NEWSಸಂಸ್ಕೃತಿಸಿನಿಪಥ

ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆ ಸ್ಪರ್ಶ ನೀಡಿದ ಮಾಯಾ ಜಿಂಕೆ

ಪರಸಂಗದ ಗೆಂಡೆತಿಮ್ಮ: ಕೃತಿ ಬಿಡುಗಡೆ, ಪ್ರದರ್ಶನ

ವಿಜಯಪಥ ಸಮಗ್ರ ಸುದ್ದಿ

ನ್ನಡದ ಸೃಜನಶೀಲ ಲೇಖಕ ಕೃಷ್ಣ ಆಲನಹಳ್ಳಿ ಅವರ ಅನನ್ಯ ಕಾದಂಬರಿ ಪರಸಂಗದ ಗೆಂಡೆತಿಮ್ಮ ಕಥಾವಸ್ತು 60 ರ ದಶಕದ್ದು. ಜೀವನೋಪಾಯಕ್ಕೆ ಮೈಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ದಿನಬಳಕೆಯ ವಸ್ತುಗಳನ್ನು ಬುಟ್ಟಿಯಲ್ಲಿ ಹೊತ್ತು ವ್ಯಾಪಾರ ಮಾಡುತ್ತಿದ್ದ ಗೆಂಡೆತಿಮ್ಮ. ಈತನ ಸಂಗಾತಿಯಾಗಿ ಬಂದ ಮರಂಕಿ ಪ್ಯಾಟೆ ಹೆಣ್ಣು. ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಮಾಯಾ ಜಿಂಕೆ.

ಸಾಲುಂಡಿ, ಪ್ಯಾಟೆ ಸೋಕಿಗೆ ಮನಸೋತ ಗೌವಳ್ಳಿ ಹೆಣ್ಣುಮಕ್ಕಳ ಕಂಡ ವ್ಯಾದಿಗ್ರಸ್ತ ಮನಸುಗಳು ಉಂಟುಮಾಡಿದ ತಲ್ಲಣ, ಅಸಹನೆ, ವಿಪ್ಲವ ಇಡೀ ಹಳ್ಳಿಯ ನೆಮ್ಮದಿಗೆ ಭಂಗ ಉಂಟು ಮಾಡಿ ಮರಂಕಿ – ಗೆಂಡೆತಿಮ್ಮನ ಬದುಕಿಗೆ ಕೊಳ್ಳಿ ಇಟ್ಟವು. ಮರಂಕಿಯ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಆಧುನಿಕತೆ ಇಂದು ವಿಶ್ವದಾದ್ಯಂತ ವ್ಯಾಪಿಸಿ ನೆಲಮೂಲ ಸಂಸ್ಕೃತಿಯನ್ನೇ ಅಲುಗಾಡಿಸುತ್ತಿರುವುದು ವಿಪರ್ಯಾಸ.

ಪರಸಂಗದ ಗೆಂಡೆತಿಮ್ಮ ಕಥಾವಸ್ತುವಿನ ಕಾಲಘಟ್ಟ, ಜೀವನಕ್ರಮ ಇಂದಿನ ಪೀಳಿಗೆಗೆ ತಿಳಿಸುವುದೇ ಈ ರಂಗಕೃತಿ ಮತ್ತು ರಂಗಪ್ರಯೋಗದ ಉದ್ದೇಶ. ಈ ರಂಗರೂಪವನ್ನು ಸಿದ್ಧಗೊಳಿಸಿರುವ ಡಾ. ಎಂ.ಬೈರೇಗೌಡ ಗ್ರಾಮೀಣ ಹಿನ್ನೆಲೆಯಿಂದ ಬಂದ ದೇಸಿ ಪ್ರತಿಭೆ. ಜಾನಪದ ತಜ್ಞ, ಅಧ್ಯಾಪಕ, ನಾಟಕಕಾರ, ಕವಿ, ನಟ, ನಿರ್ದೇಶಕ, ಪ್ರಕಾಶಕ ಹೀಗೆ ಬಹುಮುಖ ಪ್ರತಿಭೆಯ ಡಾ ಎಂ.ಬೈರೇಗೌಡರು ಕಾದಂಬರಿಯನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸಿದ್ದಾರೆ.

ಈಗಾಗಲೇ ಮೂರು ಯಶಸ್ವೀ ಪ್ರದರ್ಶನಗಳನ್ನು ಕಂಡ ಪರಸಂಗದ ಗೆಂಡೆತಿಮ್ಮ ನಾಟಕದ ನಾಲ್ಕನೇ ಪ್ರದರ್ಶನ ಇದೇ ಜುಲೈ ತಿಂಗಳ 4ನೇ ತಾರೀಖು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮರುಪ್ರದರ್ಶನ ಆಗುತ್ತಿದೆ. ಜೊತೆಗೆ ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಡಾ. ಎಂ. ಬೈರೇಗೌಡರ ರಂಗರೂಪದ ಪರಸಂಗದ ಗೆಂಡೆತಿಮ್ಮ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ ನೆರವೇರಲಿದೆ.

ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಕೃಷ್ಣ ಆಲನಹಳ್ಳಿ ಅವರ ಮಗ ಪ್ರಧ್ಯುಮ್ನ, ನಾಟಕಕಾರ ಡಾ. ಎಂ. ಬೈರೇಗೌಡ, ಕತೆಗಾರ-ಚಲನಚಿತ್ರ ನಿರ್ದೇಶಕ ಕೃಷ್ಣ ಮಾಸಡಿ, ರೂಪಾಂತರದ ವಿ. ಗಂಗಾಧರ್, ಕೆ. ಕನಕರಾಜ್ ಉಪಸ್ಥಿತರಿರುವರು ಎಂದು ರಂಗನಿರ್ದೇಶಕ ಹಾಗೂ ರೂಪಾಂತರದ ಕೆ.ಎಸ್.ಡಿ.ಎಲ್. ಚಂದ್ರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು: ಗುಡ್ಡಕುಸಿತ, ಬಸ್‌ ನಿಲ್ದಾಣ, ದೇವಾಲಯಗಳು ಜಲಾವೃತ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸಾರಿಗೆ ನೌಕರರಿಗೆ ನಿರಾಸೆ KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ...