CRIMENEWSಕೃಷಿ

ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ 30ಕ್ಕೂ ಹೆಚ್ಚು ಮಂದಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ:  ಅನ್ನದಾತರ ರಾಜ್ಯ ಮಟ್ಟದ ರೈತರ ವಿಶ್ವ ರೈತ ಸಮಾವೇಶಕ್ಕೆ ಇಂದು ಬೆಳಗ್ಗೆ ಮೈಸೂರಿಗೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮ 9ಕ್ಕೂ ಹೆಚ್ಚು ಜನರ ಕೈಕಾಲು ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ರೈತರು, ಮಹಿಳೆಯರು ಸಮಾವೇಶಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ.

ಗಾಯಾಳುಗಳನ್ನು ಬೆಳಗಾವಿ ಹಾಗೂ ಬೈಲಹೊಂಗಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿಯಲ್ಲಿ ನಾಳೆ ಸಮಾವೇಶ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ವಿಶ್ವ ರೈತ ಸಮಾವೇಶ ಕಲಬುರಗಿಯಲ್ಲಿ ನಾಳೆ ನಡೆಯುತ್ತಿದ್ದು, ಈಗಾಗಲೇ ರೈತ ದಿನದ ಭಿತ್ತಿ ಪತ್ರ ಬಿಡುಗಡೆ ಮಾಡಲಾಗಿದೆ. ಅನ್ನದಾತನನ್ನು ನೆನೆಯುವ ದಿನ ವಿಶ್ವ ರೈತ ದಿನ. ಹೀಗಾಗಿ ನಾಳೆ ಕಲಬುರಗಿಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನ ಪ್ರಗತಿಪರ ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ಮಾಡಲಾಗುತ್ತಿದೆ.

ಇನ್ನು ರಾಜ್ಯದ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಸೆಳೆಯಲು ಈ ಸಮಾವೇಶಕ್ಕೆ ಕೇಂದ್ರದ ಹಾಗೂ ರಾಜ್ಯದ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಮೂಲಕ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲ್ಲಿದ್ದಾರೆ.

ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ 3000 ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಚಿಂಚೋಳಿಯ ಸಿದ್ದಸಿರಿ ಕಾರ್ಖಾನೆಯವರು 2500 ಪಾವತಿ ಮಾಡುತ್ತಿದ್ದಾರೆ. ಈ ಕಾರ್ಖಾನೆ ಮಾಲೀಕರು ಎಲ್ಲ ಕಾರ್ಖಾನೆಗಳಿಗಿಂತ ಹೆಚ್ಚು ಹಣ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿ ಈಗ ರೈತರನ್ನು ವಂಚಿಸುತ್ತಿದ್ದಾರೆ ಇದು ರೈತ ದ್ರೋಹಿ ಕಾರ್ಯವಾಗಿದೆ ಎಂದು ರೈತರತ್ನ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕತಪಡಿಸಿದ್ದಾರೆ.

ಸಮಾರಂಭದಲ್ಲಿ ಆತ್ತಹಳ್ಳಿ ದೇವರಾಜ್‌, ಬಸವರಾಜ್ ಪಾಟೀಲ್, ಕರಬಸಪ್ಪ ಉಜ, ಜಗದೀಶ್ ಪಾಟೀಲ್, ನಾಗೇಂದ್ರರಾವ್ ದೇಶಮುಖ್‌, ನಾಗರಾಜ್ ಬರಡನಪುರ, ಭಾಗಣ್ಣ ಕುಂಬಾರ್, ಶಾಂತವೀರಪ ದಸ್ತಪೂರ್, ಸಂತೋಷ್ ಪಾಟೀಲ್ ಶಾಬಾದ್, ರೇವಣಸಿದ್ದಯ್ಯ ಮಠ, ಬಸುರಾಜ್ ವಾಳಿ, ಲಕ್ಷ್ಮಿಪುತ್ರ ಮನಮಿ, ದರೆಪ್ಪೆಗೌಡ, ಬಿರಾದಾರ್ ಬಿಜಾಪುರ್, ಶರಣು ಮಗಾ, ಶಾಂತವೀರಪ್ಪ ಇತರರು ಭಾಗವಹಿಸಲಿದ್ದಾರೆ.

Megha
the authorMegha

Leave a Reply

error: Content is protected !!