NEWSನಮ್ಮಜಿಲ್ಲೆನಮ್ಮರಾಜ್ಯ

KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜನಸಾಮಾನ್ಯರು ಬಳಸುವ KSRTC ಅಶ್ವಮೇಧ ಬಸ್‌ಗಳಿಗೆ ಉತ್ತಮ ಸ್ಪಂದನ ದೊರಕಿದ್ದು, ಈಗಾಗಲೇ 500ಕ್ಕೂ ಹೆಚ್ಚು ‘ಅಶ್ವಮೇಧ’ ಬಸ್‌ಗಳು ರಾಜ್ಯದ ವಿವಿಧೆಡೆ ಸಂಚಾರ ಆರಂಭಿಸಿವೆ. ಇದರ ಜತೆಗೆ ಎಲ್ಲ ಕಡೆಯಿಂದಲೂ ಇನ್ನಷ್ಟು ಬಸ್‌ಗಳು ಬೇಕು ಎಂಬ ಬೇಡಿಕೆ ಬರುತ್ತಿರುವುದರಿಂದ ಮತ್ತಷ್ಟು ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್‌ಗಳಲ್ಲಿ ಪ್ರಮುಖವಾಗಿ ಪ್ರಯಾಣಿಕರು‌ ಇತ್ತೀಚೆಗೆ ಪರಿಚಯಿಸಿರುವ ‘ಅಶ್ವಮೇಧ’ ಬಸ್‌ಗಳಲ್ಲಿ ಓಡಾಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಇದರಿಂದ ಇತರೆ ಬಸ್‌ಗಳಿಗಿಂತ ‘ಅಶ್ವಮೇಧ‘ ಬಸ್‌ಗಳು ಕಿಲೋ ಮೀ ಟರ್ಗೆ ಶೇ.10ಕ್ಕೂ ಹೆಚ್ಚು ವರಮಾನ ಗಳಿಸುತ್ತಿವೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಕಳೆದ ಫೆಬ್ರುವರಿಯಲ್ಲಿ ಹೊಸ ವಿನ್ಯಾಸದ ಈ ಬಸ್‌ಗಳನ್ನು ‘ಅಶ್ವಮೇಧ’ ಎಂಬ ಬ್ರಾಂಡ್ ಅಡಿಯಲ್ಲಿ ರಸ್ತೆಳಿಸಿದೆ. ಅಂದು ಈ ಹೆಸರಿನ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪ್ರಯಾಣಿಕರು ಅದಕ್ಕೆ ತಲೆಕೆಡಿಸಿಕೊಳ್ಳದೇ ಈ ಬಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇನ್ನು ಈ ಬಸ್‌ಗಳು 3.42 ಮೀಟರ್ ಎತ್ತರ ಈದ್ದು, ‘ಅಶ್ವಮೇಧ’ (ಕ್ಲಾಸಿಕ್) ಬಸ್‌ನಲ್ಲಿ 52 ಅಸನಗಳಿವೆ. ‘ಬಕೆಟ್ ಟೈಪ್’ ವಿನ್ಯಾಸ ಒಳಗೊಂಡಿವೆ. ವಾಹನದ ಮುಂದಿನ ಮತ್ತು ಹಿಂದಿನ ಗ್ಲಾಸ್‌ಗಳು ವಿಶಾಲವಾಗಿದರೆ, ಕಿಟಕಿ ಪ್ರೇಮ್ ಹಾಗೂ ಮೇಲಿನ ಗ್ಲಾಸ್‌ಗಳು ಕೂಡ ದೊಡ್ಡದಾಗಿದ್ದು, ಟಿಂಟೆಡ್ ಹೊಂದಿವೆ ಎಂದು ವಿವರಿಸಿದರು.

ಇನ್ನು ಲಗೇಜ್ ಇಡುವ ಸ್ಥಳಕೂಡ ದೊಡ್ಡದಿದೆ. ಮಧ್ಯೆ ನಿಂತುಕೊಳ್ಳಲು ಕೂಡ ವಿಶಾಲ ಜಾಗ ಇರುವುದರಿಂದ ಸಂಸ್ಥೆಯ ಇತರ ಬಸ್‌ಗಳ ಬದಲು ಈ ಬಸ್‌ಗಳಲ್ಲಿ ಜನ ಪ್ರಯಾಣಿಸಲು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಇನ್ನು ಅಶ್ವಮೇಧ ಬಸ್‌ಗಳಲ್ಲಿ ಸೀಟು ಸಿಗದಿದ್ದಾಗ ಮಾತ್ರ ಬೇರೆ ಬಸ್‌ಗಳನ್ನು ಅವಲಂಬಿಸುತ್ತಿದ್ದಾರೆ ಪ್ರಯಾಣಿಕರು ಎಂದು ಖುಷಿ ಹಂಚಿಕೊಂಡರು.

ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳು ಪ್ರತಿ ಕಿಲೋಮೀಟ‌ರ್ಗೆಗೆ 44 ರೂ.ಗಳಿಂದ 50 ರೂ.ಗಳವರೆಗೆ ಗಳಿಸುತ್ತಿದ್ದರೆ, ಅಶ್ವಮೇಧ ಬಸ್‌ಗಳು 52 ರೂ.ಗಳಿಂದ 62 ರೂ.ಗಳವರೆಗೆ ಸಂಪಾದಿಸುತ್ತಿವೆ. ಪಾಯಿಂಟ್ ಟು ಪಾಯಿಂಟ್‌ಗೆ ‘ಅಶ್ವಮೇಧ’ವನ್ನು ಬಳಸುತ್ತಿರುವುದು ಕೂಡ ಹೆಚ್ಚುವರಿ ವರಮಾನ ಬರುವುದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳಲ್ಲಿ ಬಹುತೇಕ ಪಾಯಿಂಟ್ ಟು ಪಾಯಿಂಟ್ ಇರುವುದರಿಂದ ನಿರ್ವಾಹಕರು ಇರುವುದಿಲ್ಲ. ಇದರಿಂದ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತಿದೆ. ನಿಲುಗಡೆ ರಹಿತವಾಗಿರುವ ಕಾರಣ, ದೂರದ ಊರುಗಳಿಗೆ ಪ್ರಯಾಣಿಸುವವರು ಇದೇ ಬಸ್‌ಗಳನ್ನು ಇಷ್ಟಪಡುತ್ತಿದ್ದಾರೆ ಎಂದು ಸಂಸ್ಥೆಯ ಎಂಡಿ ವಿ. ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನು ಪಾಯಿಂಟ್ ಟು ಪಾಯಿಂಟ್ ಬಸ್‌ಗಳಾದರೆ ತಡೆರಹಿತವಾಗಿ ಸಂಚರಿಸುತ್ತವೆ. ಆಗ ನಿರ್ವಾಹಕರು ಬೇಕಾಗುವುದಿಲ್ಲ. ಆರಂಭದ ಸ್ಥಳದಲ್ಲಿ ಚಾಲಕರೇ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾರೆ. ತಡೆರಹಿತ (ನಾನ್ ಸ್ಪಾಪ್) ಅಲ್ಲದ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಟಿಕೆಟ್ ನೀಡಲು ನಿರ್ವಾಹಕರು ಇರಲೇಬೇಕಾಗುತ್ತದೆ. ಇದು ಕೂಡ ನಮಗೆ ಲಾಭದಾಯಕವಾಗಿದೆ ಎಂದು ತಿಳಿಸಿದ್ದಾರೆ.

‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳು ಬೆಂಗಳೂರು–ಮೈಸೂರು, ಬೆಂಗಳೂರು–ಹಾಸನ, ಮಂಗಳೂರು–ಧರ್ಮಸ್ಥಳ ಸಹಿತ ಅನೇಕ ಕಡೆಗಳಲ್ಲಿ ‘ ಸಂಚರಿಸುತ್ತಿದ್ದರೂ ಪ್ರಯಾಣಿಕರಿಗೆ ಅನುಗುಣವಾಗಿ ಬಸ್‌ಗಳು ಸಿಗುತ್ತಿಲ್ಲ ಎಂದು ಮತ್ತಷ್ಟು ಬಸ್‌ಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ ಇನ್ನಷ್ಟು ಬಸ್‌ಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ಸಚಿವರು ಚಿಂತನೆ ನಡೆಸಿದ್ದಾರೆ ಎಂದು ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ... ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ: ಪುರಸಭೆ ಮಾಜಿ ಸದಸ್ಯ ನೀಲಕಂಠ ಕೆ.ಆರ್.ಪೇಟೆ: ಲೋಕಾ ಅದಾಲತ್‌ನಲ್ಲಿ ನೂರಾರು ಪ್ರಕರಣಗಳು ಇತ್ಯರ್ಥ