CRIMENEWSಮೈಸೂರು

ಮೈಸೂರು: KSRTC ಬಸ್‌ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಹರಿದು ಬೈಕ್‌ ಸವಾರ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಶ್ರೀರಾಂಪುರದಲ್ಲಿ ನಡೆದಿದೆ.

ಶ್ರೀರಾಂಪುರದ ನಿವಾಸಿ ಪುರುಷೋತ್ತಮಯ್ಯ(71) ಮೃತಪಟ್ಟವರು. ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಲಿನ ಬೂತ್‌ಗೆ ಬಂದು ಹಾಲು ಖರೀದಿಸಿ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಬಂದಿದ್ದು, ಬ್ಯಾಲೆನ್ಸ್‌ ತಪ್ಪಿದ ಸ್ಕೂಟರ್‌ ಸವಾರ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಾರೆ ಆಗ ನಗರ ಸಂಚಾರ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ಪಕ್ಕದಲ್ಲಿ ಬಸ್‌ ಬಂದಿದ್ದರಿಂದ ಬಸ್‌ಗೆ ಸ್ಕೂಟರ್‌ ಟಚ್‌ಆಗಿದ್ದರಿಂದ ಪುರುಷೋತ್ತಮಯ್ಯ ಕೆಳಗುರುಳಿದ್ದಾರೆ. ಸ್ಕೂಟರ್‌ ಎಡಗಡೆಗೆ ಬಿದ್ದರೆ ಪುರುಷೋತ್ತಮಯ್ಯ ಬಲ ಭಾಗಕ್ಕೆ ಬಿದ್ದಿದ್ದರಿಂದ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿದ್ದು ಅವರ ತಲೆಯ ಮೇಲೆ ಹರಿದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೆ.ಆರ್ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಇನ್ನು ರಸ್ತೆಯ ಪಕ್ಕದಲ್ಲೇ ತರಕಾರಿ ಮಾರಾಟಗಾರರು ಇರುವುದರಿಂದ ಓಡಾಡಲು ತೊಡಕಾಗಿದೆ. ಮೊದಲು ಅಲ್ಲಿಂದ ತರಕಾರಿ ಮಾರಾಟಗಾರರನ್ನು ತೆರವುಗೊಳಿಸಿ ಬೇರೆ ಕಡೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!