NEWSನಮ್ಮಜಿಲ್ಲೆಸಂಸ್ಕೃತಿ

ಶಿಲ್ಪಕಲೆಯ ಮೇರು ಪರ್ವತ ಅಮರಶಿಲ್ಪಿ ಜಕಣಾಚಾರಿ : ಮಹೇಶ್ ಆಚಾರ್ಯ

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ : ಕಲ್ಲು – ಶಿಲ್ಪಕಲೆ ಗಳ ಕೆತ್ತನೆಯ ಮೂಲಕ ನಾಡಿನ ಸಂಸ್ಕೃತಿ ಮತ್ತು ಇತಿಹಾಸಕ್ಕೆ ತನ್ನದೆಯಾದ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿಯವರು ಶಿಲ್ಪಕಲೆಯ ಮೇರು ಪರ್ವತ ಹಾಗೂ ಮುಕುಟ ಕಳಸದ ಮಣಿ ಎಂದು ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಮಹೇಶ್ ಆಚಾರ್ಯ ಶ್ಲಾಘಿಸಿದರು.

ಪಟ್ಟಣದ ಅರಸು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವಿಶ್ವಕರ್ಮ ಸೇವಾ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ನಾಡಿನ ಸಂಸ್ಕೃತಿ ಹಾಗೂ ಇತಿಹಾಸ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಶಿಲಿಯ ಮೇಲೆ ಕೆತ್ತನೆ ಮೂಡಿರುವುದು. ಜಕಣಚಾರಿ ಕೊಟ್ಟಿರುವಂತಹ ಕೊಡುಗೆ ಹಾಗೂ ಸಾಧನೆಗೆ ಸಾವಿಲ್ಲ ಅದು ಸೂರ್ಯ ಚಂದ್ರ ಇರುವವರೆಗೂ ಜೀವಂತವಾಗಿರುತ್ತದೆ ಆದರಿಂದ ಅವರನ್ನು ಕನ್ನಡದ ಮುಕುಟ ಮಣಿ ಎಂದು ಶ್ಲಾಘಿಸಿದರು.

ನಾವೆಲ್ಲರೂ ಜಕಣಾಚಾರ್ಯ ಅವರ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಮಕ್ಕಳಿಗೂ ತಿಳಿಸಬೇಕು. ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿ ಇವುಗಳನ್ನು ಮಕ್ಕಳಿಗೆ ತಿಳಿಸಿದರೆ ಅವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಮಂಜುನಾಥ್ ಆಚಾರ್ಯ ಮಾತನಾಡಿ, ಜಕಣಾಚಾರಿ ಅವರ ಸಂಸ್ಕರಣ ದಿನ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು, ಇಂಥ ವೇದಿಕೆಗಳು ಸಮಾಜದ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಹಾಗೂ ಹಕ್ಕೊತ್ತಾಯ ಮಾಡುವ ಕೆಲಸವಾಗಬೇಕಿದೆ ಎಂದರು.

ಭಾರತೀಯರು ವಿವಿಧತೆಯಲ್ಲಿ ಏಕತೆ ಕಂಡವರು ಅದೇ ರೀತಿ ನಮ್ಮ ಸಮಾಜದ ಕೂಡ ಪಂಚ ಕಸುಬುಗಳ ಮೂಲಕ ಎಲ್ಲರ ಜೊತೆಜೊತೆಯಾಗಿ ನಡೆಯುವವರು ಹಾಗಾಗಿ ನಾವು ಜನಪರ ಕೆಲಸಗಳನ್ನು ಮಾಡುವ ಮೂಲಕ ಎಲ್ಲರೂ ಸಂಘಟಿತರಾಗಬೇಕು ಅಮರ ಶಿಲ್ಪಿ ಜಕಣಚಾರಿ ಹೊಯ್ಸಳ ಪರಂಪರೆಯನ್ನು ಜಗತ್ತಿಗೆ ಸಾರಿದ ಏಕೈಕ ಕಲಾವಿದ ಎಂದು ಹೇಳಿದರು.

ಬೇಲೂರಿನ ಚನ್ನಕೇಶ ದೇವಾಲಯ ಇವರ ಕಲಾಕೃತಿಗೆ ಕೈಗನ್ನಡಿಯಾಗಿದೆ. ಶಿಲ್ಪಿಯಾದವರು 64 ವಿದ್ಯೆಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿರಬೇಕು. ಅಂತವರು ಮಾತ್ರ ಶ್ರೇಷ್ಠ ಕಲೆಗಾರನಾಗಲು ಸಾಧ್ಯ. ಸುತ್ತಿಗೆ ಹಿಡಿದ ಮಾತ್ರಕ್ಕೆ ಶಿಲ್ಪಿಯಾಗಲು ಸಾಧ್ಯವಿಲ್ಲ. ಸಕಲ ವಿದ್ಯೆಗಳನ್ನು ಪಾಂಡಿತ್ಯ ಹೊಂದಿರಬೇಕು ಎಂದರು.

ಇನ್ನು ಕಲಾವಿದ ಎಂತಹ ಪರಿಸ್ಥಿತಿಯನ್ನದಾರು ಎದುರಿಸುವ ಮನೋಶಕ್ತಿ ಇರಬೇಕು ಇದನ್ನು ಸ್ವತಃ ಚಾಣಕ್ಯರೆ ತಿಳಿಸಿದ್ದಾರೆ ನಮ್ಮ ಸಂಸ್ಕೃತಿಯನ್ನು ತೋರಿಸಲು ಇರುವ ಪ್ರತಿಬಿಂಬಗಳು ದೇವಾಲಯಗಳು ಅದು ನಮ್ಮ ಹಿರಿಮೆ. ಶಿಲ್ಪಕಲೆಯನ್ನು ದೇಶಕ್ಕೆ ಪರಿಚಹಿಸಲು ಶಿಲ್ಪಕಲಾ ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಆಗಬೇಕು ಆ ಮೂಲಕ ವಿಶ್ವಕರ್ಮರ ಜಗತ್ತಿಗೆ ತಮ್ಮ ಕಲೆಯನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಮುಖಂಡ ಈರಣ್ಣಯ್ಯ ಮಾತನಾಡಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಉಪ ತಹಸಿಲ್ದಾರ್ ಶಶಿಧರ್, ಶಿರಸ್ತೆದಾರ್ ರಾಧಾ, ಶಕೀಲಾ ಬಾನು, ವಿನೋದ್ ಕುಮಾರ್, ವಿಶ್ವಕರ್ಮ ಸಮಾಜದ ತಾಲೂಕು ಗೌರವಾಧ್ಯಕ್ಷ ಅಣ್ಣಯ್ಯ ಚಾರ್, ಉಪಾಧ್ಯಕ್ಷ ತಿರು ನೀಲಕಂಠ, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಜಿ ಯೋಗೇಶ್, ಸಂಘಟನಾ ಕಾರ್ಯದರ್ಶಿ ಗಣೇಶ್.

ಸದಸ್ಯರಾದ ರಾಮಾಚಾರಿ, ಮಹೇಶ್, ಸದಾ ಕಂಪಲಾಪುರ, ಲೋಕಪಾಲಯ್ಯ, ಪ್ರಕಾಶ್ ಆಚಾರ್, ಮನು, ಶಿಕ್ಷಕ ಮಹದೇವ್ , ವಿಶ್ವಕರ್ಮ ಮಹಿಳಾ ಸಮಾಜದ ಅಧ್ಯಕ್ಷೆ ಭಾಗ್ಯಮಹದೇವ್, ವಿಶ್ವಕರ್ಮ ನೌಕರ ಸಂಘದ ಅಧ್ಯಕ್ಷ ನಟೇಶ್ , ಪುರಸಭಾ ಸದಸ್ಯ ರವಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿಕೆಗೆ ಜೆಡಿಎಸ್ ನಾಯಕರಿಂದ ಅದ್ದೂರಿ ಸ್ವಾಗತ ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ - ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ KSRTC: ಬಾನಂದೂರು - ಶ್ರೀಕ್ಷೇತ್ರ ಆದಿ ಚುಂಚನಗರಿ ನಡುವಿನ ಬಸ್‌ ಸಂಚಾರಕ್ಕೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಚಾಲನೆ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಸಂಬಂಧ ಕರೆದಿದ್ದ ಎಂಡಿಗಳ ಸಭೆ ಮುಂದೂಡಿಕೆ KSRTC- 3ನಿಗಮಗಳ 15 ಡಿಸಿಗಳ ವರ್ಗಾವಣೆ ಮಾಡಿ ಆದೇಶ: ಸಿಪಿಎಂ KSRTC: ಅಪಘಾತದಿಂದ ಮೃತಪಟ್ಟ ನಾಲ್ವರು ನೌಕರರ ಕುಟುಂಬಕ್ಕೆ ತಲಾ 1ಕೋಟಿ ರೂ. ಚೆಕ್‌ ವಿತರಣೆ KSRTC: ನಾಳೆಯಿಂದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜನ್ಮಸ್ಥಳ ಬಾನಂದೂರು- ಆದಿ ಚುಂಚನಗಿರಿಗೆ ನೇರ ಬಸ್ ಸೌಕರ್ಯ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ