CRIMENEWSನಮ್ಮಜಿಲ್ಲೆ

ಮಂಡ್ಯ- 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ, 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ ಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪ ಸಾಭೀತದ ಹಿನ್ನೆಲೆಯಲ್ಲಿ 59 ವರ್ಷದ ವ್ಯಕ್ತಿಗೆ ಮಂಡ್ಯದ ಎರಡನೇ ಜಿಲ್ಲಾ ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದ ಶಿವಣ್ಣ (59) ಎಂಬಾತನೆ ಈ ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ಗುರುಯಾದವನು.

ಘಟನೆ ವಿವರ: 2023ರ ಜನವರಿಯಲ್ಲಿ ತನ್ನ ಮನೆ ಮುಂದೆ ಆಟವಾಡುತ್ತುದ್ದ ಮೂರು ವರ್ಷದ ಮಗುವನ್ನು ತನ್ನ ಮನೆಗೆ ಕರೆದೊಯ್ದ ಕಾಮುಕ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೆ ಮಗುವಿಗೆ ಬೆದರಿಕೆ ಹಾಕಿದ್ದ.

ವಿಷಯ ತಿಳಿದ ಮಗುವಿನ ತಾಯಿ ಕೃಷ್ಣರಾಜ ಸಾಗರ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಬಳಿಕ ಶಿವಣ್ಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನೀಚ ಕೃತ್ಯವೆಸಗಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಈ ಸಂಬಂಧ ಕೋರ್ಟ್ ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್ ಕುಮಾರ್ ಶುಕ್ರವಾರ (2025 ಜೂನ್ 11) ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕೃಷ್ಣರಾಜ ಸಾಗರ ಠಾಣೆಯ ಪಿಎಸ್‌ಐ ರಮೇಶ್ ಕರಕೀಕಟ್ಟಿ ಹಾಗೂ ಸಿಬ್ಬಂದಿಯವರಾದ ಎಎಸ್‌ಐ ಸತೀಶ್, ಸಿಬ್ಬಂದಿ ಯಧುರಾಜ್, ರೇಣುಕುಮಾರ್, ಅಶ್ವಿನಿ, ಪುಟ್ಟಲಕ್ಷ್ಮಿ ಅವರು ತನಿಖಾ ತಂಡದಲ್ಲಿದ್ದರು.

Megha
the authorMegha

Leave a Reply

error: Content is protected !!