಭಿಕ ಚಿತ್ರ.
ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.5ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಯಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರು ಇಂದು ಕರೆದಿದ್ದ ರಾಜೀ ಸಂಧಾನ ಸಭೆ ವಿಫಲಗೊಂಡಿದ್ದು ಮತ್ತೆ ಆ.7ಕ್ಕೆ ಮುಂದೂಡಲಾಗಿದೆ.

ಈ ಸಂಬಂಧ ಇದೇ ಜುಲೈ 18ರಂದು ರಾಜೀ ಸಂಧಾನ ಸಭೆಯ ಸೂಚನಾ ಪತ್ರ ಹೊರಡಿಸಿ ಅಂದು ಬೆಳಗ್ಗೆ 11.30ಕ್ಕೆ ಸಂಧಾನ ಸಭೆಗೆ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಾಗಿದ್ದರು. ಆಗ ಸಭೆಯನ್ನು ಇಂದಿಗೆ ಅಂದರೆ (ಆ.2ಕ್ಕೆ) ಮುಂದೂಡಲಾಗಿತ್ತು. ಇಂದು ಮತ್ತೆ ಸಭೆ ವಿಫಲವಾಗಿದ್ದು ಆ.7ಕ್ಕೆ ಮಾಡುವುದಾಗಿ ಆಯುಕ್ತರು ತಿಳಿಸಿದ್ದಾರೆ.

KSRTC, BMTC, NWKRTC ಹಾಗೂ KKRTC ಆಡಳಿತವರ್ಗದ ವ್ಯವಸ್ಥಾಪಕರು 05.08.2025 ಬಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.

ಈ ನಡುವೆ ಮತ್ತೆ ಸಭೆ ಆ.7ಕ್ಕೆ ಮುಂದೂಡಿರುವುದರಿಂದ ಆ.5ರ ಮುಷ್ಕರದಲ್ಲಿ ಭಾಗಿಯಾಗುವ ಸಾರಿಗೆ ನೌಕರರ ವಿರುದ್ಧ 2021ರ ಏಪ್ರಿಲ್‌ನಲ್ಲಿ ತೆಗೆದುಕೊಂಡ ಕ್ರಮಗಳನ್ನೇ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಇದರಿಂದ ಅಮಾಯಕ ನೌಕರರು ಬೀದಿಗೆ ಬೀಳುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ಪ್ರತಿಯೊಬ್ಬ ನೌಕರರು ಎಚ್ಚರಿಕೆಯಿಂದ ಮುಷ್ಕರದಲ್ಲಿ ಭಾಗವಹಿಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಅಲ್ಲದೆ ಮುಷ್ಕರಕ್ಕೆ ಕರೆ ನೀಡುವ ಸಂಘಟನೆಗಳು ಬರಿ ನೌಕರರನ್ನು ಮಾತ್ರ ಕರೆಯುತ್ತವೆ. ಇಲ್ಲಿ ನಿಗಮದ ಯಾವುದೇ ಅಧಿಕಾರಿಗಳು ಭಾಗಿಯಾಗುವುದಿಲ್ಲ. ಆದರೆ, ಮುಷ್ಕರದ ನಂತರ ಆಗುವ ವೇತನ ಹೆಚ್ಚಳ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೌಕರರಿಗಿಂತ ದುಪ್ಪಟ್ಟು ಪಡೆದು ಆಯಾಗಿರುತ್ತಾರೆ. ಅಮಾಯಕ ನೌಕರರು ಮಾತ್ರ ಬಲಿಯಾಗಿ ಬರುತ್ತಿದ್ದ ವೇತನವನ್ನು ಕಳೆದುಕೊಂಡು ಕುಟುಂಬವನ್ನು ಬೀದಿಗೆ ಬೀಳುವಂತೆ ಮಾಡಿಕೊಳ್ಳುತ್ತಾರೆ. ಇದು ಬೇಕಾ ಎಂಬುದರ ಬಗ್ಗೆಯೂ ನೌಕರರು ಮತ್ತು ಅವರ ಕುಟುಂಬದವರು ಕುಳಿತು ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಿದೆ.

Megha
the authorMegha

Leave a Reply

error: Content is protected !!