ಗದಗ: ನಮ್ಮ ಹೆಮ್ಮೆಯ ಸಾರಿಗೆ ಬಸ್ಸುಗಳು ಜನರಿಂದ, ಜನರಿಗೋಸ್ಕರ ಜಾಗೃತಿ ಅಭಿಯಾನವನ್ನು ಶುಕ್ರವಾರ 09-08-2024ರ ಇಂದಿನಿಂದ ರೋಣ ಬಸ್ ನಿಲ್ದಾಣದಿಂದ ಬೆಂಗಳೂರುವರೆಗೆ ಆಧುನಿಕ ಗಾಂಧಿ ಮುತ್ತಣ್ಣ ಚ. ತಿರ್ಲಾಪೂರ ಪಾದಯಾತ್ರೆ ಆರಂಭಿಸುತ್ತಿದ್ದಾರೆ.
ಸಾರ್ವಜನಿಕರ ಗಮನಕ್ಕೆ, ಸಾರಿಗೆ ಬಸ್ಸುಗಳೇ ನಮ್ಮ ಎಲ್ಲರ ಜೀವನಾಡಿ ಇಡೀ ದೇಶವೇ ಒಂದು ಕುಟುಂಬ ನಾವು ಎಲ್ಲರೂ ಬಂಧು-ಬಳಗ. ಎಲ್ಲರೂ ಸೇರಿಕೊಂಡು ಬಹಳ ಸಮಾಧಾನದಿಂದ, ಸಂತೋಷದಿಂದ ಬಸ್ಸಿನಲ್ಲಿ ಪ್ರಯಾಣ ಬೆಳೆಸೋಣ. ಬಸ್ಸಿನಲ್ಲಿ ಹತ್ತುವಾಗ ಸರದಿಯಲ್ಲಿ ನಿಂತು ಹತ್ತೋಣ ಹಾಗೂ ಹಿರಿಯರಿಗೆ, ವಿಕಲಚೇತನರಿಗೆ ಮೊದಲು ಅವಕಾಶ ಕಲ್ಪಿಸೋಣ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ನಮ್ಮನ್ನು ತಲುಪಿಸುವ ಚಾಲಕರು ಮತ್ತು ನಿರ್ವಾಹಕರಿಗೆ ಸಹಕರಿಸೋಣ. ಸಾರಿಗೆ ಬಸ್ಸುಗಳ ಅಧಿಕಾರಿಗಳ ಜತೆ ಹಾಗೂ ಸಿಬ್ಬಂದಿಗಳ ಜತೆಗೆ ಗೌರವದಿಂದ ಸಹಕರಿಸೋಣ. ಸಾರಿಗೆ ಬಸ್ಸುಗಳನ್ನು ನಾವು ಎಲ್ಲರೂ ಸ್ವಚ್ಛವಾಗಿ ಇಟ್ಟುಕೊಳ್ಳೋಣ.
ದೇಶಾಭಿಮಾನ ದೇವರಿದ್ದಂತೆ, ದೇಶದ್ರೋಹ ಬದುಕಿದ್ದು ಸತ್ತಂತೆ ದೇಶ ಎಲ್ಲಕ್ಕಿಂತಲೂ ಮಿಗಿಲೂ, “ಗೂಡ ಬಿಟ್ರು ಗುರಿ ಬಿಡಬಾರದು” ಬಿಟ್ಟು ಹೋಗುವ ಪ್ರಪಂಚಕ್ಕೆ ಕೊಟ್ಟು ಹೋಗುವುದು ಬಹಳಷ್ಟಿದೆ. ಸಾಧಿಸದೆ ಸತ್ತರೆ ಸಾವಿಗೆ ಅವಮಾನ “ಸಮಾಜ ಸೇವೆಯೇ ನನ್ನ ಜನ್ಮಸಿದ್ದ ಹಕ್ಕು” ಹೀಗೆ ಘೋಷವಾಕ್ಯಗಳೊಂದಿಗೆ ಆಧುನಿಕ ಗಾಂಧಿ ಮುತ್ತಣ್ಣ ಚ. ತಿರ್ಲಾಪೂರ ಅವರು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾದಯಾತ್ರೆ ಆರಂಬಿಸಿದ್ದಾರೆ.
ಪಾದಯಾತ್ರೆ ಮಾರ್ಗ : ಗದಗ ಜಿಲ್ಲೆಯ ರೋಣ ಬಸ್ ನಿಲ್ದಾಣದಿಂದ ಗದಗ, ಮುಂಡರಗಿ, ಹೂವಿನಹಡಗಲಿ, ಜಗಳೂರ, ಚಿತ್ರದುರ್ಗ, ತುಮಕೂರ, ಬೆಂಗಳೂರುವರೆಗೆ ಸಾಗಲಿದೆ.
ಸರ್ಕಾರದ ಗಮನಕ್ಕೆ: ಸರ್ಕಾರ ನಾಲ್ಕೂ ನಿಗಮಗಳ ನೌಕರರಿಗೆ 1-1-2020 ರ ವೇತನ ಪರಿಷ್ಠರಣೆ ಸಮಯದಲ್ಲಿ ಕೊಡಬೇಕಾದ 38 ತಿಂಗಳ ವೇತನ ಹಿಂಬಾಕಿಯನ್ನು ಕೂಡಲೇ ಕೊಡಬೇಕು. ಸರ್ಕಾರ 1-1-2024 ಕ್ಕೆ ಮಾಡಬೇಕಾದ ವೇತನ ಪರಿಷ್ಕರಣೆಯನ್ನು ಸರಕಾರಿ ನೌಕರರ ಸರಿ ಸಮಾನವಾಗಿ ಸಾರಿಗೆ ಸಂಸ್ಥೆಯ ನೌಕರರಿಗೆ ಕೂಡಲೇ ಮಾಡಬೇಕು ಈ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಈಡೇರಿಸಲೇಬೇಕು.
ಸಾರ್ವಜನಿಕರ ನಡೆ ಹೀಗಿರಲಿ: ಚಾಲಕರು ಹಾಗೂ ನಿರ್ವಾಹಕರ ಜತೆಗೆ ಒಳ್ಳೆಯ ರೀತಿಯಿಂದ ಸಹಕರಿಸೋಣ, ಗೌರವಿಸೋಣ. ಸಾರಿಗೆ ಬಸ್ಸುಗಳು ನಮ್ಮ ಎಲ್ಲರ ಆಸ್ತಿ ಒಳ್ಳೆಯ ಆದರ್ಶ ಮುಖಿಯಾಗಿ ಒಳ್ಳೆಯ ಸ್ವಚ್ಛಮನಸ್ಸಿನಿಂದ ಕಾಪಾಡಿಕೊಳ್ಳೋಣ. ಬಸ್ಸಿನಲ್ಲಿ ಚಲಿಸುವ ಸಾಧು, ಸಂತರು, ಗುರುಗಳು, ಹಿರಿಯರು ಮಹಿಳೆಯರು ಎಲ್ಲರನ್ನೂ ಗೌರವದಿಂದ ಕಾಣೋಣ.
ಸಾರಿಗೆ ಬಸ್ಸುಗಳನ್ನು ನಾವು ಎಲ್ಲರೂ ಸ್ವಚ್ಛವಾಗಿ ಇಟ್ಟುಕೊಳ್ಳೋಣ. ಚಾಲಕರ ಹಾಗೂ ನಿರ್ವಾಹಕರ ಜತೆಗೆ ಪ್ರೀತಿಯಿಂದ ತಾಳ್ಮೆಯಿಂದ ಸಹನೆಯಿಂದ ನಡೆದುಕೊಳ್ಳೋಣ. ಸಾರಿಗೆ ಬಸ್ಸುಗಳಿಗೆ ಕಲ್ಲು ಹೊಡೆಯುವದಾಗಲಿ, ಬೆಂಕಿ ಹಚ್ಚುವುದಾಗಲಿ ನಾಶ ಮಾಡುವುದಾಗಲಿ ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದುಬೇಡ.
ಬಸ್ಸು ನಿಲ್ದಾಣವನ್ನು ನಾವು ಎಲ್ಲರೂ ಸ್ವಚ್ಛವಾಗಿ ಇಡೋಣ. ಸಾರಿಗೆ ಬಸ್ಸುಗಳ ಅಧಿಕಾರಿಗಳ ಜೊತೆ ಹಾಗೂ ಸಿಬ್ಬಂದಿಗಳ ಜೊತೆಗೆ ಗೌರವದಿಂದ ಸಹಕರಿಸೋಣ. ಬಸ್ಸಿನಲ್ಲಿ ಪ್ರಮಾಣ ಮಾಡುವಾಗ ಕಡ್ಡಾಯವಾಗಿ ಟಿಕೇಟ್ ಕೇಳಿ ಪಡೆದುಕೊಂಡು ಪ್ರಯಾಣಬೆಳೆಸೋಣ. ಚಲಿಸುವ ಬಸ್ಸಿನಿಂದ ಇಳಿಯುವದಾಗಲಿ ಅಥವಾ ಹತ್ತುವುದಾಗಲಿ ಸಾಹಸ ಮಾಡದಿರೋಣ.
ಬಸ್ಸಿನಲ್ಲಿ ಹತ್ತುವಾಗ ಸರದಿಯಲ್ಲಿ ನಿಂತು ಹತ್ತೋಣ ಹಾಗೂ ಹಿರಿಯರಿಗೆ, ವಿಕಲಚೇತನರಿಗೆ ಮೊದಲು ಅವಕಾಶ ಕಲ್ಪಿಸೋಣ. ಸಾರಿಗೆ ಬಸ್ಸುಗಳೇ ನಮ್ಮ ಎಲ್ಲರ ಜೀವನ ಇಡೀ ದೇಶವೇ ಒಂದು ಕುಟುಂಬ ನಾವು ಎಲ್ಲರೂ ಬಂಧು ಬಳಗ ಎಲ್ಲರೂ ಸೇರಿಕೊಂಡು ಬಹಳ ಸಮಾಧಾನದಿಂದ, ಸಂತೋಷದಿಂದ ಬಸ್ಸಿನಲ್ಲಿ ಪ್ರಯಾಣ ಬೆಳೆಸೋಣ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ನಮ್ಮನ್ನು ತಲುಪಿಸುವ ಚಾಲಕರು ಮತ್ತು ನಿರ್ವಾಹಕರಿಗೆ ಸಹಕರಿಸೋಣ. ಬಸ್ಸಿನಲ್ಲಿ ಧೂಮಪಾನ ಹಾಗೂ ಮದ್ಯಪಾನ ಮಾಡಿ ಪ್ರಯಾಣ ಮಾಡುವುದು ಬೇಡ. ಬಸ್ ಸಾರಿಗೆ ಸಂಸ್ಥೆ ನಮ್ಮ-ನಿಮ್ಮ-ಎಲ್ಲರ ದೊಡ್ಡ ಆಸ್ತಿ ಎಲ್ಲರೂ ಸೇರಿ ಕಾಪಾಡಿಕೊಳ್ಳೋಣ ಹಾಗೂ ಇಂಧನ ಉಳಿತಾಯ ಮಾಡೋಣ ವಾಯುಮಾಲಿನ್ಯ ತಡೆಗಟ್ಟೋಣ.
ಸಾರಿಗೆ ಸಂಸ್ಥೆ ನಮ್ಮೆಲ್ಲರ ಆಸ್ತಿ ಇದನ್ನ ಉಳಿಸಿ ಬೆಳೆಸೊ ಜವಾಬ್ದಾರಿ ನಮ್ಮೆಲ್ಲರದ್ದು. ಸಾರಿಗೆ ಸಂಸ್ಥೆ ನಮ್ಮದು ಸಂಸ್ಥೆ ನೌಕರರು ನಮ್ಮನವರು ಸಹಕರಿಸೋಣ ಮತ್ತು ಉಳಿಸಿ ಬೆಳೆಸೋಣ. ಬಸ್ ಚಲಾಯಿಸುವಾಗ ಚಾಲಕರನ್ನು ಮಾತನಾಡಿಸದಿರೋಣ ಎಂಬ ಸಂದೇಶವನ್ನು ಸಾರುತ್ತಾ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.
55 ವರ್ಷದ ಮುತ್ತಣ್ಣ ಚ.ತಿರ್ಲಾಪೂರ ಅವರು ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಮುಂದಾಗಿದ್ದು ಅವರಿಗೆ ರೋಣ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಾಥ್ ನೀಡುತ್ತಿದ್ದಾರೆ. ಇವರಂತೆ ರಾಜ್ಯದ ನಾಲ್ಕೂ ನಿಗಮಗಳ ನೌಕರರು ಸಾಥ್ ನೀಡುವ ಮೂಲಕ ಪಾದಯಾತ್ರೆ ಯಶಸ್ವಿಗೊಳಿಸಬೇಕಿದೆ.