NEWSನಮ್ಮರಾಜ್ಯಸಂಸ್ಕೃತಿ

ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಹಿಂದೂ ಸಂಪ್ರದಾಯದಂತೆ ಬಾನು ಮುಷ್ತಾಕ್‌ಗೆ ಬಾಗಿನ ನೀಡಿದ ನಟಿ ಶಶಿಕಲಾ

ವಿಜಯಪಥ ಸಮಗ್ರ ಸುದ್ದಿ

ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ರ ಉದ್ಘಾಟನೆಗೆ ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ನಟಿ ಶಶಿಕಲಾ ಅವರಿಗೆ ಹರಿಶಿಣ, ಕುಂಕುಮ, ಸೀರೆ, ಬಳೆ, ಹೂವು ಒಳಗೊಂಡ ಬಾಗಿನ ನೀಡಿ ಗೌರವಿಸಿದರು. ಬಾಗಿನ ಸ್ವೀಕರಿಸಿ ಬಾನು ಮುಷ್ತಾಕ್ ಅವರು, ಶಶಿಕಲಾ ಅವರ ಹಣೆಗೆ ಕುಂಕುಮ ಇಟ್ಟು ಅವರ ಮನೆಯಿಂದಲೂ ಒಂದು ಬಾಗಿನವನ್ನು ನೀಡಿ ಹಾರೈಸಿದರು.

ನಂತರ ಮಾತನಾಡಿದ ಬಾನು ಮುಷ್ತಾಕ್ ಅವರು, ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬು ಸವಾರಿ ನೋಡಲು ಹೊಗುತ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಸಂದರ್ಭದ ಆಹ್ವಾನ ಬಂದಿದೆ. ಹಾಗಾಗಿ, ನನಗೆ ಸಂತೋಷ ವಾಗಿದೆ ಎಂದರು. ಇದನ್ನ ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತಿರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡ ಹಬ್ಬ ಅಂತಾರೆ ಅದನ್ನು ಗೌರವಿಸುತ್ತೇನೆ ಎಂದರು.

ಈ ನಡುವೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಹಿಂದೂ ಧರ್ಮವನ್ನು ಗೌರವಿಸದವರನ್ನು ಹೇಗೆ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ ಅಂತೆಲ್ಲಾ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ.

ಬಾನು ಮುಷ್ತಾಕ್ ಆಯ್ಕೆಗೆ ತೀವ್ರ ವಿರೋಧ: ಇನ್ನು ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾನು ಮುಷ್ತಾಕ್ ಅವರು ಈ ಹಿಂದೆ ಭುವನೇಶ್ವರಿ ಬಗ್ಗೆ ಮಾತನಾಡಿದ್ದ ವಿಡಿಯೋ ಹಂಚಿಕೊಂಡು ಟೀಕಿಸಿದ್ದಾರೆ.

ಕನ್ನಡವನ್ನ ಭುವನೇಶ್ವರಿಯಾಗಿ ಮಾಡಿಬಿಟ್ರಿ. ಬಾವುಟವನ್ನ ಹರಿಶಿನ ಕುಂಕುಮವಾಗಿ ಮಾಡಿಬಿಟ್ರಿ. ನಾನು ಎಲ್ಲಿ ನಿಲ್ಲಬೇಕು ಎಂದು ಬಾನು ಮುಷ್ತಾಕ್ ಮಾತನಾಡಿದ್ದರು. ಇದೇ ಹೇಳಿಕೆ ವಿಡಿಯೋವನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದು, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಬಾನು ಮುಷ್ತಾಕ್, ತಾಯಿ ಚಾಮುಂಡೇಶ್ವರಿ ಒಪ್ಪಿ ಪುಷ್ಪಾರ್ಚನೆ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗರಿಗೆ ಸಲಹೆ ನೀಡಿದ ರೇವಣ್ಣ:  ಅತ್ತ ಬಿಜೆಪಿ ವಿರೋಧ ಮಾಡುತ್ತಿದ್ದರೆ ಇತ್ತ ಮಿತ್ರ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಸರ್ಕಾರದ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಹಾಸನ ಭಾನು ಮುಷ್ತಾಕ್ ನಮ್ಮ ಜಿಲ್ಲೆಯ ಮಹಿಳೆ. ಅವರೊಬ್ಬ ಹೋರಾಟಗಾರ್ತಿ ಹಾಗಾಗಿ ಅವರು ದಸರಾ ಉದ್ಘಾಟನೆ ಮಾಡಿದ್ರೆ ಸಂತೋಷ ಎಂದರು.

ಇನ್ನು ಪಕ್ಷ ಯಾವುದೇ ಇರಲಿ ಧರ್ಮ ಅಂತಾ ಬೇರ್ಪಡಿಸುವುದು ಬೇಡ. ನಾವೆಲ್ಲಾ ಒಂದು. ಸಮಾಜದಲ್ಲಿ ಹಿಂದು ಮುಸ್ಲಿಮ್ ಎಲ್ಲ ಒಂದೆ. ಎಲ್ಲರೂ ಭಾರತೀಯರು. ಎಲ್ಲರೂ ಒಂದಾಗಿ ದೇಶ ಉಳಿಸಬೇಕು. ರಾಜಕೀಯ ಬಿಟ್ಟಾಕಿ. ಅವರಿಗೆ ವಿರೋಧ ಮಾಡಬಾರದು ಎಂದು ಸಲಹೆ ನೀಡಿದರು.

Deva
the authorDeva

Leave a Reply

error: Content is protected !!