KSRTC ತುಮಕೂರು ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ!!

ತುಮಕೂರು: ಈ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಚಾಲಕರನ್ನು ಕಡೆಗಣಿಸಿ ಖಾಸಗಿ ಚಾಲಕರಿಗೆ ಅಂದರೆ ಗುತ್ತಿಗೆ ಆಧಾರದ ಮೇಲೆ ಬಂದಿರುವವರಿಗೆ ಅವಕಾಶ ಮಾಡಿಕೊಡುತ್ತಿರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಬೆಂಗಳೂರು ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಸಾರಿಗೆ ಸಿಬ್ಬಂದಿ ಮತ್ತು ಜಾಗೃತದಳದ ನಿರ್ದೇಶಕರಿಗೆ ಎಸ್.ಎಲ್. ಲೋಕೇಶ್ ಎಂಬುವರು ಇ ಮೇಲ್ ಮೂಲಕ ದೂರು ನೀಡಿದ್ದು ಕ್ರಮ ಕೈಗೊಂಡು ಆಗುತ್ತಿರುವ ಅಪಘಾತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ವಿಭಾಗದಲ್ಲಿ ಘಟಕಗಳಲ್ಲಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಗೇಟ್ ಮೀಟಿಂಗ್ ನಡೆಸುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ 25 ವರ್ಷಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಚಾಲಕರನ್ನು ನೀವು ನಮಗೆ ಅವಶ್ಯಕತೆ ಇಲ್ಲ ನೀವೆಲ್ಲರೂ ನಿರ್ವಾಹಕರಾಗಿ ಕೆಲಸ ನಿರ್ವಹಿಸಬೇಕು ನಿಮ್ಮ ಅಗತ್ಯವು ನಮಗೆ ಇಲ್ಲ ಎನ್ನುತ್ತಿದ್ದಾರೆ.
ಅಲ್ಲದೆ ಈ ಬಗ್ಗೆ ಏನಾದರೂ ಪ್ರಶ್ನೆ ಮಾಡಿದರೆ ಅಂಥ ಚಾಲಕರ ಮೊಬೈಲನ್ನು ಪರೀಕ್ಷಿಸಿ ಯಾವುದಾದರೂ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರ ಎಂದು ಗಮನಿಸುತ್ತಾರೆ. ಅದು ಸಹ ಅಲ್ಲದೆ ವಿಭಾಗಿಯ ನಿಯಂತ್ರಣ ಅಧಿಕಾರಿಗಳ ಚಾಲಕರು ದೂರದಿಂದ ಎಲ್ಲ ಸಿಬ್ಬಂದಿಗಳನ್ನು ವಿಡಿಯೋ ಮುಖಾಂತರ ಗಮನಿಸುತ್ತಿರುತ್ತಾರೆ ಹಾಗೂ ಅದನ್ನು ದಾಖಲೆ ಮಾಡಿಕೊಳ್ಳುತ್ತಾರೆ.
ಚಾಲಕ ಹಾಗೂ ನಿರ್ವಾಹಕರು ಈ ಅಧಿಕಾರಿಗಳು ಏನೆ ಹೇಳುತ್ತಾರೋ ಅದನ್ನಷ್ಟೇ ಕೇಳಬೇಕು ಯಾವುದೇ ರೀತಿಯ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡಿದರೆ ಅಂಥವರನ್ನು ಟಾರ್ಗೆಟ್ ಮಾಡುತ್ತಾರೆ. ನೀನು ಸರಿಯಾಗಿ ಕೆಲಸ ನಿರ್ವಹಿಸಿರುವುದಿಲ್ಲ ಎಂದು ಬೆದರಿಸಿ ಸಂಚಾರಿ ಶಾಖೆ ಅವರಿಗೆ ಇವರ ಹಾಜರಾತಿಯನ್ನು ತೆಗೆದುಕೊಂಡು ಬನ್ನಿ ಎಂದು ಹೆದರಿಸುತ್ತಾರೆ.
ಇನ್ನು ಈ ಅಧಿಕಾರಿಗಳ ದರ್ಪದಿಂದ ಇವರು ಘಟಕಕ್ಕೆ ಬಂದರೆ ಬೆಕ್ಕನ್ನು ಕಂಡ ಇಲಿಗಳ ರೀತಿ ಚಾಲಕ ನಿರ್ವಾಹಕರು ಇವರ ಕಣ್ಣಿನ ಬೀಳಬಾರದು ಎಂದು ಇದ್ದ ಜಾಗದಿಂದ ಓಡಿಹೋತ್ತಿದ್ದಾರೆ. ಇವರು ಬಂದ ತಕ್ಷಣ ಕೆಲಸ ನಿರ್ವಹಿಸಿ ಮನೆಗೆ ಹೋಗಬೇಕಾದ ಸಿಬ್ಬಂದಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತ ಅವರನ್ನು ಬೆದರಿಸುತ್ತಾರೆ. ಅಲ್ಲದೆ ರಜೆಗಳ ಬಗ್ಗೆ ಕೇಳಿದರೆ ನಾವು ಕೊಟ್ಟರೆ ತೆಗೆದುಕೊಳ್ಳಿ ಇಲ್ಲವಾದರೆ ಎಲ್ಲಿಗಾದರೂ ದೂರು ನೀಡಿ ಎಂದು ಗದರುತ್ತಾರೆ.
ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಗೇಟ್ ಮೀಟಿಂಗ್‌ನಲ್ಲಿ ಕುಂದು ಕೊರತೆಗಳ ಬಗ್ಗೆ ಚರ್ಚಿಸುವುದಾಗಿ ದಾಖಲೆಯಲ್ಲಿ ತಿಳಿಸಿರುತ್ತಾರೆ. ಆದರೆ ಅವರು ಮಾಡುವುದು ಮಾತ್ರ ಸಿಬ್ಬಂದಿಗಳನ್ನು ಭಯಪಡಿಸುವ ಕೆಲಸ. ಮುಖ್ಯವಾಗಿ ಚಾಲಕ ನಿರ್ವಾಹಕರನ್ನು ನೀವು ಗೂಂಡಾಗಳ ರೀತಿ ವರ್ತಿಸುತ್ತೀರಿ ಎಂದು ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ.
ಯಾವುದೇ ಸಿಬ್ಬಂದಿ ರಜೆ ಅಥವಾ ಮಾರ್ಗಗಳ ವಿಚಾರವಾಗಿ ಘಟಕ ವ್ಯವಸ್ಥಾಪಕರು ಇಲ್ಲ ಸಂಚಾರಿ ಶಾಖೆಯವರನ್ನು ಪ್ರಶ್ನಿಸಿದರೆ ಅಂಥವರನ್ನು ನೇರವಾಗಿ ಟಾರ್ಗೆಟ್ ಮಾಡಿ ಎಲ್ಲರ ಮುಂದೆ ಬೆದರಿಸುತ್ತಾರೆ. ಪರೋಕ್ಷವಾಗಿ ಸಂಚಾರ ಶಾಖೆಯವರು ಹಾಗೂ ಘಟಕ ವ್ಯವಸ್ಥಾಪಕರ ಬೆಂಬಲಕ್ಕೆ ನಿಲ್ಲುತ್ತಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವುದೇ ಇಲ್ಲ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಡಿಸಿ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯವರ ಪರವಾಗಿಯೇ ಇರುತ್ತಾರೆ ಎಂಬುವುದು.
ಇನ್ನು ಗೇಟ್ ಮೀಟಿಂಗ್‌ಗಳಲ್ಲಿ ಪದೇಪದೇ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಪ್ರಸ್ತಾಪಿಸುತ್ತಿರುವ ವಿಷವ, ನಮಗೆ ಚಾಲಕರ ಅವಶ್ಯಕತೆ ಇಲ್ಲ. ಒಂದು ದೂರವಾಣಿ ಕರೆ ಮಾಡಿದರೆ ನೂರು ಜನಕ್ಕೂ ಹೆಚ್ಚು ಖಾಸಗಿ ಚಾಲಕರು ನಮಗೆ ಕೆಲಸ ಮಾಡಲು ಸಿದ್ಧರಿದ್ದಾರೆ. ನೀವು ಬೇಡ, ಬೇಕಾದರೆ ರಾಜೀನಾಮೆ ನೀಡಿ ಹೋಗಿ. ನಾನೇ ನಿಮಗೆ ಬರುವ ಹಣವನ್ನು ಸೆಟ್ಲ್ಮೆಂಟ್ ಮಾಡಿಸಿ ಕೊಡುತ್ತೇನೆ ಎಂದು ಬೆದರಿಸುತ್ತಿದ್ದಾರೆ.
ನೋಡಿ ನಿಮಗೆ ಕೊಡುವ ಸಂಬಳದಲ್ಲಿ ಇಬ್ಬರು ಅಥವಾ ಮೂರು ಜನ ಚಾಲಕರಿಗೆ ಕೊಡಬಹುದು ಎಂದು ಹೇಳುತ್ತಾರೆ. 20-30 ವರ್ಷ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ನೌಕರರಿಗೆ ಕೊಡುವ ಗೌರವವೇ ಇದು. ಇವರು ಹೇಳುವುದನ್ನು ಕೇಳಿದರೆ ಒಬ್ಬ ಡಿಸಿಗೆ ಕೊಡುವ ಸಂಬಳದಲ್ಲಿ 5-6 ಜನ ಚಾಲಕರಿಗೆ ವೇತನ ಕೊಡಬಹುದು ಹಾಗಾದರೆ ಇವರು ರಾಜೀನಾಮೆ ಕೊಟ್ಟು ಹೋದರೆ ಸಂಸ್ಥೆಗೆ ಲಾಭವಾಗುತ್ತದೆ ಅಲ್ಲವೇ ಇವರ ಅವಶ್ಯಕತೆ ಏನಿದೆ ಅಲ್ವಾ? ಇವರ ಪ್ರಕಾರ ಅತಿ ಕಡಿಮೆ ಸಂಬಳದಿಂದ ಸಂಸ್ಥೆ ಏಳಿಗೆಗಾಗಿ ಹಗಲು ರಾತ್ರಿ ಎನ್ನದೆ ವಿಶ್ರಾಂತಿ ಇಲ್ಲದೆ ಕುಟುಂಬವನ್ನು ಬಿಟ್ಟು 20-30 ವರ್ಷ ಕಾಲ ದುಡಿದಿರುವ ಚಾಲಕರುಗಳಿಗೆ ಬೆಲೆ ಇಲ್ಲದಂತಾಗಿದೆ.
ಗುತ್ತಿಗೆ ಆಧಾರದ ಚಾಲಕರಿಂದ ಹೆಚ್ಚು ಅಪಘಾತ: ಇತ್ತೀಚಿನ ಸುಮಾರು 40 ದಿನಗಳಿಂದ ಇಲ್ಲಿಯವರೆಗೂ ತುಮಕೂರು ವಿಭಾಗದಲ್ಲಿ ಅತಿ ಹೆಚ್ಚು ಖಾಸಗಿ ಚಾಲಕರು ನಿರ್ವಹಿಸುತ್ತಿರುವ ಮಾರ್ಗಗಳಲ್ಲಿ ಅಪಘಾತಗಳಾಗಿರುವುದು ಸುದ್ದಿ ಮಾಧ್ಯಮಗಳಲ್ಲೂ ಬಂದಿದೆ. ಮಧುಗಿರಿ ಘಟಕ 1149, ಶಿರಾ ಘಟಕ 820, ತುಮಕೂರು ಘಟಕ 1208, ತುರುವೇಕೆರೆ ಘಟಕ 695 ಹೆಚ್ಚಿನ ಪ್ರಮಾಣದ ಕುಣಿಗಲ್ ಘಟಕ 1222, 1101, 956, 1039 ಈ ವಾಹನಗಳು ಅಪಘಾತಗೊಂಡಿದ್ದು ಕೆಲವು ಅಪಘಾತದಿಂದ ಪ್ರಾಣ ಹಾನಿಯಾಗಿದೆ.
ಅದಲ್ಲದೆ ಈ ಎಲ್ಲ ಅಪಘಾತ ಪ್ರಕರಣದಿಂದ ಸಂಸ್ಥೆಯ ವಾಹನಗಳು ಜಖಂಗೊಂಡಿದ್ದು ಸಂಸ್ಥೆಗೆ ಲಕ್ಷಾಂತರ ರೂಪಾಯಿಗಳು ನಷ್ಟವಾಗಿದೆ. ಕೆಲವೇ ಕೆಲವು ಗ್ಲಾಸ್ ಅಥವಾ ವಾಹನ ಜಖಂ ಗೊಂಡಾಗ ಯಾವುದೇ ತಪ್ಪುಗಳಿಲ್ಲದಿದ್ದರೂ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಏಕಾಏಕಿ ಅಮಾನತು ಹಾಗೂ ವಾಹನದ ಜಖಂ ವೆಚ್ಚವನ್ನು ಅವರಿಂದ ಮುಲಾಜಿಲ್ಲದೆ ಕಡಿತಗೊಳಿಸಿಕೊಳ್ಳಲಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಸಂಸ್ಥೆಯ ಚಾಲಕರು ಯಾವುದೇ ತಪ್ಪನ್ನು ಮಾಡದಿದ್ದರೂ ಕೆಲವು ಪ್ರಕರಣಗಳಲ್ಲಿ ವಿಚಾರಣೆ ಇಲ್ಲದೆ ಅವರ ಮೇಲೆ ಸಿಸ್ತುಕ್ರಮದ ನೆಪದಲ್ಲಿ ಅಮಾನತು ಮಾಡಲಾಗಿದೆ.
ಇತ್ತೀಚಿನ ಈ ವಿಭಾಗೀಯ ನಿಯಂತ್ರಣ ಅಧಿಕಾರಿ ಕೆಲವರ ವಾರ್ಷಿಕ ಬಡ್ತಿಗಳನ್ನು ಶಾಶ್ವತವಾಗಿ ತಡೆಹಿಡಿದಿದ್ದಾರೆ. ಸಾವಿರಾರು ರೂಪಾಯಿ ನಷ್ಟಕ್ಕೆ ಲಕ್ಷಾಂತರ ರೂಪಾಯಿಯನ್ನು ಚಾಲನಾ ಸಿಬ್ಬಂದಿಗಳು ಕಳೆದುಕೊಳ್ಳುವಂತಾಗಿದೆ. ಈ ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಸಂಸ್ಥೆಯ ಸಿಬ್ಬಂದಿಗಳ ತಪ್ಪಿಲ್ಲವೆಂದು ತೀರ್ಪು ಬಂದರೂ ಸಹ ಬೃಹಸ್ಪತಿಗಳಾದ ಡಿಸಿ ಮಾತ್ರ ಚಾಲನಾ ಸಿಬ್ಬಂದಿಗಳ ವಾರ್ಷಿಕ ಬಡ್ತಿಯನ್ನು ತಡೆಹಿಡಿದಿದ್ದಾರೆ.
ಈ ವಿಭಾಗ ನಿಯಂತ್ರಣ ಅಧಿಕಾರಿಗಳು ನ್ಯಾಯಾಲಯದ ತೀರ್ಪನ್ನೇ ಬದಿಗೆ ಸರಿಸಿ ಈ ರೀತಿ ನಡೆದುಕೊಳ್ಳುತ್ತಿರುವುದು ನೌಕರರಿಗೆ ಭಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಸಿಬ್ಬಂದಿಗಳ ದಾಖಲೆಗಳನ್ನು ಪರಿಶೀಲಿಸದೆ ಪರಾಮರ್ಶಿಸದೆ ಏಕಾಏಕಿ ವಿಚಾರಣೆಯಲ್ಲಿ ನಡೆದಿರುವ ವಿಷಯಗಳನ್ನು ಕೂಲಂಕಶವಾಗಿ ಪರಿಶೀಲಿಸದೆ ಶಿಕ್ಷೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಚಾಲಕರಿಂದ ವಾಹನಗಳು ಅಪಘಾತವಾದರೆ ವಿಭಾಗಿಯ ಮಟ್ಟದಲ್ಲಿಯೇ ಅದನ್ನು ರಿಪೇರಿ ಮಾಡುತ್ತಾರೆ ಹಾಗೂ ತುರ್ತಾಗಿ ರಿಪೇರಿ ಮಾಡಿ ಮಾರ್ಗಗಳಿಗೆ ಕಳಿಸುತ್ತಾರೆ. ಅದೇ ಸಂಸ್ಥೆಯ ಚಾಲಕರಿಂದ ವಾಹನಗಳು ಅಪಘಾತವಾದರೆ ಅದನ್ನು ಪ್ರಾದೇಶಿಕ ಕಾರ್ಯಾಗಾರ ಹಾಸನಕ್ಕೆ ಕಳುಹಿಸುತ್ತಾರೆ. ಆ ವಾಹನಗಳು ಇಲ್ಲಿ ರಿಪೇರಿ ಸಾಧ್ಯವಿದ್ದರೂ ಸಹ ಚಾಲಕರ ಮೇಲೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುವ ಉದ್ದೇಶದಿಂದಲೇ ಅದನ್ನು ಹಾಸನದ ಕಾರ್ಯಾಗಾರಗಳಿಗೆ ಕಳುಹಿಸುತ್ತಾರೆ.
ಅದಲ್ಲದೆ ಹೆಚ್ಚಿನ ದಿನಗಳು ವಿಭಾಗಿಯ ಕಾರ್ಯಗಾರದಲ್ಲಿ ನಿಲ್ಲಿಸಿಕೊಂಡು ಅದನ್ನು ಚಾಲಕರ ತಲೆಯ ಮೇಲೆ ದಂಡದ ರೂಪದಲ್ಲಿ ಇಷ್ಟು ದಿನ ವಾಹನವು ಚಾಲನೆಯಲ್ಲಿಲ್ಲ. ಇದರಿಂದ ಆದಾಯವು ಕಡಿಮೆಯಾಗಲು ಕಾರಣರಾಗಿರುತ್ತೀರಿ ಎಂದು ಆಪಾದನಾ ಪತ್ರದಲ್ಲಿ ದಾಖಲಿಸುತ್ತಾರೆ. ಇವರು ತುರ್ತಾಗಿ ವಾಹನ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಿದ್ದರೂ ಉದ್ದೇಶಪೂರ್ವಕವಾಗಿ ಹೆಚ್ಚಿನ ದಿನಗಳು ನಿಲ್ಲಿಸಿಕೊಳ್ಳುತ್ತಾರೆ. ಅದನ್ನು ಚಾಲಕರ ತಲೆಗೆ ಕಟ್ಟುತ್ತಾರೆ. ಡಿಸಿ ಮತ್ತು ಡಿಎಂಇ ಇಬ್ಬರು ಚಾಲನಾ ಸಿಬ್ಬಂದಿಗಳನ್ನು ಹಿಂಸಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅಲ್ಲದೇ ಇಲ್ಲಸಲ್ಲದ ಆರೋಪಗಳನ್ನು ಹುಡುಕಿ ಹುಡುಕಿ ಚಾಲನಾಸಿಬ್ಬಂದಿಗಳ ತಲೆಗೆ ಕಟ್ಟುತ್ತಿದ್ದಾರೆ.
ಅಲ್ಲದೆ ಯಾವ ಕಾರಣಕ್ಕೆ ಖಾಸಗಿ ಚಾಲಕರ ಮೇಲೆ ವಿಶೇಷ ಆಸಕ್ತಿ ವಹಿಸುತ್ತಾರೆ ಈ ಅಧಿಕಾರಿಗಳು ಎಂಬುದನ್ನು ಭದ್ರತಾ ಮತ್ತು ಜಾಗೃತ ಅಧಿಕಾರಿಗಳಾದ ತಾವು ತನಿಖೆ ನಡೆಸಿ ಘಟಕಗಳಲ್ಲಿರುವ ಸಿಬ್ಬಂದಿಗಳು ಮಾರ್ಗಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ. ಹೆಚ್ಚಿನ ಖಾಸಗಿ ಚಾಲಕರನ್ನು ಪಡೆದಿರುವ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಸಂಬಳದಿಂದ ಸಂಸ್ಥೆಗೆ ಆಗಿರುವ ನಷ್ಟದ ಹಣವನ್ನು ತುಂಬಿಸಿಕೊಳ್ಳಬೇಕು. ಇವರು ತಮ್ಮ ಮನಸೋ ಇಚ್ಛೆ ನಿಯಮಗಳನ್ನು ಆದೇಶಗಳನ್ನು ಮೌಖಿಕವಾಗಿ ಮಾಡುತ್ತಿದ್ದಾರೆ. HRMS ರಜೆಗಳು ಇನ್ನೊಂದು ದೊಡ್ಡ ಹಗರಣ. ಅದಕ್ಕಾಗಿ ಪ್ರತ್ಯೇಕ ದೂರನ್ನೇ ದಾಖಲಿಸಬೇಕಾಗುತ್ತದೆ.
ಈ ಎಲ್ಲ ಅಂಶಗಳನ್ನು ಸಂಸ್ಥೆಯಲ್ಲಿರುವ ಲಿಖಿತ ದಾಖಲೆಗಳನ್ನು ಪರಿಶೀಲಿಸಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಸಂಸ್ಥೆಯ ಸೂಕ್ತ ಕಾನೂನು ಕ್ರಮ ಜರುಗಿಸಿ ಹಾಗೂ ನೌಕರರು ಕೆಲಸ ನಿರ್ವಹಿಸಲು ಉತ್ತಮ ವಾತಾವರಣವನ್ನು ತುಮಕೂರು ವಿಭಾಗದ ಎಲ್ಲ ಘಟಕಗಳಲ್ಲಿ ಕಲ್ಪಿಸಿ ಕೊಡಬೇಕೆಂದು ಅಮಾಯಕ ಸಿಬ್ಬಂದಿಗಳ ಪರವಾಗಿ ನಾನು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಲೋಕೇಶ್ ದೂರಿನಲ್ಲಿ ತಿಳಿಸಿದ್ದಾರೆ.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...