NEWSಮೈಸೂರುಶಿಕ್ಷಣ

ಕಾವೇರಿ ಎಜುಕೇಶನ್‌ ಸೊಸೈಟಿಯಡಿ ನೂತನ ಸಿಬಿಎಸ್ಸಿ, ಆಂಗ್ಲ ಮಾಧ್ಯಮ ಶಾಲೆ, ಆಡಳಿತ ಮಂಡಳಿಗೆ ನೇಮಕಾತಿ: ವಕೀಲ ಶಿವರಾಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾವೇರಿ ಎಜುಕೇಶನ್‌ ಸೊಸೈಟಿಯಡಿಯಲ್ಲಿ ನೂತನವಾಗಿ ಮನುಗನಹಳ್ಳಿ, ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಪ್ರಾರಂಭ ಮಾಡುತ್ತಿರುವ ಸಿಬಿಎಸ್ಸಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ಭಾರತದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ವಕೀಲರಾದ ಎಚ್.ಬಿ. ಶಿವರಾಜು ತಿಳಿಸಿದ್ದಾರೆ.

ಆಡಳಿತ ಮಂಡಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿರುವ ಸಂಭಾವನೆಯ ಪಟ್ಟಿಯಲ್ಲಿಯ ವಿವರ ಹೀಗಿದೆ.
ಅಧ್ಯಕ್ಷರು: ಸತೀಶ್‌ ಕುಮಾರ್, ಕೆಎಸ್‌ಆರ್ಟಿಸಿ, ಮೈಸೂರು
ಕಾರ್ಯದರ್ಶಿಗಳು: ಶಿವರಾಜು ಎಚ್.ಬಿ. ವಕೀಲರು
ಖಜಾಂಚಿ: ಗಂಗಾಧರ ನಾಯಕ, ಬಿಎಂಟಿಸಿ, ಬೆಂಗಳೂರು
ಜಂಟಿ ಕಾರ್ಯದರ್ಶಿಗಳು: ಮಹಾದೇವಸ್ವಾಮಿ, ಬಿಎಂಟಿಸಿ

ನಿರ್ದೇಶಕರುಗಳು: ಕಾರ್ಯಪ್ಪ, ನಿವೃತ್ತ ಎಸಿಪಿ, ಪೊಲೀಸ್‌ ಇಲಾಖೆ. ಮುತ್ತಯ್ಯ, ಬಿಎಂಟಿಸಿ. ಸ್ವರ್ಣಲತಾ, ವಕೀಲರು. ಪ್ರೇಮ್ ಕುಮಾರ್, ಕೆಎಸ್‌ಆರ್ಟಿಸಿ, ಮಡಿಕೇರಿ.

ಶಾಲೆಯ ವಿವರಗಳು: ಸ್ಥಳ: ಮನುಗನಹಳ್ಳಿ, ಮೈಸೂರು-ಮಡಿಕೇರಿ ಹೆದ್ದಾರಿ
ಪ್ರಾರಂಭ: 2026-27
ಮಾಧ್ಯಮ: ಸಿಬಿಎಸ್ಸಿ ಹಾಗೂ ಆಂಗ್ಲ ಮಾಧ್ಯಮ

ಇನ್ನು ಇದು ಸಂಭಾವನೆಯ ಪಟ್ಟಿಯಾಗಿರುತ್ತದೆ ಮತ್ತು ಬದಲಾವಣೆಯು ಸಹ ಆಗುವ ಸಂಭವವಿರುತ್ತದೆ ಎಂದು ವಕೀಲ ಶಿವರಾಜು ಎಚ್.ಬಿ ತಿಳಿಸಿದ್ದಾರೆ.

ಈ ಶಾಲೆಯನ್ನು ತೆರೆಯಲು ಎಲ್ಲ ರೀತಿಯಲ್ಲೂ ಸಹಕಾರ ಹಾಗೂ ಸಹಾಯ ಮಾಡುತ್ತಿರುವ ನನ್ನ ಆತ್ಮೀಯ ವಕೀಲ ವರ್ಗದವರು ಹಾಗೂ ನನ್ನ ಕಕ್ಷಿದಾರರು ಆದಂತಹ ರಾಮಚಂದ್ರಗೌಡ ಇವರು ಗುತ್ತಿಗೆದಾರರು PWD ಮೈಸೂರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿ. ಇವರ ಸಹಕಾರ ಹಾಗೂ ಸಲಹೆ ನನಗೆ ಸ್ಫೂರ್ತಿಯಾಗಿರುತ್ತದೆ.

ಪ್ರಮುಖವಾಗಿ ತಿಳಿಸಲೇಬೇಕಾದ ವಿಷಯವೆಂದರೆ ಈ ಶಾಲೆಯಲ್ಲಿ ಮೊದಲ ಆದ್ಯತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಮೊದಲ ಆದ್ಯತೆ ಇದ್ದು, ಅದರಲ್ಲಿ 840 ಜನ ಮುಖ್ಯವಾಗಿದ್ದು ಈ ನೌಕರರ ಮಕ್ಕಳಿಗೆ ವರ್ಷಕ್ಕೆ ಶೇ.50ರಷ್ಟು ವಿಭಾಗದಲ್ಲಿ ಇವರಿಗೆ ಆದ್ಯತೆ ನೀಡಲಾಗುತ್ತದೆ.

ಇನ್ನುಳಿದ ಶೇ.50ರಷ್ಟು ಮಕ್ಕಳು ಹೊರಗಿನ ಎಲ್ಲ ಸ್ತರದ ಮಕ್ಕಳನ್ನು ಸೇರಿಸಿಕೊಳ್ಳಲಾಗುವುದು. ಇನ್ನು ಬರುವ ಜನವರಿ 2026ರ ಹೊಸ ವರ್ಷದಲ್ಲಿ ಈ ಕಾವೇರಿ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯನ್ನು ರಚನೆ ಮಾಡಲಾಗುತ್ತಿದ್ದು, ಆಡಳಿತ ಮಂಡಳಿಯಲ್ಲಿ ಕೆಲವೊಂದು ಬದಲಾವಣೆಗಳು ಆಗುವ ಸಾಧ್ಯತೆಯು ಇದೆ. ಆದ್ದರಿಂದ ಅಂತಿಮವಾದ ಆಡಳಿತ ಮಂಡಳಿಯ ವಿವರವನ್ನೂ ಸಹ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ವಕೀಲ ಶಿವರಾಜು ತಿಳಿಸಿದ್ದಾರೆ.

ಎಂಡಿಗೆ ಪತ್ರ : ಸಾರಿಗೆ ಸಂಸ್ಥೆಯ ನೌಕರರನ್ನು ಶಾಲಾ ಆಡಳಿತ ಮಂಡಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಅವರಿಗೆ ಸಂಸ್ಥೆಯಿಂದ ಯಾವುದೇ ಕಾನೂನು ತೊಡಕಾಗಬಾರದು ಎಂಬ ದೃಷ್ಟಿಯಿಂದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸಂಬಂಧ ಅನುಮತಿ ಕೋರಿ ಪತ್ರವನ್ನು ಬರೆಯಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಸಾರಿಗೆ ಸಂಸ್ಥೆಯ ನೌಕರರನ್ನು ಶಾಲಾ ಆಡಳಿತ ಮಂಡಳಿಗೆ ನೇಮಕಮಾಡಿಕೊಳ್ಳುತ್ತಿದ್ದರೂ ಅವರಿಗೆ ಯಾವುದೇ ಸಂಭಾವನೆ ಇರುವುದಿಲ್ಲ. ಬದಲಿಗೆ ಅವರ ಮಕ್ಕಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವೀರೇಂದ್ರ ಸಿಂಗ್‌  ಪ್ರಕರಣದಲ್ಲಿ ನೌಕರರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳಲು ಅವಕಾಶವಿದ್ದು ಅದೇ ರೀತಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Megha
the authorMegha

Leave a Reply

error: Content is protected !!