KSRTC: ಹೈಕೋರ್ಟ್ ಮೂಲಕವೆ ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ವೇತನ ಹೆಚ್ಚಳ ಸೌಲಭ್ಯ ಸಿಗುವ ಭರವಸೆ


- ಅ.9ಕ್ಕೆ ಹೈ ಕೋರ್ಟ್‌ನಲ್ಲಿ ವೈಯಕ್ತಿಕ ಅರ್ಜಿ ಹಾಕಲಿರುವ ನೌಕರರು
ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಆ ಪ್ರಕರಣದ ವಿಚಾರಣೆ ಹೈ ಕೋರ್ಟ್‌ನಲ್ಲಿ ನಡೆಯುತ್ತಿದೆ.
ಈ ಮಧ್ಯೆ ಸೆ. 24ರಂದು ಪ್ರಕರಣದ ವಿಚಾರಣೆ ನಡೆದಿದ್ದು ಮತ್ತೆ ಅ.9ಕ್ಕೆ ಈ ಪ್ರಕರಣವನ್ನು ಹೈ ಕೋರ್ಟ್ ಮುಂದೂಡಿದೆ.
ಈ ಹಿಂದೆ ಸೆ.3ರಂದು ಪ್ರಕರಣದ ವಿಚಾರಣೆ ನಡೆದಿತ್ತು. ನೌಕರರ ಪರ ವಕೀಲರು ಹಾಗೂ ಸರ್ಕಾರ, ಸಾರಿಗೆ ಆಡಳಿತ ಮಂಡಲಿ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ನೌಕರರ ಪರ ವಕೀಲರು ಐಎ ಹಾಕಿದ್ದರು. ಬಳಿಕ ಸೆ.10ಕ್ಕೆ ಮುಂದೂಡಲಾಗಿತ್ತು. ಮತ್ತೆ ಸೆ.17, 24ಕ್ಕೆ ವಿಚಾರಣೆ ನಡೆಯಿತು.
ಸಂಸ್ಥೆಯ ಪರ ವಕೀಲರು ನೌಕರರ ಪರ ವಕೀಲರು ಹಾಕಿರುವ ಐಎಗೆ ಸೆ.17ರಂದೇ ಆಕ್ಷೇಪಣೆ (Objection) ಸಲ್ಲಿಸಿದ್ದು, ಈ ನಡುವೆ ಸೆ.24ರಂದು ವಿಚಾರಣೆ ನಡೆದ ವೇಳೆ ಮತ್ತೆ ನೌಕರರು ವೈಯಕ್ತಿಕವಾಗಿ ಅರ್ಜಿ ಹಾಕಲು ಅ.9ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ. ಹೀಗಾಗಿ ನೌಕರರ ಪರ ವಕೀಲರಾದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ನೌಕರರ ವೇತನ ಹೆಚ್ಚಳ ಸಂಬಂಧ ಶತಾಯಗತಾಯ ಕಾನೂನು ಪ್ರಕಾರ ನ್ಯಾಯದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಈ ನಡುವೆ ನೌಕರರು ವೇತನ ಹೆಚ್ಚಳ ಸಂಬಂಧ ಹಾಗೂ 38 ತಿಂಗಳ ಹಿಂಬಾಕಿ ಬರಬೇಕಿರುವ ಸಂಬಂಧ ವೈಯಕ್ತಿಕವಾಗಿ ಅರ್ಜಿ ಹಾಕುತ್ತಿದ್ದು, ಈ ಅರ್ಜಿಯನ್ನು ಅ.9ರಂದು ಹಾಕಲಿದ್ದಾರೆ. ಇದಕ್ಕಾಗಿ ಈಗಾಗಲೇ 25ಕ್ಕೂ ಹೆಚ್ಚು ನೌಕರರು ವಕೀಲ ಶಿವರಾಜು ಬಿಸಿಯಾಗಿದ್ದರಿಂದ ಅವರನ್ನು ಹೈದರಾಬಾದ್‌ಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಯಾವುದೇ ಸಂಘಟನೆಗಳ ಬೆಂಬಲವಿಲ್ಲದೆ. ನೌಕರರು ಈಗಾಗಲೇ ಮಾರ್ಚ್‌ನಲ್ಲಿ ಹಾಕಿರುವ ಈ ಪ್ರಕರಣದ ಮೂಲಕ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಪಡೆಯುವ ಭರವಸೆ ಮೂಡಿದೆ. ಹೀಗಾ ವಕೀಲರು ಹಾಗೂ ಸಮಸ್ತ ನೌಕರರ ಪರವಾಗಿ 25ಕ್ಕೂ ಹೆಚ್ಚು ನೌಕರರು ಬರುವ ಅ.9ರಂದು ಅರ್ಜಿ ಹಾಕಲಿದ್ದಾರೆ. ಇದು ನೌಕರರಿಗೆ ವರದಾನವಾಗುವ ಎಲ್ಲ ಭರವಸೆಗಳನ್ನು ಮೂಡಿಸುತ್ತಿದೆ.
ಇನ್ನು ಈ ಪ್ರಕರಣ ತ್ವರಿತವಾಗಿ ಮುಗಿಯಬೇಕು ಎಂದು ಕೋರ್ಟ್ ಕೂಡ ಬಯಸಿದ್ದು ಆ ನಿಟ್ಟಿನಲ್ಲಿ ಹತ್ತಿರ ಹತ್ತಿರದಲ್ಲೇ ಡೇಟ್ ಕೂಡ ಕೊಡುತ್ತಿದೆ ಎಂದು ಹೇಳಬಹುದು.
ಪ್ರಕರಣವೇನು?: ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು20 ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ನೌಕರರ ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್ 10ರಂದು ಹೈ ಕೋರ್ಟ್‌ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣವನ್ನು ವಕೀಲರು ಉಚಿತವಾಗಿ ನಡೆಸುತ್ತಿದ್ದು, ಯಾವುದೇ ಅರ್ಜಿದಾರರಿಂದಲೂ ಸಂಭಾವನೆ ಪಡೆಯುತ್ತಿಲ್ಲ.
Related
