CrimeNEWSಬೆಂಗಳೂರು

ಅತಿಯಾಗಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದರಿಂದ ಒಂಟಿ ಮಹಿಳೆಯ ಕೊಲೆ: ಹತ್ಯೆ ರಹಸ್ಯ ಬೇಧಿಸಿದ ಪೊಲೀಸರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅತಿಯಾಗಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದರಿಂದ ಕೋಪಗೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾಗಿ ಹತ್ಯೆ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್​ನಲ್ಲಿ ಏ.19ರಂದು ಮನೆಯಲ್ಲಿ ನಗ್ನವಾಗಿ ಮಹಿಳೆಯ ಮೃತದೇಹ ಪತ್ತೆಯಾದ ಘಟನೆಯ ಪ್ರಕರಣವನ್ನು ಬೇಧಿಸಿರುವ ಕೊಡಿಗೇಹಳ್ಳಿ ಪೊಲೀಸರು ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಒಂಟಿ ಮಹಿಳೆ ಕೊಲೆ ಪ್ರಕರಣ ಕೈಗೆತ್ತಿಕೊಂಡ ಕೊಡಿಗೇಹಳ್ಳಿ ಪೊಲೀಸರು ಆರೋಪಿ ನವೀನ್ ಎಂಬಾತನ್ನು ಬಂಧಿಸುವ ಮೂಲಕ ಪ್ರಕರಣ ಬೇಧಿಸಿದ್ದಾರೆ.

ಘಟನೆ ಏನು? ಇದೇ ಏಪ್ರಿಲ್ 19ರಂದು ಮನೆಯಲ್ಲಿ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನವಾಗಿ ಪತ್ತೆಯಾಗಿತ್ತು. ಮೃತ ಶೋಭಾ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಆ ಇಬ್ಬರು ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದಾರೆ.

ಆ ಮಕ್ಕಳಲ್ಲಿ ಒಬ್ಬರು ಏಪ್ರಿಲ್ 19ರಂದು ಎಷ್ಟು ಬಾರಿ ಫೋನ್ ಮಾಡಿದರೂ ಶೋಭಾ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಮಗಳು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಡಿಗೇಹಳ್ಳಿ ಪೊಲೀಸರು ನವೀನ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ನವೀನ್ ಹೇರೋಹಳ್ಳಿ ನಿವಾಸಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೋಭಾಗೆ ಪರಿಚಯವಾಗಿದ್ದ. ಪರಿಚಯದಿಂದ ಸ್ನೇಹ ಬೆಳೆದು ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

ಶೋಭಾ ಕೊಲೆಯಾದ ದಿನ ಆರೋಪಿ ನವೀನ್‌ನನ್ನು ಕರೆಸಿಕೊಂಡಿದ್ದು ಮನೆಗೆ ಬಂದ ನವೀನ್‌ನನ್ನು ಅತಿಯಾಗಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದಾಳೆ. ಈ ವೇಳೆ ಅತಿಯಾಗಿ ಸೆಕ್ಸ್‌ಗೆ ಮಹಿಳೆ ಒತ್ತಾಯಿಸುತ್ತಿದ್ದಂತೆ ಬೇಸರಗೊಂಡ ಆರೋಪಿ ನವೀನ್‌ ಮಹಿಳೆಯ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.

Leave a Reply

error: Content is protected !!
LATEST
ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಬೆನ್ನೆಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ ಪ್ರಜ್ವಲ್ ರೇವಣ್ಣ ಸರಣಿ ಅತ್ಯಾಚಾರ ಪ್ರಕರಣದ ನೊಂದ ಮಹಿಳೆಯರ ಬೆಂಬಲಕ್ಕೆ ನಿಂತ ಆಮ್ ಆದ್ಮಿ ಪಾರ್ಟಿ ಬಿಜೆಪಿ ಗೆದ್ದರೆ ಸರ್ವಾಧಿಕಾರ ಆಡಳಿತ ಬರುವುದರಲ್ಲಿ ಯಾವುದೇ ಸಂಶಯವಿಲ್ಲ: ಮುಖ್ಯಮಂತ್ರಿ ಚಂದ್ರು ಬಿಸಿಲ ಝಳಕ್ಕೆ ಬಿಎಂಟಿಸಿ ನಿರ್ವಾಹಕ ಸೇರಿ ಇಬ್ಬರು ಮೃತ ಬೇಸಿಗೆಯ ಬಿರು ಬಿಸಿಲು- ತಂಪೆರೆದ ಭರಣಿ ಮಳೆ: ರೈತರ ಮುಖದಲ್ಲಿ ಮಂದಹಾಸ ಬೇಟಿ ಬಚಾವೋ ಬೇಟಿ ಪಢಾವೋ ಎಂದರೆ ಅತ್ಯಾಚಾರಿಗಳಿಗೆ ಟಿಕೆಟ್‌ ನೀಡುವುದೇ?:  ಮುಖ್ಯಮಂತ್ರಿ ಚಂದ್ರು ಪ್ರಶ್ನೆ ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ನೀಡಿ: ಮೋಹನ್ ದಾಸರಿ ಆಗ್ರಹ ಕೊರೊನಾದಿಂದ ಜೀವಕಳೆದುಕೊಂಡ KSRTCಯ 114ಕ್ಕೂ ಹೆಚ್ಚು ನೌಕರರ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ 30 ಲಕ್ಷ ಪರಿಹಾರ!!? ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ - ವಕೀಲ ಶಿವರಾಜು ಮೇ 15 ರಿಂದ ಉಚಿತ ಎಂಬ್ರಾಯ್ಡರಿ & ಆರಿ ವರ್ಕ್ ತರಬೇತಿ ಆರಂಭ