NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

KSRTC: 1996ರ ಹಿಂದಿನಿಂದಲೂ ವೇತನ ಹೆಚ್ಚಳ ಸಂಬಂಧದ ಹೋರಾಟಗಳಿಂದ ಸಾವಿರಾರು ತಾಂತ್ರಿಕ, ಚಾಲನಾ ಸಿಬ್ಬಂದಿಗಳ ಬಲಿದಾನವಾಗಿದೆ ಆದರೂ..!?

ವಿಜಯಪಥ ಸಮಗ್ರ ಸುದ್ದಿ
  • ಸರ್ಕಾರಿ ಬಸ್‌ ನೌಕರರು ಬೇಡಿಕೆಗಳ ಈಡೇರಿಸಿಕೊಳ್ಳಲು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಮುಷ್ಕರ ನಡೆಸಲೇ ಬೇಕಾ?
  • ರಾಜ್ಯ ಸರ್ಕಾರದ ಅಧೀನದಲ್ಲಿ 70ಕ್ಕೂ ಹೆಚ್ಚು ನಿಗಮ ಮಂಡಳಿಗಳಲ್ಲಿ ಇಲ್ಲ ಹೋರಾಟ ಇಲ್ಲಿ ಏಕೆ?
  • ಈ ನಿಗಮಗಳು ಮುಷ್ಕರ ನಡೆಸದಯೇ ಹೇಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿವೆ?

ಸಾರಿಗೆ ಸಂಸ್ಥೆಯ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರವೇ ನಿಯಮ ರೂಪಿಸಿದೆ.
ಇತರೆ ನಿಗಮ ಮಂಡಳಿಗಳಿಗೂ ಸಹ ನಿಯಮಗಳನ್ನು ರೂಪಿಸಿದೆ. ಒಂದೊಂದು ನಿಗಮ ಮಂಡಳಿಗಳಿಗೆ ಇದು ಅಲ್ಪ ಸ್ವಲ್ಪ ವ್ಯತ್ಯಾಸವಿದೆ.

1996, 2000, 2004, 2008, 2012, 2016, 2020, 2024 ಈ ವರ್ಷಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆಯನ್ನು ಸರ್ಕಾರ ಮಾಡಬೇಕಾಗಿತ್ತು. ಆದರೆ ಯಾವ ವರ್ಷವೂ ಸಾರಿಗೆ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ಪರಿಷ್ಕರಣೆ ಮಾಡಿಲ್ಲ. ‌

ಅದು 9 ತಿಂಗಳು, 1 ವರ್ಷ, 3 ವರ್ಷ ಹೀಗೆ ವಿಳಂಬವಾಗಿಯೇ ವೇತನ ಪರಿಷ್ಕರಣೆ ಮಾಡಲಾಗಿದೆ. 2004ನ್ನು ಹೊರತು ಪಡಿಸಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಾರಿಗೆ ಸಂಸ್ಥೆಯ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟು ಮುಷ್ಕರ ನಡೆಸಿವೆ. ಆದರೆ ಕರ್ನಾಟಕ ರಾಜ್ಯದ ಉಳಿದ ನಿಮಗ ಮಂಡಳಿಗಳಿಗೆ ಆಯಾ ವರ್ಷಕ್ಕೆ ಸರಿಯಾಗಿ ವೇತನ ಹೆಚ್ಚಳ ಮಾಡಿ ಸರ್ಕಾರಗಳು ಆದೇಶ ಹೊರಡಿಸುತ್ತಾ ಬಂದಿವೆ. ಇತ್ತ ಸಾರಿಗೆ ಸಂಸ್ಥೆ ನೌಕರರ ಬಗ್ಗೆ ಮಾತ್ರ ತಾರತಮ್ಯ ಧೋರಣೆ ಏಕೆ ಹೀಗೆ?

ಸ್ಫೋಟಕ ವಿಷಯ ಬೆಳಕಿಗೆ : ಈ ವಿಚಾರವಾಗಿ ಆಳವಾಗಿ ಕೆದಕಿ ನೋಡಿದಾಗ ಉಳಿದ ನಿಗಮ ಮಂಡಳಿಗಳ ಅಧಿಕಾರಿಗಳು/ ನೌಕರರ ವಿಚಾರಿಸಿದಾಗ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಅದು ಏನೆಂದರೆ ಉಳಿದ ನಿಗಮ/ ಮಂಡಳಿಗಳು ಕಾಲ ಕಾಲಕ್ಕೆ ತಮ್ಮ ಸಿಬ್ಬಂದಿಗಳ ವೇತನ ಹೆಚ್ಚಳವನ್ನು ತಮ್ಮ ಸಂಘಟನೆಯ ಮೂಲಕ ಸರ್ಕಾರಕ್ಕೆ ಮನವಿ ಕೊಡುತ್ತವೆ.

ಆಯಾ ಕಾಲಕ್ಕೆ ವೇತನ ಹೆಚ್ಚಳವಾಗುವ ಸಮಯದಲ್ಲಿ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಎಲ್ಲ ಸಿಬ್ಬಂದಿಗಳ ಪರವಾಗಿ ಸಂಬಂಧಪಟ್ಟ ಮಂತ್ರಿಯವರಿಗೆ ಆಯಾ ಇಲಾಖೆಗಳ ಸಿಬ್ಬಂದಿಗಳ ಸಂಘಗಳ ನಾಯಕರು ಮನವಿ ಪತ್ರ ಸಲ್ಲಿಸುತ್ತಾರೆ.

ಆದರೆ ಸಾರಿಗೆ ಸಂಸ್ಥೆಗಳಲ್ಲಿ ಜಾತಿಗೊಂದು ಸಂಘಟನೆಗಳು ಹುಟ್ಟಿಕೊಂಡಿದ್ದು, ಇದರಲ್ಲಿ ಕೆಲ ಸಂಘಟನೆಗಳು ಆಯಾಯಾ ಜಾತಿಗಳಿಗೆ ಸೀಮಿತವಾಗಿವೆ. ಆಯಾ ಜಾತಿಗಳ ಸಿಬ್ಬಂದಿ/ ನೌಕರರ ಸಣ್ಣ ಪುಟ್ಟ ವರ್ಗಾವಣೆ/ ಶಿಸ್ತು ಪ್ರಕರಣಗಳ ಇತ್ಯರ್ಥಪಡಿಸಿಕೊಡುವ ಕಾರ್ಯದಲ್ಲಿ ತೊಡಗಿ ಅದೂ ಸಿಬ್ಬಂದಿ/ನೌಕರರಿಂದ ಹಣ ಪಡೆದು ಪ್ರಕರಣ ಇತ್ಯರ್ಥಪಡಿಸುವ ಅಧಿಕಾರಿಗೆ ಸ್ವಲ್ಪ ಕೊಟ್ಟು ಉಳಿದದ್ದನ್ನು ಇವರು ತಮ್ಮ ಜೇಬಿಗೆ ಇಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಾರಿಗೆ ನಿಮಗಳ ನೌಕರರು ಮಾತ್ರ ಸರ್ಕಾರಿ ನೌಕರರಲ್ಲ: ಗಮನಾರ್ಹವಾದ ವಿಚಾರವೆಂದರೆ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ನಾಲ್ಕೂ ಸಾರಿಗೆ ನಿಗಮಗಳು ಹಾಗೂ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌.ಟಿ.ಒ.)ಗಳು ಸಹ ಬರುತ್ತವೆ. ಆದರೆ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ನೌಕರರು, ಇದೇ ಇಲಾಖೆಯಡಿ ಬರುವ ನಾಲ್ಕೂ ಸಾರಿಗೆ ನಿಮಗಳ ನೌಕರರು ಮಾತ್ರ ಸರ್ಕಾರಿ ನೌಕರರಲ್ಲ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯ ನಿಯಮದಡಿ ಬರುವ ನಿಗಮ ಮಂಡಳಿಗಳು ಅಷ್ಟೇ.

ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸಿದಾಗ ರಾಜ್ಯದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿ ಇಲ್ಲಿ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಶಿಕ್ಷೆ ಅನುಭವಿಸುವುದು. ವರ್ಗಾವಣೆ, ಅಮಾನತು, ವಜಾ ಇತ್ಯಾದಿಗಳ ಉಗ್ರ ಶಿಕ್ಷೆಗಳಿಗೆ ಓಳಗಾಗಿ ಈವರೆಗೆ ಸಾವಿರಾರು ಚಾಲಕ/ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ತಮ್ಮ ಕುಟುಂಬ, ಬದುಕನ್ನು ಕಳೆದುಕೊಂಡಿದ್ದಾರೆ.

ಸಾವಿರಾರು ಚಾಲನಾ ಸಿಬ್ಬಂದಿಗಳ ಬಲಿದಾನ: ಇನ್ನು ಈ  ಹೋರಾಟಗಳಿಂದ ಸಾವಿರಾರು ಚಾಲನಾ ಸಿಬ್ಬಂದಿಗಳ ಬಲಿದಾನವಾಗಿದೆ. ಈ ನೌಕರರ ಸಾವಿನನಿಂದಇಂದು ಸಾರಿಗೆ ನಿಗಮಗಳು ಹೆಮ್ಮರವಾಗಿ ಬೆಳೆದಿವೆ ಎಂದರೆ ತಪ್ಪಾಗಲಾರದು. ಇಷ್ಟಾದರೂ ಕೂಡ ಸಂಘಟನೆಗಳ ಮುಖಂಡರು ಎನಿಸಿಕೊಂಡರು ಮಾತ್ರ ಕೆಲಸಕ್ಕೆ ಬಾರದವರಾಗಿಯೇ ಕಳೆದ 1996ರಿಂದ ಈವರೆಗೂ ಇದ್ದಾರೆ. ಈ ಸಂಘಟನೆಗಳ ಪದಾಧಿಕಾರಿಗಳ ಸಭೆ ಸಿಎಂ, ಸಾರಿಗೆ ಸಚಿವ ಅಧ್ಯಕ್ಷತೆಯಲ್ಲಿ ನಡೆದರೂ ಕೂಡ ಸರ್ಕಾರ ತೆಗೆದುಕೊಳ್ಳು ನಿರ್ಧಾರವೆ ಅಂತಿಮವಾಗಿದೆ.

ಅಂದ ಮೇಲೆ ಈ ಸಂಘಟನೆಗಳ ಪಾತ್ರ ನೌಕರರ ವೇತನ ಹೆಚ್ಚಳ ಸಂಬಂಧ ಸೇರಿದಂತೆ ಇತರೆ ಅವರ ಸಮಸ್ಯೆ ಬಗೆಹರಿಸುವಲ್ಲಿ ಎಲ್ಲಿ ಕಾಣುತ್ತಿದೆ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಏಕಪಕ್ಷೀಯವಾಗಿ ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿ ಹೊರಬರುವ ಈ ಸಂಘಟನೆಗಳ ಮುಖಂಡು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು ಸುಮ್ಮನಾಗುತ್ತಿದ್ದಾರೆ. ಇದರಿಂದ ನೌಕರರಿಗೆ ಎಷ್ಟು ನಷ್ಟವಾಗುತ್ತಿದೆ ಎಂಬ ಅರಿವು ಈ ಮೂರ್ಖರಿಗೆ ಇಲ್ಲವೆ?

ಇನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಸಹ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರು. ಆಗ ಅವರ ಹಿರಿಯ ಪುತ್ರ ಅಕಾಲ ಮರಣಕ್ಕೆ ತುತ್ತಾದುದರಿಂದ 2016ರಲ್ಲಿ ಶೇ.12.50 ರಷ್ಟು ವೇತನ ಹೆಚ್ಚಿಸಿ ಮುಷ್ಕರ ಕೊನೆಗೊಳಿಸಿ ತಮ್ಮ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋದರು.

ಈ ವಿಚಾರವನ್ನು ಏಕೆ ಈಗ ಪ್ರಸ್ತಾಪಿಸುತ್ತಿದ್ದೇವೆ ಎಂದರೆ, ಮುಖ್ಯಮಂತ್ರಿಗಳು ಸಮಾಜವಾದಿಗಳು, ಅಂಬೇಡ್ಕರ್‌ ಸಂವಿಧಾನವನ್ನು ಒಪ್ಪಿಕೊಂಡು ಯಥಾವತ್ತಾಗಿ ಪಾಲಿಸುವವರು. ಆದರೂ ಸಹ ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷ ಪೂರ್ಣಗೊಳಿಸುತ್ತಾ ಬಂದಿದ್ದರೂ ಸಹ ಹಾಗೂ ಸ್ವತಹ ಅವರೇ 500ನೇ ಕೋಟಿ ಟಿಕೆಟು ವಿತರಿಸಿ ವಿಶ್ವ ದಾಖಲೆಯ ಪುಸ್ತಕದಲ್ಲಿ ದಾಖಲಿಸಿದರೂ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಾತ್ರ ಈವರೆಗೂ ನಿರ್ಧಾರ ತೆಗೆದುಕೊಳ್ಳದಿರುವುದು ಭಾರಿ ನೋವು ತರುತ್ತಿದೆ.

ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು ಆದರೆ..?: ಇನ್ನು ಸಿದ್ದರಾಮಯ್ಯನವರು ಚುನಾವಣಾ ಸಭೆಗಳಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಉದ್ದೇಶಿಸಿ ಅಧಿಕಾರ ಶಾಶ್ವತವಲ್ಲ, ಸಾರಿಗೆ ನೌಕರರನ್ನು ಡಿಸ್ಮಿಸ್‌ ಮಾಡುತ್ತೀಯಾ, ಎಸ್ಮಾ ಜಾರಿ ಮಾಡ್ತೀಯಾ, ವರ್ಗಾವಣೆ ಮಾಡುತ್ತೀಯಾ ಇತ್ಯಾದಿಗಳಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಸಾರಿಗೆ ನೌಕರರ ಹೆಸರಲ್ಲಿ ಗೆದ್ದು ಬಂದು ಈಗ ಸಾರಿಗೆ ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವುದನ್ನು ಕೊಡದೆ ವಿಳಂಬ ಮಾಡುತ್ತಿರುವುದನ್ನು ಕರ್ನಾಟಕ ಸಮಸ್ತ ಜನತೆ ಖಂಡಿಸಬೇಕಿದೆ.

ನಿಮ್ಮ ಹಟ ಬಿಟ್ಟು 600 ಕೋಟಿಗೂ ಹೆಚ್ಚು ಟಿಕಟು ವಿತರಿಸಿರುವ ಈ ಶುಭ ಸಂದರ್ಭದಲ್ಲಾದರೂ ಸಾರಿಗೆ ನೌಕರರಿಗೆ ಕೊಡಬೇಕಾದ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ 1-1-2024 ರಿಂದ ವೇತನ ಪರಿಷ್ಕರಿಸಿ ಅಲ್ಲಿಂದ ಇಲ್ಲಿಯವರೆಗೆ ಕೊಡಬೇಕಿರುವ ಬಾಕಿಯನ್ನು ಕೂಡಲೇ ಸರ್ಕಾರದಿಂದ ಬಿಡುಗಡೆ ಮಾಡುವ ಮೂಲಕ ಕೊಟ್ಟ ಮಾತಿಗೆ ಬದ್ಧರಾಗಿ ಎಂದು ಮನವಿ ಮಾಡುತ್ತಿದ್ದೇವೆ.

ಸಮಸ್ತ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಪರವಾಗಿ ಎನ್‌.ಶ್ರೀನಿವಾಸ, ಸಂಚಾರ ನಿಯಂತ್ರಕ, ಬಿಎಂಟಿಸಿ ಡಿಪೋ-22
ದಿನಾಂಕ: 07-12-2025.

Megha
the authorMegha

Leave a Reply

error: Content is protected !!