Please assign a menu to the primary menu location under menu

NEWSಉದ್ಯೋಗನಮ್ಮರಾಜ್ಯ

KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೌಕರರ ಕೋರಿಕೆ‌ ಮೇರೆಗೆ ಕೆಎಸ್ಆರ್‌ಟಿಸಿ ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ‌ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಬಂಧಿತ ಕಾಯಿಲೆಗಳು) ನೌಕರರ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ.5 ರಷ್ಟು ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ.5 ರಷ್ಟು ಹುದ್ದೆಗಳನ್ನು ಮೀಸಲಿರಿಸಿದ್ದು, ಒಟ್ಟು ಶೇ.10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.

ಅದರಂತೆ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 05-07-2023 ರ ಬೆಳಗ್ಗೆ 11ಗಂಟೆಯಿಂದ ಪ್ರಾರಂಭವಾಗಿ, 31-12-2023ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ http://ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಈಗ ಅರ್ಜಿ ಸಲ್ಲಿಸಿದ್ದವರ ಅಂತರ ನಿಗಮ ವರ್ಗಾವಣೆಯ ವಿವರಗಳು ಈ ರೀತಿ ಇವೆ. 1‌.ಅಂತರ ನಿಗಮ ಸಾಮಾನ್ಯ ವರ್ಗದಡಿ ವರ್ಗಾವಣೆಗೊಂಡ ನೌಕರರ ಸಂಖ್ಯೆ – 1175.

2.ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 72

  1. ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ತೀವ್ರ ತರಹದ ಅನಾರೋಗ್ಯ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದಳು ಸಂಬಂಧಿಸಿದ ಕಾಯಿಲೆಗಳು) ಪ್ರಕರಣದಲ್ಲಿ ನೌಕರರ ಕೋರಿಕೆ ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 61

ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ 1,308 ನೌಕರರು ಅಂತರ ನಿಗಮ ವರ್ಗಾವಣೆಗೆ ಅವರ ಕೋರಿಕೆ ಮೇರೆಗೆ ಅರ್ಹರಿರುತ್ತಾರೆ. ಈ ಸಂಭವನೀಯ ಅಂತರ ನಿಗಮ ವರ್ಗಾವಣೆ ಪಟ್ಟಿಯನ್ನು 28.11.2024 ರಂದು http://ksrtc.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಈ ಪಟ್ಟಿಗೆ 28.11.2024 ರಿಂದ 04.12.2024ರ ಸಂಜೆ 5.30 ರವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: 7ನೇ ವೇತನ ಆಯೋಗ ವೇತನಶ್ರೇಣಿ ಯಥಾವತ್ತಾಗಿ ನಮಗೂ ಅಳವಡಿಸಿ- ಸಾರಿಗೆ ಸಚಿವರಿಗೆ ಅಧಿಕಾರಿಗಳು, ನೌಕರರ ಮನವಿ ಅಧಿಕಾರಿಗಳ ಬಗ್ಗು ಬಡಿಯಲು "ದಂಡಂ ದಶಗುಣಂ": EPS ಪಿಂಚಣಿದಾರರ ಎಚ್ಚರಿಕೆ ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯೊಳಗೆ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ಸಾರಿಗೆ ಬಸ್‌-ಕಾರು ಡಿಕ್ಕಿ: ಐವರು ಮೆಡಿಕಲ್ ವಿದ್ಯಾರ್ಥಿಗಳು ಸಾವು, ಇಬ್ಬರ ಸ್ಥಿತಿ ಗಂಭೀರ ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ