KSRTC ತುಮಕೂರು: ಲಂಚ ಪ್ರಕರಣ ದೂರು ವಾಪಸ್ ಪಡೆಯಲು 5 ಸಾವಿರ ರೂ. ಲಂಚ ಕೊಟ್ಟ ಸಹಾಯಕ ಉಗ್ರಾಣಾಧಿಕಾರಿ ರೇಷ್ಮಾ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಸಹಾಯಕ ಉಗ್ರಾಣಾಧಿಕಾರಿ ರೇಷ್ಮಾ ಅಂಜುಮ್ ಅವರು ಫೋನ್ ಪೇ ಮೂಲಕ ಭ್ರಷ್ಟಾಚಾರ ಎಸಗಿರುವ ಬಗ್ಗೆ ಕೊಟ್ಟಿರುವ ದೂರನ್ನು ವಾಪಸ್ ಪಡೆಯುವುದಕ್ಕೆ ಒತ್ತಾಯಿಸಿ ದೂರುದಾರರಿಗೆ 5 ಸಾವಿರ ರೂ. ಲಂಚ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ಜಿಲ್ಲೆ ಹಾಗೂ ತಾಲೂಕಿನ ಗೂಳೂರು ಗ್ರಾಮದ ನಿವಾಸಿ ಸಿ.ನಾಗರಾಜು ಎಂಬುವರೆ ಸಾರಿಗೆ ನಿಗಮದ ಎಂಡಿ ಅವರಿಗೆ ಈ ಸಂಬಂಧ ದೂರು ಕೊಟ್ಟಿದ್ದಾರೆ. ಈ ದೂರನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಇಂದು ಭಾನುವಾರ ನಾಗರಾಜು ಅವರನ್ನು ಚಾಲಕರೊಬ್ಬರ ಮನೆಗೆ ಕರೆಸಿಕೊಂಡು 5 ಸಾವಿರ ರೂಪಾಯಿ ಲಂಚ ಕೊಟ್ಟಿದ್ದಾರೆ. ಈ ಬಗ್ಗೆ ನಾಗರಾಜು ಅವರೆ ವಿಡಿಯೋ ಮಾಡುವ ಮೂಲಕ ವಿಷಯ ಬಹಿರಂಗಪಡಿಸಿದ್ದಾರೆ.
ನಿಗಮದ ಸಹಾಯಕ ಉಗ್ರಾಣಾಧಿಕಾರಿ ರೇಷ್ಮಾ ಅಂಜುಮ್ ಅವರು ಲಂಚ ಪಡೆದಿರುವುದನ್ನು ಕೂಲಂಕಶವಾಗಿ ತನಿಖೆ ನಡೆಸಿ ಸೂಕ್ತ ಶಿಸ್ತುಕ್ರಮ ಕೈಗೊಂಡು ಅಮಾನತುಪಡಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಈ ದೂರನ್ನು ವಾಪಸ್ ಪಡೆಯಬೇಕು ಎಂದು ನಿಗಮದ ತುಮಕೂರು ಘಟಕ 2ರಲ್ಲಿ ಚಾಲಕನಾಗಿರುವ ಹಾಗೂ ತುಮಕೂರು ವಿಭಾಗದ ಫೆಡರೇಷನ್ ಅಧ್ಯಕ್ಷನಾಗಿರುವ ಅಫ್ಜಲ್ ಪಾಷ ತನ್ನ ಭೀಮ ಸಂದ್ರದಲ್ಲಿರುವ ಮನೆಗೆ ಕರೆಸಿಕೊಂಡು 5 ಸಾವಿರ ರೂಪಾಯಿ ಲಂಚದ ಹಣವನ್ನು ರೇಷ್ಮಾ ಅವರ ಮೂಲಕ ಕೊಡಿಸಿದ್ದಾರೆ ಎಂದು ನಾಗರಾಜು ಹೇಳಿದ್ದಾರೆ.

ನೋಡಿ ಲಂಚಬಾಕ ಅಧಿಕಾರಿಗಳು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ಯಾವರೀತಿಯಲ್ಲಿ ದೂರು ಕೊಟ್ಟವರಿಗೆ ಲಂಚದ ಆಮೀಷವೊಡ್ಡುತ್ತಾರೆ ಅಂತ. ಇಂಥ ಅಧಿಕಾರಿಗಳಿಂದ ನೌಕರರು ನೆಮ್ಮದಿ ಹಾಗೂ ಪ್ರಾಮಾಣಿಕವಾಗಿ ಡ್ಯೂಟಿ ಮಾಡಲಾಗುತ್ತಿಲ್ಲ. ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನಾಗರಾಜು ಒತ್ತಾಯಿಸಿದ್ದಾರೆ.
ಅಲ್ಲದೆ ಈ 5 ಸಾವಿರ ರೂಪಾಯಿ ಏನು ಲಂಚಕೊಟ್ಟಿದ್ದಾರೆ. ಈ ಹಣವನ್ನು ಸಂಬಂಧಪಟ್ಟ ತನಿಖಾಧಿಕಾರಿಗಳಿಗೆ ಕೊಡುವುದಾಗಿ ವಿಜಯಪಥಕ್ಕೆ ತಿಳಿಸಿದ್ದಾರೆ.
Related












