KSRTC ನಮ್ಮ ಬಸ್ – ನಮ್ಮ ಬಸ್ ಆಗಿರುವುದಕ್ಕೆ ಬಿಟ್ಟುಬಿಡಿ..!
Deva01/07/2024
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಮ್ಮ ಬಸ್ ನಮ್ಮ ಬಸ್ ಆಗಿರುವುದಕ್ಕೆ ಬಿಟ್ಟುಬಿಡಿ ಎಂದು ಪ್ರಜ್ಞಾವಂತ ನಾಗರಿಕರೊಬ್ಬರು ವಿಡಿಯೋ ಮಾಡಿ ಮನವಿ ಮಾಡಿದ್ದಾರೆ.
ಅಂದರೆ, ಇಂದು ಸಾರಿಗೆ ನಿಗಮದ ಬಸ್‌ಗಳು ಒಂದು ರೀತಿ ಜಾಹೀರಾತು ನೀಡುವ ತಾಣಗಳಾಗಿದ್ದು, ಅದರಲ್ಲೂ ಯುವಕರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಬಸ್‌ಗಳಲ್ಲಿ ಹಾಕುವ ಮೂಲಕ ಸಂಸ್ಥೆಇಂಥ ಹೀನಾಯ ಸ್ಥಿತಿಗೆ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ರೀತಿಯ ಜಾಹೀರಾತುಗಳಿಂದ ಯುವಜನತೆ ದಾರಿ ತಪ್ಪುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿರುವ ಅವರು, ಈ ಹಿಂದೆ ಇದ್ದ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ರಾರಾಜಿಸುತ್ತಿದ್ದ ಸ್ಥಳಗಳಲ್ಲಿ ಬೇಡದ ಜಾಹೀರಾತುಗಳು ಬಂದಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇಂಥ ಜಾಹೀರಾತುಗಳನ್ನು ಮೊದಲು ತೆಗೆದುಹಾಕಿ ಈ ಹಿಂದೆ ಇದ್ದ ಕುವೆಂಪು, ಡಿವಿಜಿ ಅವರ ಕವನದ ಸಾಲುಗಳನ್ನು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Related
Deva
Leave a reply