NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಕುರಿತು ಚರ್ಚಿಸಲು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಇದೇ ಸೆ.5ರಂದು ಎಲ್ಲ ನಿಗಮಗಳ ಎಂಡಿಗಳೊಂದಿಗೆ ವಿಡಿಯೋ‌ ಸಂವಾದ ಆಯೋಜಿಸಲಾಗಿದೆ.

ಈ ಸಂಬಂಧ ನಾಳೆ (ಸೆ.5) ಮಧ್ಯಾಹ್ನ 4.30ಕ್ಕೆ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ಕರೆದಿರುವ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಭಾಗವಹಿಸಿದಬೇಕು ಎಂದು ಸಾರಿಗೆ ಇಲಾಖೆ ಅರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್‌.ಪುಷ್ಪ ತಿಳಿಸಿದ್ದಾರೆ.

ನೌಕರರ ಬೇಡಿಕೆಗಳ ಕುರಿತು ಈಗಾಗಲೇ ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಹಲವಾರು ಸಭೆಗಳು ಜರುಗಿವೆ ಆದರೆ, ಆ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಳ್ಳಲಾಯಿತು ಎಂಬುದರ ಬಗ್ಗೆ ಮಾತ್ರ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.

ಇನ್ನು ಕಳೆದ 2020ರ ಜನವರಿ 1ರ ಅನ್ವಯ ನೌಕರರಿಗೆ ಅಗ್ರಿಮೆಂಟ್‌ ಮೂಲಕ ವೇತನ ಹೆಚ್ಚಳವಾಗಬೇಕಿತ್ತು. ಆದರೆ, ಮತ್ತೊಂದು ಅಗ್ರಿಮೆಂಟ್‌ ಟೈಮ್‌ ಬರುತ್ತಿದ್ದರೂ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಚರ್ಚೆಯಲ್ಲೇ ತೊಡಗಿದ್ದು, ನೌಕರರಿಗೆ ಯಾವುದೇ ರೀತಿಯ ವೇತನ ಮಾತ್ರ ಹೆಚ್ಚಳವಾಗಿಲ್ಲ.

ಇತ್ತ ಸಾರಿಗೆ ನೌಕರರ ಕೆಲ ಸಂಘಟನೆಗಳ ಮುಖಂಡರು ಅಗ್ರಿಮೆಂಟ್‌ ಆಗಬೇಕು ಎಂದು ಹೇಳುತ್ತಿದ್ದರೆ. ಇನ್ನು ಕೆಲ ಸಂಘಟನೆಗಳ ಮುಖಂಡರು ನಮಗೆ ವೇತನ ಆಯೋಗ ಅಳವಡಿಸಿ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದರೆ, ಕಳೆದ 3-4 ದಶಕದಿಂದಲೂ ಅಗ್ರಿಮೆಂಟ್‌ ಮಾಡಿಕೊಂಡು ಬರಲಾಗುತ್ತಿದೆ. ಇದು ಕೇವಲ ಸರ್ಕಾರದ ಮಟ್ಟದಲ್ಲಿ ಮಾತ್ರವಾಗುತ್ತಿದ್ದು, ಆ ಅಗ್ರಿಮೆಂಟ್‌ಗೆ ಇದುವರೆಗೂ ಸಂಬಂಧಪಟ್ಟ ನೌಕರರ ಸಂಘಟನೆಗಳು ಒಪ್ಪಿಗೆ ಸೂಚಿಸಿ ಒಪ್ಪಂದ ಪತ್ರಕ್ಕೆ ಸಹಿ ಮಾಡಿಲ್ಲ.

Advertisement

ಅಂದರೆ ಇದು ನೌಕರರ ವಿರುದ್ಧವಾಗಿ ಈವರೆಗೂ ಸರ್ಕಾರ ಮತ್ತು ಆಡಳಿತ ಮಂಡಳಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಅವರು ಮಾಡಿರುವ ಅಗ್ರಿಮೆಂಟ್‌ನಿಂದ ನಮಗೆ ಮತ್ತು ನಮ್ಮ ನೌಕರರಿಗೆ ತೃಪ್ತಿಯಾಗಿಲ್ಲ ಎಂದು ನೂರಾರು ಬಾರಿ ನೌಕರರ ಯೂನಿಯನ್‌ಗಳ ಮುಖಂಡರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈಗಲೂ ನೀಡುತ್ತಿರುತ್ತಾರೆ.

ಈ ಎಲ್ಲವನ್ನು ಗಮನಿಸಿರುವ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಇನ್ನು ಮುಂದಾದರೂ ಈ ರೀತಿ ಕಿರಿಕಿರಿಯಾಗದಿರುವಂತ ನಿರ್ಣಯವನ್ನು ತೆಗೆದುಕೊಂಡು ನೌಕರರ ಮತ್ತು ಅಧಿಕಾರಿಗಳ ನಡುವೆ ಉತ್ತಮ ಭಾಂದವ್ಯ ಬೆಸೆಯಬೇಕಿದೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!