ಮೈಸೂರು: 10 ವರ್ಷದ ಬಾಲಕಿ ರೇಪ್ ಮಾಡಿ 19 ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ ಕಾಮುಕ- ವೈದ್ಯಕೀಯ ಪರೀಕ್ಷೆಯಲ್ಲಿ ದೃಢ



ಮೈಸೂರು: 10 ವರ್ಷದ ಬಾಲಕಿಯ ಮೇಲೆ ನಗರದಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿ ಅಮಾನವೀಯವಾಗಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ. ಬಾಲಕಿಯನ್ನು ರೇಪ್ ಮಾಡಿದ ಬಳಿಕ ಬಹಳ ಭೀಕರವಾಗಿ ಆಕೆ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.
ಅತಿಯಾದ ಮದ್ಯದ ನಶೆಯಲ್ಲಿದ್ದ ಆರೋಪಿ ಕಾರ್ತಿಕ್ ಬಾಲಕಿ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿ, ಗಾಢ ನಿದ್ರೆಯಲ್ಲಿದ್ದಾಗ ಆಕೆಯನ್ನು ಹೊತ್ತುಯ್ದು ರೇಪ್ ಮಾಡಿದ್ದ. ಅತ್ಯಾಚಾರ ಮಾಡಿದ ಬಳಿಕ ಭೀಕರವಾಗಿ ಕೊಲೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ರೇಪ್ ಮಾಡಿದ ಬಳಿಕ ಬಾಲಕಿಯ ಕತ್ತು, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಬಾಲಕಿಯ ಮರ್ಮಾಂಗಕ್ಕೂ ಚಾಕುವಿಂದ ಏಳಂಟು ಬಾರಿ ಚುಚ್ಚಿದ್ದು, ಹೀಗೆ ಒಟ್ಟಾರೆ 19 ಬಾರಿ ಚುಚ್ಚಿ ಭಾರಿ ಅಮಾನುಷವಾಗಿ ಕೊಲೆ ಮಾಡಿ ಅಲ್ಲೆ ಸಮೀಪದ ಮೋರಿಗೆ ಮೃತದೇಹ ಎಸೆದು ಕಿರಾತಕ ಪರಾರಿಯಾಗಿದ್ದ.
ಕಲಬುರಗಿ ಜಿಲ್ಲೆಯ ಮೂಲದ ಬಾಲಕಿ ಹಾಗೂ ಆಕೆಯ ಪೋಷಕರು ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದರು. ಕಳೆದ ಬುಧವಾರ ರಾತ್ರಿ 2 ಗಂಟೆ ಸಮಯದಲ್ಲಿ ಮಲಗಿದ್ದಾಗ ಬಾಲಕಿಯನ್ನು ಆರೋಪಿ ಹೊತ್ತೊಯ್ದು ಕೊಲೆ ಮಾಡಿದ್ದ. ಮೈಸೂರಿನ ಅರಮನೆ ಮುಂಭಾಗದ ಇಟ್ಟಿಗೆಗೂಡಿನ ಖಾಲಿ ಜಾಗದಲ್ಲಿ ಈ ಕೊಲೆ ಆಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಕೊಳ್ಳೇಗಾಲದಲ್ಲಿ ಬಂಧಿಸಿದ್ದರು. ಆತನನ್ನು ಮೈಸೂರಿಗೆ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
Related
