ಬೆಂಗಳೂರು: ಚಾಲಕ ಬಸ್ಸಿನಲ್ಲಿ ನಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ತಾಯಿಯೊಬ್ಬಳು ಚಾಲಕನ ಬಟ್ಟೆ ಬಿಚ್ಚಿಸಿ ಥಳಿಸಿರುವ ಘಟನೆ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಬಸ್ಸಿನಲ್ಲಿ 15 ವರ್ಷದ ಬಾಲಕಿ ಇದ್ದು, ಆಕೆ ರಾತ್ರಿ ಮೊಬೈಲಿನ ಚಾರ್ಜ್ ಖಾಲಿಯಾಗಿದ್ದರಿಂದ ಚಾಲಕನ ಬಳಿ ಚಾರ್ಜ್ ಹಾಕುವಂತೆ ಮನವಿ ಮಾಡಿದ್ದಾಳೆ.
ಆ ವೇಳೆ ಚಾರ್ಜ್ಗೆ ಹಾಕಿದ್ದು, ಸ್ವಲ್ಪ ಸಮಯದ ಬಳಿಕ ಬಾಲಕಿ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಆಗ ಚಾಲಕ ಆರೀಫ್ ಮುತ್ತು ಕೊಟ್ಟರೆ ಮಾತ್ರ ನೀಡುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ಮಲಗಿದ್ದಾಗ ಸೀಟ್ ಬಳಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದರೂ ರಾತ್ರಿ ಪದೇಪದೆ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ವೇಳೆ ಈತನ ಕಿರುಕುಳ ತಾಳಲಾರದೇ ಬಾಲಕಿ ಕರೆ ತನ್ನ ಪಾಲಕರಿಗೆ ಕರೆ ಮಾಡಿದ್ದು, ತಾಯಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದರಿಂದ ಗಾಬರಿಗೊಂಡ ತಾಯಿ ತನ್ನ ಸಹೋದರನೊಂದಿಗೆ ಇಂದು ಬೆಳಗ್ಗೆ ಬಸವೇಶ್ವರನಗರದ ಸರ್ಕಲ್ ಬಳಿಕ ಬಂದು ಕಾದುಕುಳಿತ್ತಿದ್ದರು.
ಇನ್ನು ಬಸ್ ಬಸವೇಶ್ವರನಗರಕ್ಕೆ ಬರುತ್ತಿದ್ದಂತೆ ಚಾಲಕ ಆರೀಫ್ನನ್ನು ಕೆಳಗೆ ಇಳಿಸಿ ತಾಯಿ ಮತ್ತು ಆಕೆಯ ಸಹೋದರ ಪ್ರಶ್ನಿಸಿದ್ದಾರೆ. ಈ ವೇಳೆ ಆರೀಫ್ ಕೈ ಮುಗಿದು ತಪ್ಪಾಗಿದೆ ಎಂದು ಹೇಳಿದ್ದಾನೆ. ನಂತರ ಆತನ ಬಟ್ಟೆಯನ್ನು ಬಿಚ್ಚಿಸಿ ಚೆನ್ನಾಗಿ ಥಳಿಸಿದ್ದಾರೆ.
ಆತ ಧರಿಸಿದ್ದ ಎಲ್ಲ ಬಟ್ಟೆಯನ್ನು ತೆಗೆದು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಾಯಿಯನ್ನು ತಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಬಾಲಕಿಯ ತಾಯಿ, ಹೈದರಾಬಾದ್ನಲ್ಲಿರುವ ನನ್ನ ಮಗಳ ಮನೆಗೆ ಇವಳು ಹೋಗಿದ್ದಳು. ರಾತ್ರಿ ಮಗಳು ಫೋನ್ ಮಾಡಿ ತಂಗಿಯನ್ನು ಬಸ್ಸಿನಲ್ಲಿ ಹತ್ತಿಸಿದ್ದೇನೆ ಎಂದು ಹೇಳಿದ್ದಳು. ಆದರೆ ಈತ ಮಗಳಿಗೆ ಬಸ್ಸಿನಲ್ಲಿ ಕೊಡಬಾರದ ಕಿರುಕುಳ ನೀಡಿದ್ದಾನೆ. ಅದನ್ನು ಇಲ್ಲಿ ಹೇಳಲು ಅಸಹ್ಯವಾಗುತ್ತಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ. ನಾನು ಮಾತ್ರ ಈತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
Related


You Might Also Like
ಹುತಾತ್ಮರಾದವರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರಿಗೆ 50 ಲಕ್ಷ ರೂ....
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 47,848 ಮನೆಗಳು ಮಂಜೂರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಹಿಂದಿನ ಬಾರಿ ನಮ್ಮ ಸರ್ಕಾರವಿದ್ದಾಗ 43,874 ಮನೆಗಳು ಸೇರಿದಂತೆ ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 13,303...
ಅರ್ಹರಿಗೆ ತಕ್ಷಣವೇ ಬಿಪಿಎಲ್ ಕಾರ್ಡ್ ನೀಡಬೇಕು: ಅಧಿಕಾರಿಗಳಿಗೆ ಸಿಎಂ ತಾಕೀತು
ಬೆಂಗಳೂರು: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ, ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅರ್ಹರು ಯಾರಾದರೂ ಬಿಟ್ಟು ಹೋಗಿದ್ದರೆ...
ಸಾರಿಗೆ ನೌಕರರ ವೇತನ ಹೆಚ್ಚಳ-38 ತಿಂಗಳ ಹಿಂಬಾಕಿ ಪ್ರಕರಣ ಸೆ.17ಕ್ಕೆ ಮುಂದೂಡಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ಭ್ರಷ್ಟ ಕಾರ್ಮಿಕ ಅಧಿಕಾರಿಗೆ ಕೆಆರ್ಎಸ್ ಪಕ್ಷದಿಂದ ನಾಗರೀಕ ಸನ್ಮಾನ
ಬೆಂಗಳೂರು: ಕಾರ್ಮಿಕ ಪರವಾನಿಗೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಗೆ ಸಿಕ್ಕಿದ ಕಾರ್ಮಿಕ ಅಧಿಕಾರಿಗೆ ಕೆಆರ್ಎಸ್ ಪಕ್ಷದ ವತಿಯಿಂದ ಸನ್ಮಾನ ಮಾಡಲು ಕಚೇರಿಗೆ ಹೋದಾಗ ಅಧಿಕಾರಿ...
KSRTC ಚಿಲ್ಲರೇ ಗಲಾಟೆ: ಸಂಸ್ಥೆ ನೌಕರನ ವಿರುದ್ಧ ಮೃಗದಂತೆ ವರ್ತಿಸಿ ರಾಜೀನಾಮೆ ಕೇಳಿದ ವಿಭಾಗೀಯ ನಿಯಂತ್ರಣಾಧಿಕಾರಿ
ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಾಗೂ ಸಂಘಟನೆಗಳ ಬಳಿ ನೋವು ತೋಡಿಕೊಂಡ ನೊಂದ ನೌಕರ ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್...
KSRTC: ಚಿಲ್ಲರೆಗಾಗಿ ಗಲಾಟೆ ಘಟನೆ- ಕಂಡಕ್ಟರ್ಗೆ ಬೈದು ರಾಜೀನಾಮೆ ಕೇಳಿದ ಡಿಸಿ ಅಶೋಕ್ ವಿರುದ್ಧ ದೂರು ದಾಖಲು
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ...
ನೇಪಾಳ ಧಗಧಗ: ಅಧ್ಯಕ್ಷ, ಪ್ರಧಾನಿ, ಸಂಸತ್ಗೆ ದಾಳಿಯಿಟ್ಟು ಹಿಂಸಾಚಾರ
ಕಠ್ಮಂಡು: ಸಾಮಾಜಿಕ ಜಾಲತಾಣಗಳ ನಿರ್ಬಂಧ ಮಾಡಿದ್ದಕ್ಕೆ ಯುವಕರು ದಂಗೆ ಎದ್ದಿರುವ ಕಾರಣ ಭಾರತದ ನೆರೆಯ ರಾಷ್ಟ್ರ ನೇಪಾಳ ಹೊತ್ತಿ ಉರಿಯುತ್ತಿದೆ. ಸತತ 3ನೇ ದಿನವೂ ನೇಪಾಳ ಕುದಿಯುತ್ತಿದೆ....
ಸಾರಿಗೆ ಬಸ್ಗಳು ಅಪಘಾತವಾದರೆ ಚಾಲಕರಿಗೆ ಡಿಎಂಗಳು ಜಾಮೀನು ಕೊಡಬೇಕು: ಸಿಟಿಎಂ ಆದೇಶ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಅಪಘಾತವಾದ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡುವ ವ್ಯವಸ್ಥೆಯನ್ನು ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ಮುಖ್ಯ ಸಂಚಾರ...