ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ನೌಕರರ ಸಮಸ್ಯೆ ಆಲಿಸಬೇಕಾದ ಕೆಲ ಸಂಘಟನೆಗಳ ಮುಖಂಡರ ಹೆಸರಿನಲ್ಲಿ ಕೆಲವು ನೌಕರರು ಪ್ರಯೋಜನಕ್ಕೆ ಬಾರದ ಕಮೆಂಟ್‌ಗಳನ್ನು ಹಾಕಿಕೊಂಡು ಕಾಲಹರಣ ಮಾಡುತ್ತಿದ್ದಾರೆ.
ಒಂದು ಸಂಘಟನೆಯ ಪರ ಎಂದು ಯಾವುದೋ ಒಂದು ತನ್ನದಲ್ಲದ ಹೆಸರಿನಿಂದ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದ ಪ್ರಯೋಗ ಮಾಡುವುದು. ಮತ್ತೊಬ್ಬರು ಅದಕ್ಕೆ ವಿರುದ್ಧವಾಗಿ ಮತ್ತೊಂದು ಕಮೆಂಟ್ ಹಾಕುವುದು. ಹೀಗೆ ಸಾರಿಗೆ ನೌಕರರ ಕೆಲ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಬಾಯಿಗೆ ಬಂದಂತೆ ಪದ ಪ್ರಯೋಗ ಮಾಡಿಕೊಂಡು ಒಬ್ಬರಿಗೊಬ್ಬರು ಅಪ್ಪ, ಅಮ್ಮ, ಅಕ್ಕ, ತಂಗಿ, ಹೆಂಡತಿ ಹೀಗೆ ಎಲ್ಲರನ್ನು ಬೆತ್ತಲಾಗಿಸುವ ಪದ ಪ್ರಯೋಗ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ತಮ್ಮದೇ ಸಹೋದ್ಯೋಗಿಗಳ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡುವ ಬದಲಿಗೆ ಪ್ರಸ್ತುತ ಚಾಲನಾ ಸಿಬ್ಬಂದಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಿದ್ದರೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಇಷ್ಟೊತ್ತಿಗಾಗಲೇ ಒಂದು ಪರಿಹಾರವನ್ನು ನೀಡುತ್ತಿತ್ತೋ ಏನೋ?
ಆದರೆ, ಇಲ್ಲಿ ನೌಕರರಿಗೆ ಸಮಸ್ಯೆ ಆಗುತ್ತಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಡಬೇಕಾದ ನೌಕರರು ಬೇಡದ ವಿಚಾರವನ್ನು ಯಾವುದೋ ಸಂಘಟನೆ, ಮುಖಂಡನ ಬಗ್ಗೆ ಅವಹೇಳನ ಮಾಡಿಕೊಂಡು ಒಬ್ಬರಿಗೊಬ್ಬರು ನಿಂದಿಸಿಕೊಳ್ಳುತ್ತಿದ್ದಾರೆ.
ಈ ರೀತಿಯ ಪ್ರಯೋಜನಕ್ಕೆ ಬಾರದ ಪದ ಪ್ರಯೋಗ ಬಿಟ್ಟು ನಿಮಗೆ ಅಂದರೆ ನೌಕರರಿಗೆ ಸಂಘಟನೆಗಳನ್ನು ಬಳಿಸಿಕೊಂಡು ಸಂಸ್ಥೆಯಿಂದ ಯಾವ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳ ಬಹುದು ಎಂಬುದರ ಬಗ್ಗೆ ಸೌಹಾರ್ದಯುತ ಚರ್ಚೆ ಮಾಡಿದರೆ ಈಗ ಸಂಸ್ಥೆತಯಿಂದ ಸಿಗಬೇಕಿರುವ ಕಾನೂನು ರೀತಿಯ ಪರಿಹಾರ ಸಿಗಬಹುದು.
ಅಂದರೆ ಇತ್ತೀಚೆಗೆ ನಡೆಯುತ್ತಿರುವ ನೌಕರರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನೌಕರರನ್ನೇ ಅಮಾನತು ಮಾಡುವುದು ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡುವುದಕ್ಕೆ ಸಂಸ್ಥೆಯ ಅಧಿಕಾರಿಗಳು ಮುಂದಾಗದಿರುವುದು. ಇದರಿಂದ ನೌಕರರು ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾದರೆ. ಈ ಬಗ್ಗೆ ಗಮನಹರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ಮಾಡಿದರೆ ಒಳ್ಳೆಯದು.
ಇದನ್ನು ಮಾಡದೆ. ಒಬ್ಬರು ವೇತನ ಆಯೋಗ ಮತ್ತೊಬ್ಬರು ಸಮಾನಂತರ ವೇತನ ಮೊಗದೊಬ್ಬರು 148/2005 ಆದೇಶದಂತೆ ಅಗ್ರಿಮೆಂಟ್ ಜಾರಿಯಾಗಬೇಕು. ಇದನ್ನು ನಿಮ್ಮ ಸಂಘಟನೆಯ ಮುಖಂಡ ಏಕೆ ಮಾಡಿಲ್ಲ, ದಮ್ಮು, ತಾಕತ್ತು ಇಲ್ಲವಾ? ಎಂದು ಪ್ರಶ್ನೆ ಮಾಡಿಕೊಂಡು ಕಾಲ ಕಳೆಯುವ ಬದಲಿಗೆ ನಿಮ್ಮ ಬೇಡಿಕೆ ಏನಿದೆಯೋ ಅದರ ಬಗ್ಗೆ ಸರ್ಕಾರ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತರುವ ಪ್ರಯತ್ನ ಮಾಡಬೇಕಿದೆ.
ಕೆಲವರಿಗೆ ಸರ್ಕಾರಿ ನೌಕರರಂತೆ ಹುದ್ದೆಗೆ ತಕ್ಕ ಸಮಾನ ವೇತನ, ಇಲ್ಲ ವೇತನ ಆಯೋಗ ಮಾದರಿಯನ್ನು ಸಾರಿಗೆ ನಿಗಮಗಳಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಒಲವು ಇದೆ. ಈ ರೀತಿಯ ಒಲವು ಮತ್ತು ಬೇಡಿಕೆ ಇರುವವರು ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳುವ ದಾರಿ ಯಾವುದು ಎಂಬುದರ ಬಗ್ಗೆ ಸುರ್ದೀಘವಾದ ಚರ್ಚೆ ಮಾಡಿ ನೌಕರರಿಗೆ ಅನುಕೂಲ ಆಗುವಂತೆ ಹೆಜ್ಜೆಹಾಕಿ.
ಇದರಿಂದ ಈಗಾಗಲೇ ಸುಮಾರು 82 ಸಾವಿರ ರೂಪಾಯಿ ವೇತನ ಪಡೆಯಬೇಕಾದ ನೌಕರರು ಮತ್ತು ಅಧಿಕಾರಿಗಳು ಕೂಡ ಕೇವಲ 42 ಸಾವಿರ ವೇತನ ಪಡೆಯುತ್ತಿದ್ದಾರೆ. ಇದರಿಂದ ಇಲ್ಲಿ ನೌಕರರಿಗೆ ಮತ್ತು ಅಧಿಕಾರಿಗಳಿಗೂ ಅರ್ಧಕರ್ಧ ವೇತನ ಕಡಿಮೆ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಗೆ ಮನವಿ ಮಾಡುವ ಕೆಲಸ ಮಾಡಬೇಕಿದೆ.
ಇದನ್ನು ಬಿಟ್ಟು ಸುಖ ಸುಮ್ಮನೆ ಇಡೀ ನಿಮ್ಮ ಕುಟುಂಬದವರನ್ನು ಎಳೆತಂದು ಅವರ ಮಾನ ಮರ್ಯಾದೆಯನ್ನು ಹಾಳು ಮಾಡುವ ಜತೆಗೆ ನಿಮ್ಮ ಘನತೆಯನ್ನು ನೀವೆ ಕಳೆದುಕೊಳ್ಳುವುದು ಸರಿಯಲ್ಲ. ಇನ್ನಾದರೂ ಇಂಥ ಕೆಲಸಕ್ಕೆ ಬಾರದ ಚರ್ಚೆ ನಿಲ್ಲಿಸಿ ನಿಮಗೂ ಸೇರಿದಂತೆ ಎಲ್ಲ 1.25 ಲಕ್ಷ ಅಧಿಕಾರಿಗಳು/ ನೌಕರರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಲ್ಲೀನರಾದರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರಷ್ಟಾದರೂ ವೇತನ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.