KSRTC: ಸರ್ಕಾರ ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಲೇ ಬೇಕು- ಏಕೆಂದರೆ ELಗೆ ಶೇ.15ರಷ್ಟು ಹೆಚ್ಚುವರಿ…!


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಮಾರ್ಚ್ 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ 2020 ಜನವರಿ 1ರಿಂದ ಅನ್ವಯವಾಗುವಂತೆ ಘೋಷಣೆ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಇಂದಿನ ಕಾಂಗ್ರೆಸ್ ಸರ್ಕಾರ ಕೊಡಲೇ ಬೇಕು.
ಏಕೆಂದರೆ, ಇದೇ ಸರ್ಕಾರ ನಿವೃತ್ತ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿರುವುದನ್ನು ಒಪ್ಪಿಕೊಂಡು 2024ರಲ್ಲಿ ಗ್ರಾಚ್ಯುಟಿ ಮತ್ತು Encashment Leave (EL) ಗಳಿಕೆ ರಜೆ ನಗದೀಕರಣವನ್ನು ಈಗಾಗಲೇ 2020 ಜನವರಿ 1ರಿಂದ ಇತ್ತೀಚೆಗೆ ನಿವೃತ್ತರಾದ ಸಂಸ್ಥೆಯ ನೌಕರರಿಗೆ ಹಾಗೂ 2024ರಲ್ಲಿ ಹಾಲಿ ಡ್ಯೂಟಿಯಲ್ಲಿರುವ ನೌಕರರಿಗೂ ಕೊಟ್ಟಿದ್ದಾರೆ.

ಹೀಗಾಗಿ ಈ ಸಿಎಂ ಸಿದ್ದರಾಮಯ್ಯ ಅವರು ನಾವು ವೇತನ ಹೆಚ್ಚಳದ ಕೇವಲ 14 ತಿಂಗಳ ಹಿಂಬಾಕಿಯನ್ನು ಮಾತ್ರ ಕೊಡುತ್ತೇವೆ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂಬ ಹೇಳಿಕೆ ಕೊಡುವುದು ತಪ್ಪಾಗುತ್ತದೆ. ಕಾರಣ ಇದೇ ಸರ್ಕಾರ ಈಗಾಗಲೇ 2020 ಜನವರಿ 1ರಿಂದ ಶೇ.15ರಷ್ಟ ವೇತನ ಹೆಚ್ಚಳವಾಗಿರುವುದನ್ನು ಅನ್ವಯಿಸಿ ನಿವೃತ್ತರಿಗೆ ಗಳಿಕೆ ರಜೆ ನಗದೀಕರಣದ ಎಲ್ಲ ಹಣವನ್ನು ಕೊಟ್ಟಿದೆ.
ಇನ್ನು ಕೊಡಬೇಕಿರುವು ವೇತನ ಹೆಚ್ಚಳವಾಗಿರುವುದಕ್ಕೆ 2020ರ ಜನವರಿ 1ರಿಂದ ಕೊಟ್ಟಿರುವ ಸಂಬಳಕ್ಕೆ ಸೇರಿಸಿದ ಬಳಿಕ ಬರುವ ಶೇ.15ರಷ್ಟು ಹೆಚ್ಚಾಗಿರುವ ಹಿಂಬಾಕಿಯನ್ನು ಮಾತ್ರ. ಹೀಗಾಗಿ ಈಗಾಗಲೇ 2020ರ ಜನವರಿ 1ರಿಂದ ಅನ್ವಯವಾಗುವಂತೆ ಗಳಿಕೆ ರಜೆ ನಗದೀಕರಣದ ಹಣವನ್ನು ಕೊಟ್ಟಿರುವುದರಿಂದ ಹಿಂದಿನ ಬಿಜೆಪಿ ಸರ್ಕಾರ ಹಿಂಬಾಕಿ ಕೊಡುವ ವಿಷಯದಲ್ಲಿ ಗೊಂದಲ ಸೃಷ್ಟಿಸಿ ಹೋಗಿದೆ ಎಂದು ಹೇಳುವುದು ಮೂರ್ಖತನವಾಗುತ್ತದೆ.

ಏಕೆಂದರೆ, ಈಗಾಗಲೇ ಇದೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾರಿಗೆ ನೌಕರರಿಗೆ 2020 ಜನವರಿ 1ರಿಂದಲೇ ಶೇ.15ರಷ್ಟು ವೇತನ ಹೆಚ್ಚಳವಾಗಿರುವುದನ್ನು ಒಪ್ಪಿಕೊಂಡು 2020 ಜನವರಿ 1ರಿಂದ 2023ರ ಫೆಬ್ರವರಿವರೆಗೂ ನಿವೃತ್ತರಾಗಿರುವ ಎಲ್ಲ ನೌಕರರಿಗೂ ಹಾಗೂ ಹಾಲಿ ಡ್ಯೂಟಿ ಮೇಲಿರುವ ನೌಕರರಿಗೂ ಕೂಡ ಶೇ.15ರಷ್ಟು ವೇತನ ಹೆಚ್ಚಳವಾಗಿರುವುದನ್ನು ಲೆಕ್ಕಹಾಕಿ ಡಿಸೆಂಬರ್ 2024ರಲ್ಲಿ ಇಎಲ್ ಹಣವನ್ನು ಕೊಟ್ಟಿದೆ.
ಸಾರಿಗೆ ಆಡಳಿತ ಮಂಡಳಿ ಈ ಹಣವನ್ನು ಕೊಟ್ಟಿರುವುದಕ್ಕೆ ಸಾಕ್ಷಿ ಎಂಬಂತೆ ಸಾರಿಗೆ ಮಂಡ್ಯ ವಿಭಾಗದ ನಿವೃತ್ತ ನೌಕರ ಕೆ.ರಂಗನಾಥ ಅವರಿಗೆ 2020 ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳವಾಗಿರುವುದನ್ನು ಅನ್ವಯಿಸಿ ರಜೆ ನಗದೀಕರಣ ಹೆಚ್ಚುವರಿ ಹಣ 2,48,676 ರೂ.ಗಳನ್ನು ಚೆಕ್ ಮೂಲಕ ಕೊಟ್ಟಿದೆ.

ಇದೆಲ್ಲವೂ ಸಾರಿಗೆ ನಿಗಮದ ಅಧಿಕಾರಿಗಳಿಗೂ ಗೊತ್ತಿದೆ. ಆದರೆ, ಇಲ್ಲಿ ಕೆಲ ಸರ್ಕಾರದ ಅಧಿಕಾರಿಗಳು ಸಿಎಂ ದಾರಿ ತಪ್ಪಿಸಿ ಕೊಡುವುದಕ್ಕೆ ಬರುವುದಿಲ್ಲ ಎಂಬ ಹೇಳಿಕೆಯನ್ನು ಸಿಎಂ ಮೂಲಕ ಕೊಡಿಸುತ್ತಿದ್ದಾರೆ. ಅಂದರೆ ಇಲ್ಲಿ ನೌಕರರನ್ನು ದಾರಿತಪ್ಪಿಸಲು ಹೋಗಿ ಸಿಎಂ ಅನ್ನೇ ಬಲಿಕಾ ಬಕ್ರ ಮಾಡಲು ಹೊರಟ್ಟಿದ್ದಾರೆ ಎಂಬಂತೆ ಕಾಣುತ್ತಿದೆ.
ಒಂದು ವೇಳೆ ಈ ಗಳಿಕೆ ರಜೆ ನಗದೀಕರಣದಲ್ಲಿ ಶೇ.15ರಷ್ಟು ವೇತನ ಹೆಚ್ಚಳವಾಗಿರುವ ಹಣವನ್ನು ಕೊಟ್ಟಿಲ್ಲದಿದ್ದರೆ ಸಿಎಂ ಹೇಳುತ್ತಿರುವ 14 ತಿಂಗಳ ಹಿಂಬಾಕಿಯಷ್ಟೇ ಕೊಡುತ್ತೇವೆ ಎಂಬ ಹೇಳಿಕೆಗೆ ಒಂದು ಮಹತ್ವ ಬಂದಿರುತ್ತಿತ್ತು. ಆದರೆ, ಈಗಾಗಲೇ ಶೇ.15ರಷ್ಟು ವೇತನ ಹೆಚ್ಚಳವಾಗಿರುವುದನ್ನು 2020ರ ಜನವರಿ 1ರಿಂದಲೇ ಅನ್ವಯಿಸಿರುವುದು ಇಲ್ಲಿ ಸಾಬೀತಾಗುತ್ತಿರುವುದರಿಂದ ಸರ್ಕಾರ 38 ತಿಂಗಳ ಹಿಂಬಾಕಿ ಕೊಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಒಂದು ವೇಳೆ ಕೊಡುವುದಕ್ಕೆ ಆಗುವುದೇ ಇಲ್ಲ ಎಂದು ಸರ್ಕಾರ ಮೊಂಡಾಟ ಪ್ರದರ್ಶಿಸಿದರೆ ಅಧಿಕಾರಿಗಳು/ನೌಕರರು ಹೈ ಕೋರ್ಟ್ ಮೆಟ್ಟಿಲೇರಿ ಕೋರ್ಟ್‌ನಲ್ಲಿ ಇವರ ಮೊಂಡುತನದ ಬಗ್ಗೆ ಪ್ರಕರಣ ಹೂಡಿದರೆ ನ್ಯಾಯಾಲಯದಲ್ಲಿ ಛೀಮಾರಿಹಾಕಿಸಿಕೊಂಡು ಬಂದ ಬಳಿಕ 38 ತಿಂಗಳ ಹಿಂಬಾಕಿಯನ್ನು ಕೊಡಲೇ ಬೇಕಾಗುತ್ತದೆ. ಹೀಗಾಗಿ ಸರ್ಕಾರ ತನ್ನ ಮೊಂಡುತನವನ್ನು ಬಿಟ್ಟು ನೌಕರರಿಗೆ ಕೊಡಬೇಕಿರುವ 38 ತಿಂಗಳ ಹಿಂಬಾಕಿಯನ್ನು ಯಾವುದೇ ಚಕಾರವೆತ್ತದೆ ಕೊಟ್ಟರೆ ಮರ್ಯಾದೆಯನ್ನು ಉಳಿಸಿಕೊಳ್ಳಬಹುದು.
Related
