NEWSನಮ್ಮರಾಜ್ಯಲೇಖನಗಳು

KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದು ಗೈರು ಹಾಜರಿಯಾದರೆ ವಾರದ ರಜೆ ಕೊಡೋದಿಲ್ಲ. ಈ ಬಗ್ಗೆ ಯಾವೊಬ್ಬ ನೌಕರನೂ ವಿರೋಧ ಮಾಡಲಾಗುತ್ತಿಲ್ಲ. ಕಾರಣ ಅಧಿಕಾರಿಗಳ ದುರಾಡಳಿತದಿಂದ ಕೆಲಸಕ್ಕೆ ಎಲ್ಲಿ ತೊಂದರೆ ಆಗುತ್ತದೋ ಎಂಬ ಭಯ.

ಇನ್ನು ರಾತ್ರಿ ಪಾಳಿ ಓಟಿ ಮಾಡಿದರೆ ಎಂಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದರೂ ಕೇವಲ ನಾಲ್ಕು ಗಂಟೆ ಓಟಿ ಕೊಡ್ತಾ ಇದ್ದಾರೆ. ಇದನ್ನೂ ವಿರೋಧ ಮಾಡುವುದಕ್ಕೂ ನಮಗೆ ಸಾಧ್ಯವಾಗುತ್ತಿಲ್ಲ. ಆದರೂ ನಾವ್ಯಾರು OT ಮಾಡುವುದನ್ನು ನಿಲ್ಲಿಸಿಲ್ಲ, ಕಾರಣ ಸಂಸ್ಥೆಗೆ ಕೆಟ್ಟ ಹೆಸರು ಬರಬಾರದೆಂಬ ಕಾಳಜಿ ಎಂದು ನೌಕರರು ಪ್ರಸ್ತುತ ನಾಲ್ಕೂ ನಿಗಮಗಳಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಾಮಾನ್ಯ ಪಾಳಿಗೆ ಓಟಿ ಕಮ್ಮಿಯಾಗಿದೆ. ಆದರೂ ಸಾಮಾನ್ಯ ಪಾಳಿ ಕರ್ತವ್ಯ ಮಾಡುವುದನ್ನು ನಿಲ್ಲಿಸಿಲ್ಲ. ಜತೆಗೆ ಈ ಬಗ್ಗೆ ಘಟಕದಲ್ಲಿ ವಿರೋಧ ಮಾಡುವುದಕ್ಕೆ ನೌಕರರಿಗೆ ಸಾಧ್ಯವಾಗುತ್ತಿಲ್ಲ. ಕಾರಣ ಮೊದಲೇ ಹೇಳಿದಂತೆ ಅಧಿಕಾರಿಗಳ ದರ್ಪಕ್ಕೆ ಹೆದರಿ ಈ ರೀತಿ ಕಿವಿ, ಬಾಯಿ, ಕಣ್ಣು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ.

ಇನ್ನು ಪ್ರಮುಖವಾಗಿ ಯಾವುದೇ ಒಬ್ಬ ನೌಕರ ಆಸ್ಪತ್ರೆಯಲ್ಲಿ ಅಡ್ಮಿಟಾದರೆ ಅವನಿಗೆ ಆಸ್ಪತ್ರೆಯ ಖರ್ಚು ವೆಚ್ಚದಲ್ಲಿ ಅತಿ ಕಡಿಮೆ ಮೊತ್ತ ನೀಡುತ್ತಿದ್ದಾರೆ. ಇದನ್ನು ನಾವ್ಯಾರು ಪ್ರಶ್ನೆ ಮಾಡಲು ಆಗುತ್ತಿಲ್ಲ. DC ಹತ್ತಿರ ಅಥವಾ DM ಹತ್ತಿರ ಕೇಳುವುದಕ್ಕೆ ಆಗುತ್ತಿಲ್ಲ. ಇದರಿಂದ ಈಗಾಗಲೇ ಎಷ್ಟೋ ನೌಕರರು ಸರಿಯಾದ ಸಮಯಕ್ಕೆ ಉತ್ತಮ ಚಿಕಿತ್ಸೆ ಸಿಗದೆ ಉಸಿರು ಚೆಲ್ಲಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನೌಕರರಿಗೆ ಇದೇ ಪರಿಸ್ಥಿತಿ ಇದೆ. ಇನ್ನು ನೌಕರರ ಆರೋಗ್ಯ ದೃಷ್ಟಿಯಿಂದ ಕೆಲ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ಅದರಿಂದ ಈವರೆಗೂ ಯಾವೊಬ್ಬ ನೌಕರರಿಗೂ ಪ್ರಯೋಜನಾವಗಿಲ್ಲ ಎಂಬುವುದು ನೂರಕ್ಕೆ ನೂರರಷ್ಟು ಸತ್ಯ.

ಇತ್ತ ನೌಕರರು ನೌಕರರ ನಡುವೆಯೇ ಗಲಾಟೆಯಾಗುತ್ತಿದ್ದು, ಒಬ್ಬರಿಗೊಬ್ಬರು ಕಚ್ಚಾಡಿ ಸಾಯ್ತಾಯಿದ್ದಾರೆ. ಅದಕ್ಕೆ ನಿದರ್ಶನ ಎಂದರೆ ಹಾಸನ ಬಸ್‌ನಲ್ಲಿ ಸಂಸ್ಥೆಯ ನೌಕರ ಪ್ರಯಾಣ ಮಾಡುವುದಕ್ಕೆ ಕರ್ತವ್ಯ ನಿರತ ನೌಕರನೇ ಬಿಟ್ಟಿಲ್ಲ.

ಇನ್ನು ವೋಲ್ವೋ ಬಸ್‌ನಲ್ಲಿ ನೌಕರರು ಪ್ರಯಾಣ ಮಾಡುವ ಆಗಿಲ್ಲ. ಈ ಬಗ್ಗೆ ಯಾವ ಅಧಿಕಾರಿಗಳು ರೂಲ್ಸ್‌ ಮಾಡಿಲ್ಲ. ಆದರೆ ಚಾಲಕ ನಿರ್ವಾಹಕರೇ ಸ್ವತಃ ಕೆಲ ನಿಯಮಗಳನ್ನು ಮಾಡಿಕೊಂಡಿದ್ದು, ಅದು ಅವರಪ್ಪನ ಬಸ್ ಆಗದೇ ಇದ್ದರೂ ಕೂಡ ನಮ್ಮಪ್ಪನ ವಾಹನ ಎಂಬಂತೆಯೇ ನಡೆದುಕೊಳ್ಳುತ್ತ ತಮಗೆ ತಾವೇ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ಇಲ್ಲಿ ನೌಕರರು ಕೂಡ ಸರಿಯಿಲ್ಲ ಎನಿಸುತ್ತದೆ. ಆದರೆ ಘಟಕದ ಅಧಿಕಾರಿಗಳು ಮೌಖಿಕವಾಗಿ ಮಾಡಿದ ಆದೇಶವನ್ನು ಈ ನೌಕರರು ಪಾಲಿಸಬೇಕು. ಈ ಕಾರಣದಿಂದ ಸಾರಿಗೆ ನಿಗಮಗಳಲ್ಲಿ ಸಮಗ್ರ ಮತ್ತು ಏಕ ನಿಯಮಗಳಿಲ್ಲ. ಘಟಕ – ಘಟಕಗಳಿಗೂ ಒಂದೊಂದು ನಿಯಮವನ್ನು ಅಲ್ಲಲ್ಲಿನ ಡಿಎಂಗಳೇ ಅಥವಾ ಡಿಸಿಗಳೇ ಮಾಡಿಕೊಂಡು ಅವರು ಹೇಳಿದ್ದನ್ನು ಮಾತ್ರ ನೌಕರರು ಪಾಲಿಸಬೇಕು. ಇಲ್ಲದಿದ್ದರೆ ಅಮಾನತಿನ ಶಿಕ್ಷಗೆ ಗುರಿಯಾಗಬೇಕು.

ಈ ರೀತಿಯ ದಬ್ಬಾಳಿಕೆ ಮಾಡುವ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ ಅದೆಷ್ಟೋ ನೌಕರರನ್ನು ಕೆಲ ನೀಚ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ವಜಾ ಮಾಡಿರುವುದು ಬಹಿರಂಗ ಸತ್ಯ. ಆದರು, ಆ ವಜಾಗೊಂಸ ನೌಕರರ ಪರ ನಿಲ್ಲಬೇಕಾದ ನೌಕರರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಈಗಲೂ ನಡೆದುಕೊಳ್ಳುತ್ತಿದ್ದಾರೆ. ಕಾರಣ ಅಧಿಕಾರಿಗಳ ಭಯ.

ಇನ್ನು ದುರಂತವೆಂದರೆ ವಜಾ ಆಗಿರುವಂತಹ ನೌಕರರು ಬಸ್‌ನಲ್ಲಿ ಪ್ರಯಾಣ ಮಾಡಿದರೆ ಅವರನ್ನು ಭಾರಿ ಕೀಳಾಗಿ ಕಾಣುವುದು ಕೂಡ ನೌಕರರ ದೌರ್ಬಲ್ಯವಾಗಿದೆ. ಇನ್ನು ಪ್ರಮುಖವಾಗಿ ಹೇಳುವುದಾದರೆ ಏನನ್ನೂ ಕೊಡೋದಿಲ್ಲ ಅಂದ್ರು ಇವರು ಕರ್ತವ್ಯ ನಿರ್ವಹಿಸುತ್ತಾರೆ, ಇವರ ಒಗ್ಗಟ್ಟು ಮುದಿಯುವುದು ಕಷ್ಟವೇನಲ್ಲ ಎಂಬುವುದು ಸಂಸ್ಥೆಯ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನೌಕರರನ್ನು ಅಧಿಕಾರಿಗಳು ಗಿರಿಗಿಟ್ಟಲೆ ಆಡಿಸುತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. ಇಲ್ಲಿ ಅಧಿಕಾರಿಗಳು ಮತ್ತು ನೌಕರರು ಎಂಬ ಇಬ್ಬಗೆಯ ನೀತಿ ಜಾರಿಯಲ್ಲಿದೆ. ಅದಕ್ಕೆ ಕೆಲ ಸಂಘಟನೆಗಳ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅಧಿಕಾರಿಗಳು ಮತ್ತು ನೌಕರರನ್ನು ಒಡೆದು ಆಳುವ ಜಾಣ ನಡೆಯನ್ನು ದಶಕಗಳ ಹಿಂದೆ ಅನುಸರಿಸಿದರು ಅದನ್ನು ತಿಳಿಯದ ಮುಗ್ದ ನೌಕರರು ಕೆಲ ಸಂಘಟನೆಗಳ ಮುಖಂಡರು ಬೀಸಿದ ಬಲೆಗೆ ಬಿದ್ದರು.

ಇತ್ತ ಅಧಿಕಾರಿಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಮತ್ತು ಅವರ ಕೈಯಲ್ಲಿ ಅಧಿಕಾರವಿದೆ ಎಂದು ಅವರಿಗೇ ಸಪೋರ್ಟ್‌ ಮಾಡಿಕೊಂಡು ಬರುವ ಮೂಲಕ ಅಧಿಕಾರಿಗಳು ಮತ್ತು ನೌಕರರ ನಡುವಿನ ವೇತನದಲ್ಲೂ ಅಜಾಗಜಾಂತರ ವ್ಯತ್ಯಾಸ ಆಗುವುದಕ್ಕೂ ಕಾರಣರಾದರೂ. ಜತೆಗೆ ನೌಕರರ ಸುಲಿಗೆ ಮಾಡುವುದಕ್ಕೆ ಮುಂದಾದರು. ಆದರೂ ನೌಕರರ ಪರ ನಿಲ್ಲಬೇಕಾದ ಸಂಘಟನೆಗಳು ಜಾಣ ಮೌನ ವಹಿಸಿದವು. ಇದರಿಂದ ಪ್ರಸ್ತುತ 80 ಸಾವಿರ ರೂ. ವೇತನ ಪಡೆಯ ಬೇಕಾದ ನೌಕರ 42 ಸಾವಿರ ರೂ. ವೇತನ ಪಡೆಯುವಂತಾಗಿದೆ.

ಇನ್ನು ಈ ಸಮಸ್ಯೆಗಳಿಗೆ ಮುಕ್ತಿ ಎಂದು? ಯಾರು ಇವುಗಳನ್ನು ಪರಿಹರಿಸುತ್ತಾರೆ ಎಂಬ ಗೊಂದಲದಲ್ಲೇ ಇಂದು ಸಾರಿಗೆ ನೌಕರರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕೆಲ ಸಂಘಟನೆಗಳ ಮುಖಂಡರಿಂದ ಹಾಳಾಗಿರುವ ವ್ಯವಸ್ಥೆಯನ್ನು ಮೊದಲಿನಂತೆ ಮಾಡಲು ಸಮರ್ಥ ನೌಕರರ ಪಡೆ ಇರಬೇಕು, ಅದನ್ನು ನಡೆಸುವುದಕ್ಕೆ ಸಮರ್ಥ ನಾಯಕನೂ ಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂಥವರು ಯಾರು ಸಂಸ್ಥೆಯಲ್ಲಿ ಕಾಣಿಸುತ್ತಿಲ್ಲ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ