NEWSನಮ್ಮರಾಜ್ಯ

ಯಾವುದೇ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡೊಲ್ಲ: ಸಚಿವ ಮುನಿಯಪ್ಪ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾವುದೇ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡುವುದಿಲ್ಲ. ಆದರೆ ಅಂತಹ ಕಾರ್ಡ್​ಗಳನ್ನು ಎಪಿಎಲ್ ಆಗಿ ಕನ್ವರ್ಟ್ ಮಾಡ್ತೀವಿ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅನರ್ಹ ರೇಷನ್ ಕಾರ್ಡ್‌ಗಳ ರದ್ದು ವಿಚಾರವಾಗಿ ಮಾತನಾಡಿರುವ ಮುನಿಯಪ್ಪ.. ಬಿಪಿಎಲ್‌ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ. ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನೂ ರದ್ದು ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜತೆಗೆ ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಇನ್ನು, ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್​​ಗಳ ಲಿಸ್ಟ್ ನ್ಯಾಯಬೆಲೆ ಅಂಗಡಿಗಳ ಮುಂದೆ ಇದ್ದು,  ಲಿಸ್ಟ್​ನಲ್ಲಿ ಇರುವವರಿಗೆ ಮೂರು ದಿನಗಳವರೆಗೆ ಪಡಿತರ ವಿತರಣೆಯನ್ನು ತಡೆಹಿಡಿಯಲು ಮೌಖಿಕ ಆದೇಶ ಹೊರಡಿಸಲಾಗಿದೆ.

ವಾರ್ಷಿಕ ಆದಾಯ 1,20,000 ರೂ.ಗಳು ಇರುವವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುತ್ತಿರುವ ಹಿನ್ನೆಲೆ, ಕೆಲವೆಡೆ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಕೆಲವು ಕಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

Megha
the authorMegha

Leave a Reply

error: Content is protected !!