
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಪರಿಷ್ಕರಣೆ 14ತಿಂಗಳಗಳು ಕಳೆದರೂ ಮಾಡಿದಿರುವ ಸರ್ಕಾರದ ವಿರುದ್ಧ ಇಂದು (ಮಾ.10) ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೌಕರರ ಸರಿ ಸಮಾನ ವೇತನ ಕೊಡಿಸಲು ಶ್ರಮಿಸುತ್ತಿದ್ದಾರೆ.
ಈ ಬಗ್ಗೆ ಕಳೆದ ಫೆ.27ರಂದೆ ವಿಜಯಪಥಕ್ಕೆ ತಿಳಿಸಿದ್ದ ಅವರು, ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯನ್ನು ಇನ್ನೂ ಮಾಡಿಲ್ಲ. ಹೀಗಾಗಿ ಸರ್ಕಾರ ಮಾರ್ಚ್ 7ರಂದು ಮಂಡಿಸುವ 2025-26ನೇ ಸಾಲಿನ ಬಜೆಟ್‌ನಲ್ಲಿ ನೌಕರರಿಗೆ ಸಿಹಿ ಸುದ್ದಿ ಕೊಡದಿದ್ದರೆ ಹೈಕೋರ್ಟ್‌ನಲ್ಲಿ ಪಿಟಿಶನ್ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಅದಂತೆ ಇಂದು 10 ಮಂದಿ ನೌಕರರ ಸಹಿಯೊಂದಿಗೆ ಪಿಟಿಶನ್ ಫೈಲ್ ಮಾಡಿದ್ದಾರೆ.
ಈ ಮುಲಕ ಸಾರಿಗೆ ನೌಕರರ ಬಹು ವರ್ಷದ ಸರಿ ಸಮಾನ ವೇತನದ ಕನಸ್ಸು ಈ ಮೂಲಕ ಈಡೇರುವ ನಿರೀಕ್ಷೆಯಲ್ಲಿ ನೌಕರರು ಇರಬಹುದು ಎಂದೇ ಹೇಳಲಾಗುತ್ತಿದೆ. ಹೀಗಾಗಿ ಇಂದು ಹೈ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಕೂಡ ಅತೀ ಶೀಘ್ರದಲ್ಲೇ ನ್ಯಾಯಾಧೀಶರ ಮುಂದೆ ಬರಲಿದೆ ಎಂದು ವಕೀಲ ಶಿವರಾಜು ತಿಳಿಸಿದರು.
ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆ ಸರ್ಕಾರ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ನೌಕರರಿಗೆ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮತ್ತೆ ವೇತನ ಪರಿಷ್ಕರಣೆ ಆಗಬೇಕಿತ್ತು, ಅದನ್ನು ಕೂಡ ಮಾಡಿಲ್ಲ.
ಈ ಎಲ್ಲವನ್ನು ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ಇಂದು ನೌಕರರಿಗೆ ವೇತನ ಕೊಡಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
