CRIMENEWSನಮ್ಮಜಿಲ್ಲೆ

ಮಗಳ ಕೊಂದ ಬಳಿಕ ಆಕೆ ಶವದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ನಗರದ ಮೆಗ್ಗಾನ್​ ಆಸ್ಪತ್ರೆಯ ನರ್ಸಿಂಗ್​​ ಕ್ವಾಟ್ರಸ್​ನಲ್ಲಿ ತಾಯಿಯೇ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹತ್ಯೆಯಾದ ಬಾಲಕಿ ಪೂರ್ವಿಕಾ. ಈಕೆ 6ನೇ ತರಗತಿ ಓದುತ್ತಿದ್ದಳು. ಇನ್ನು ಮಗಳ ಕೊಂದು ನೇಣಿಗೆ ಶರಣಾದ ಮಹಿಳೆ ಶೃತಿ (38) ಎಂದು ಗುರುತಿಸಲಾಗಿದೆ.

ಈಕೆ ಆತ್ಮಹತ್ಯೆಗೂ ಮುನ್ನ ಮಗಳಿಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದು, ಬಳಿಕ ಆಕೆಯ ಮೃತದೇಹದ ಮೇಲೆಯೇ ನಿಂತುಕೊಂಡ ಪ್ಯಾನ್​ಗೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಅದಕ್ಕಾಗಿಯೇ ಈಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಪತಿ ಹೇಳಿದ್ದಾರೆ.

ಈ ಘಟನೆ ನಡೆದಾಗ ಮಹಿಳೆಯ ಪತಿ ರಾಮಣ್ಣ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಕೆಲಸ ಮುಗಿಸಿ ಬೆಳಗ್ಗೆ ಕ್ವಾಟ್ರಸ್​​ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಈತ್ತ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Advertisement
Megha
the authorMegha

Leave a Reply

error: Content is protected !!