ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಚಿತ್ರದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೋಲ್ವೋ ಬಸ್ ಹಾಗೂ ಟ್ರಕ್ ನಡುವೆ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕನ ಕಾಲು ಮುರಿದಿದ್ದು, ಓರ್ವ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಬೈ ಪಾಸ್ ಬಳಿ ನಡೆಸಿದೆ.
ಟ್ರಕ್ – ವಿಜಯಪುರ ಘಟಕ-2ರ ವೋಲ್ವೋ ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ ಚಾಲಕ ಎಚ್.ಬಿ.ಬಬಲೇಶ್ವರ್ ಅವರ ಕಾಲಿಗೆ ಬಲವಾದ ಪೆಟ್ಟುಬಿದ್ದಿದೆ. ಅಲ್ಲದೆ ಪ್ರಯಾಣಿಕರೊಬ್ಬರು ಕೂಡ ಗಾಯಗೊಂಡಿದ್ದು ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ವೋಲ್ವೋ ಬಸ್‌ನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇದು ಅಪಘಾತದ ತೀವ್ರತೆಯನ್ನು ಬಿಂಬಿಸುತ್ತಿದೆ.
ಈ ಅಪಘಾತದಿಂದ ಬಸ್‌ನ ಸ್ಟೇರಿಂಗ್ ಬೆಂಡಾಗಿದ್ದು, ಅದರಲ್ಲಿ ಚಾಲಕನ ಕಾಲು ಸಿಲುಕಿಕೊಂಡಿತ್ತು. ಈ ವೇಳೆ ಸಲಾಕೆಗಳನ್ನು ಬಳಸಿ ಸ್ಟೇರಿಂಗ್‌ನಲ್ಲಿ ಸಿಕ್ಕಿಕೊಂಡಿದ್ದ ಚಾಲಕನ ಕಾಲನ್ನು ಬಿಡಿಸಲಾಯಿತು.
Related

Megha