ಬೆಂಗಳೂರು ಗ್ರಾಮಾಂತರ: 2025-26ನೇ ಸಾಲಿನ ಪ್ರಥಮ ಪಿಯುಸಿ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಜಿಲ್ಲೆಯ ಎಲ್ಲ ವಸತಿ ಶಾಲಾ ಕಾಲೇಜುಗಳಲ್ಲಿ ಅರ್ಜಿಯನ್ನು ವಿತರಿಸಲಾಗುವುದು, ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.
ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಜಡಿಗೇನಹಳ್ಳಿ, ಹೊಸಕೋಟೆ ತಾಲೂಕು. ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಬಚ್ಚಹಳ್ಳಿ, ದೊಡ್ಡಬಳ್ಳಾಪುರ ತಾಲೂಕು. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಬೊಮ್ಮವಾರ, ದೇವನಹಳ್ಳಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯಲು ಈ ಅವಕಾಶ ಕಲ್ಪಿಸಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೇಕಡ 75% ರಷ್ಟು ಇತರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ 25% ಸ್ಥಾನಗಳನ್ನು ವರ್ಗವಾರು ಮೀಸಲಿರಿಸಲಾಗಿದೆ. ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 50% ರಷ್ಟು ಹಾಗೂ ಇತರೆ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 50% ಮೀಸಲಿರಿಸಲಾಗಿದೆ.
ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಊಟ ಮತ್ತು ವಸತಿ, ಲೇಖನ ಸಾಮಗ್ರಿ, ಪಠ್ಯಪುಸ್ತಕ, ಶೂ ಸಾಕ್ಸ್, ಸಮವಸ್ತ್ರ, ಸಿ.ಇ.ಟಿ ನೀಟ್ ಮತ್ತು ಜೆ.ಇ.ಇ ಪರೀಕ್ಷೆಗಳಿಗೆ ತರಬೇತಿ ಹಾಗೂ ಇತರೆ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕಿರಣ್ ಕುಮಾರ್ ಪ್ರಾಂಶುಪಾಲರು 9110256424, ನಾಗರತ್ನಮ್ಮ ಪಿ. ಪ್ರಾಂಶುಪಾಲರು 8105526933, ರೇಖಾ. ಎಸ್. ಪ್ರಾಂಶುಪಾಲರು 7349391473 ಹಾಗೂ ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂ, 217. ಎರಡನೇ ಮಹಡಿ ಜಿಲ್ಲಾಡಳಿತ ಭವನ ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 562110 ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್.ಪ್ರೇಮ ತಿಳಿಸಿದ್ದಾರೆ.
Related

You Might Also Like
ಕರ್ನಾಟಕ ಹೈಕೋರ್ಟ್ ನ್ಯಾ.ಸೋಮಶೇಖರ್ ಮಣಿಪುರ ಹೈಕೋರ್ಟ್ ಸಿಜೆಯಾಗಿ ನೇಮಕ
ಬೆಂಗಳೂರು: ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಸಂವಿಧಾನದ 217ನೇ ವಿಧಿಯಡಿ...
ಜನೌಷಧ ಕೇಂದ್ರಗಳ ಸ್ಥಾಪನೆ ವಿಚಾರ: ಒಂದರಿಂದ ಮತ್ತೊಂದು ಮಳಿಗೆ ವ್ಯವಹಾರಕ್ಕೆ ಅಡ್ಡಿ ಎಂಬ ಕಾರಣ ಸಲ್ಲ- ಹೈಕೋರ್ಟ್
ಬೆಂಗಳೂರು : ಬಡ ಜನತೆಗೆ ಕಡಿಮೆ ಬೆಲೆಗೆ ರೋಗ ನಿರೋಧಕ ಔಷಧಗಳು ಲಭ್ಯವಾಗುತ್ತಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳ ಸ್ಥಾಪನೆ ವಿಚಾರದಲ್ಲಿ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಯ...
KSRTC ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಚಾಲಕರು ಸೇರಿ 35ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರೂ ಸೇರಿದಂತೆ 35ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ...
ವರುಣನ ಆರ್ಭಟಕ್ಕೆ ರಾಜ್ಯದಲ್ಲಿ ಐವರು ಬಲಿ: ಮನೆಗೆ ನುಗ್ಗಿದ ನೀರು- ನಿದ್ದೆಗೆಟ್ಟ ನಿವಾಸಿಗಳು
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 36 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆ ಮಂಗಳವಾರವೂ ಮುಂದುವರಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಕೆಲವೆಡೆ ಮನೆಗಳಿಗೆ...
ಸಿವಿಲ್ ನ್ಯಾಯಾಧೀಶರಾಗಲು ಕನಿಷ್ಠ ಮೂರು ವರ್ಷ ವಕೀಲ ವೃತ್ತಿ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನ್ಯೂಡೆಲ್ಲಿ: ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಲು ಅಭ್ಯರ್ಥಿಯಾಗುವುದಕ್ಕೆ ಮೂರು ವರ್ಷ ವಕೀಲರಾಗಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಸುಪ್ರೀಂಕೋರ್ಟ್...
ವಿಶ್ವ ಹೈಪರ್ ಟೆನ್ಷನ್ ಡೇ: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ – ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್ !
ಬೆಂಗಳೂರು: ವಿಶ್ವದಲ್ಲಿ 30ರಿಂದ 70ರ ವಯಸ್ಸಿನ ನಡುವಿನ 1.28 ಬಿಲಿಯನ್ ಜನರು ಹೈಪರ್ ಟೆನ್ಷನ್ಗೆ ಒಳಗಾಗಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಮೂವರಲ್ಲಿ ಒಬ್ಬರು ಹೈಪರ್ ಟೆನ್ಷನ್ ( ರಕ್ತದ...
ರಾಜ್ಯ ರಾಜಧಾನಿಯಲ್ಲಿ ರಾತ್ರಿಯಿಡೀ ಮಳೆ: ಮನೆಗಳು ಜಲಾವೃತ, ಧರೆಗುರುಳಿದ ಮರಗಳು
ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ರಾತ್ರಿ ಇಡೀ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆ ಸಮಸ್ಯೆಯಾಗಿದ್ದು, ಬಿಬಿಎಂಪಿ ಅಧಿಕಾರಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ...
ವಿವಾದಿತ ಜಮೀನಿನಲ್ಲಿ ಮಾವಿನಕಾಯಿ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ
ಹುಣಸೂರು: ವಿವಾದಿತ ಜಮೀನಿನಲ್ಲಿ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ರೈತನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಂಕಹಳ್ಳಿ ಗ್ರಾಮದ ನಿವಾಸಿ...
K.R.ಪೇಟೆ – ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಕೇಸ್ ದಾಖಲು
ಕೃಷ್ಣರಾಜಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದ ಹುಲ್ಲಿನ ಮೆದೆಯಲ್ಲಿ ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಗ್ರಾಮಾಂತರ ಠಾಣೆಯಲ್ಲಿ ಗ್ರಾಮದ ಸವರ್ಣಿಯ ಯುವಕನ ವಿರುದ್ಧ ಕೊಲೆ...