NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮತ್ತೆ ವಿಫಲವಾದ ಸಾರಿಗೆ ನೌಕರರ ವೇತನ ಹೆಚ್ಚಳದ ಸಭೆ- ಕೊತಕೊತ ಕುದಿಯುತ್ತಿರುವ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಒಕ್ಕೂಟದ ಪ್ರಮುಖರ ಜತೆ ಇಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯೂ ವಿಫಲಗೊಂಡಿದ್ದು ಮತ್ತೆ ಸಾರಿಗೆ ಸಚಿವರು ಸಿಎಂ ಅಂಗಳಕ್ಕೆ ತಮ್ಮ ಚೆಂಡನ್ನು ಎಸೆಯುವುದಾಗಿ ಹೇಳಿದ್ದಾರೆ.

ಹೀಗಾಗಿ ಇಂದು ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ ಮತ್ತೊಮ್ಮೆ ಮಹಾಪತನಗೊಂಡಂತ್ತಾಗಿದ್ದು, ಚಾತಕದ ಪಕ್ಷಿಯಂತೆ ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ ನೌಕರರಿಗೆ ಆಘಾತವಾದಂತಾಗಿದೆ.

2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಇದರ 24 ತಿಂಗಳ ಹಿಂಬಾಕಿ ಮತ್ತು 2020 ಜನವರಿ 1ರಿಂದ ಅನ್ವಯವಾಗುವಂತೆ ಆಗಿರುವ ಶೆ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬಗ್ಗೆ ಚರ್ಚಿಸಲಾಗಿದ್ದು, ಸಾರಿಗೆ ಸಚಿವರು ಇದು ನನ್ನ ಕೈಯಲ್ಲಿಲ್ಲ ಸಿಎಂ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ನೌಕರರಿಗೆ ನೀರಾಸೆಯುಂಟುಮಾಡಿದ್ದಾರೆ.

ಸಾರಿಗೆ ಸಚಿವರ ಹೇಳಿಕೆಯಿಂದ ಭಾರಿ ಬೇಸರಗೊಂಡಿರುವ ನೌಕರರ ಒಕ್ಕೂಟದ ಪದಾಧಿಕಾರಿಗಳು ಈ ಬಗ್ಗೆ ಒಕ್ಕೂಟದ ಎಲ್ಲ ಪದಾಧಿಕಾರಿಗಳೊಂದಿಗೆ ಈಗಾಗಲೇ ಮೀಟಿಂಗ್‌ ಮಾಡುತ್ತಿದ್ದು, ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲೇಬೇಕು ಎಂಬ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದಾರೆ.

ಈ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದನ್ನು ಸುದ್ದಿಗಾರರಿಗೆ ತಿಳಿಸುತ್ತೇವೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಒಟ್ಟಾರೆ ಸಾರಿಗೆ ಸಚಿವರು ಹಲ್ಲುಕಿತ್ತ ಹಾವಿನಂತೆ ಇದ್ದಾರೆ. ಅತ್ತ ಸಿಎಂ ಕೂಡ ಇವರ ಒತ್ತಾಯಕ್ಕೆ ಮಣಿಯದಿರುವುದರಿಂದ ಸಾರಿಗೆ ನೌಕರರು ವೇತನ ಹೆಚ್ಚಳವಾಗದೆ ಅಲ್ಪ ವೇತನಕ್ಕೆ ದುಡಿಯುತ್ತಿದ್ದಾರೆ.

ಇಂದು ನಡೆದ ಮೊದಲ ಸಭೆಯಲ್ಲಿ ನೌಕರರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ಹಾಗೂ ಕೆಎಸ್‌ಅರ್‌ಟಿಸಿ & ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಇನ್ನು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ನಡೆಯಬೇಕಿದ್ದು ಆ ಸಭೆಯಲ್ಲಿಯೂ ಇದೇ ಉತ್ತರವನ್ನು ಸಾರಿಗೆ ಸಚಿವರು ಕೊಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಎಲ್ಲ ಬೆಳವಣಿಗೆಯಿಂದ ನೌಕರರ ಆಕ್ರೋಶದ ಕಟ್ಟಿ ಒಡೆಯುವ ಹಂತ ತಲುಪಿದ್ದು ಮತ್ತೆ ದಿಢೀರ್‌ ಮುಷ್ಕರಕ್ಕೆ ಕರೆ ನೀಡುವ ಎಲ್ಲ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

ಹಿಂದಿನ ನಾಲ್ಕೂ ಸಭೆಗಳೂ ವಿಫಲ: ಆಗಸ್ಟ್‌ 4ರಂದು ಹೈ ವೋಲ್ಟೆಜ್‌ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಇದೇ ರೀತಿ ಬೇಡಿಕೆಗಳ ಕುರಿತು ಜುಲೈ 4ರಂದು ಸಂಜೆ ಮತ್ತೆ ಸಭೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಸಭೆಗಳು ಸೇರಿದಂತೆ ಒಟ್ಟು ಸಿಎಂ ಅಧ್ಯಕ್ಷತೆಯಲ್ಲಿ 4 ಸಭೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ನ.26ರಂದು ನಡೆದ 5ನೇ ಸಭೆಯಲ್ಲಾದರೂ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬ ವಿಶ್ವಾಸದಲ್ಲಿ ಸಂಘಟನೆಗಳು ಇದ್ದವು ಆದರೆ ಮತ್ತೆ ವಿಫಲಗೊಂಡಿದ್ದು ಸಾರಿಗೆ ಸಚಿವರು ಸಿಎಂ ಅಂಗಳಕ್ಕೆ ಚೆಂಡು ಎಸೆದಿರುವುದರಿಂದ ನೌಕರರು ಅಂತಿಮಾ ತೀರ್ಮಾನ ತೆಗೆದುಕೊಳ್ಳಬೇಕಿದೆ.

ನೌಕರರ   ಪ್ರಮುಖ ಬೇಡಿಕೆಗಳೇನು?: ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಆಗಬೇಕು.

ಈ ಸಂಬಂಧ ಈ ಹಿಂದೆಯೇ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟವೂ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆ  ಈಡೇರಿಕೆ ಬಗ್ಗೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಸೇರಿದಂತೆ ಪ್ರಮುಖರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

ಕಳೆದ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಇನ್ನು ನೌಕರರಿಗೆ ಸಿಕ್ಕಿಲ್ಲ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ  ಹೆಚ್ಚಳದ ಅವಧಿ ಮುಗಿದು 23 ತಿಂಗಳು ಕಳೆದರೂ ಆ ಬಗ್ಗೆಯೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

Megha
the authorMegha

Leave a Reply

error: Content is protected !!