NEWSನಮ್ಮಜಿಲ್ಲೆನಮ್ಮರಾಜ್ಯ

ಜೂ.25ರಿಂದ KSRTC ಬಸ್‌ಗಳಲ್ಲಿ ಟಿಕೆಟ್‌ಗಾಗಿ ಹಣ ಕೊಡಬೇಕಿಲ್ಲ- ಮೊಬೈಲ್‌ ಇದ್ದರೆ ಸಾಕು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜೂನ್ 25 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದಾಗಿದ್ದು, ನಗದು ತೆಗೆದುಕೊಂಡು ಹೋಗುವ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ.

ಹೌದು! ಕೆಎಸ್ಆರ್‌ಟಿಸಿ ಜೂನ್ 25 ರಿಂದ ನಾಲ್ಕು ಘಟಕಕಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಸದ್ಯಕ್ಕೆ ಸಂಸ್ಥೆಯ ಎಲ್ಲ ನಿರ್ವಾಹಕರಿಗೂ ಈ ಬಗ್ಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಇದನ್ನು ಎಲ್ಲ ಬಸ್‌ಗಳಿಗೆ ವಿಸ್ತರಿಸಲಾಗುವುದು ಎಂದು ಎಂಡಿ KSRTC ಅನ್ಬು ಕುಮಾರ್ ತಿಳಿಸಿದ್ದಾರೆ.

ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಗೆ 10,245 ಇಟಿಎಂಗಳನ್ನು ತೆಗೆದುಕೊಂಡಿದೆ. ಈ ಮಾದರಿಗಳ ಮೇಲೆ ಕೆಲಸ ಮಾಡಿದ ನಂತರ, ನಾವು ಈ ತಿಂಗಳ ಅಂತ್ಯದಲ್ಲಿ ಇಟಿಎಂಗಳನ್ನು ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಇನ್ನು ಮುಂದೆ ಚಿಲ್ಲರೆ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ಚಿಲ್ಲರೆಯನ್ನು ಕೊಟ್ಟಿಲ್ಲ ಎಂದು ಕಂಡಕ್ಟರ್‌ಗಳ ವಿರುದ್ಧವೂ ಯಾವುದೇ ದೂರುಗಳಿರುವುದಿಲ್ಲ. ಇಟಿಎಂಗಳಲ್ಲೇ ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು ಎಂದು ತಿಳಿಸಿದ್ದಾರೆ.

ಇನ್ನು Ebix Cash Ltd ಐದು ವರ್ಷಗಳ ಕಾಲ ಇಟಿಎಂಗಳನ್ನು ಪೂರೈಸಲು ಮತ್ತು KSRTCಯನ್ನು ಈ ಮೂಲಕ ನಗದು ರಹಿತ ಸೇವಾ ನಿರ್ವಹಣಾ ವ್ಯವಸ್ಥೆಗೆ ಪರಿವರ್ತಿಸಲು ಸಹಕಾರಿಯಾಗಲಿದ್ದು ಈ ಬಗ್ಗೆ ಒಪ್ಪಂದವನ್ನು ಈಗಾಗಲೇ ಮಾಡಿಕೊಂಡಿದೆ.

ಕಂಪನಿಯು ಇಟಿಎಂಗಳಿಗೆ ಬ್ಯಾಕೆಂಡ್ ಮತ್ತು ಇಂಟರ್ಫೇಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದು, ಈಗಾಗಲೇ ಮಹಾರಾಷ್ಟ್ರದ ಸಾರಿಗೆ ಬಸ್‌ಗಳಲ್ಲಿ ಈ ಇಟಿಎಂಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದ್ದಾರೆ.

ಕಂಡಕ್ಟರ್‌ಗಳು ಸ್ಟೇಜ್‌ ಮತ್ತು ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು ಮತ್ತು ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ತಿಳಿದುಕೊಳ್ಳಬೇಕು. ಹೀಗೆ ತಿಳಿದು ಕೊಂಡು ಇಟಿಎಂ ಆಪರೇಟ್‌ ಮಾಡಿದರೆ ಟಿಕೆಟ್‌ ದರ ಸ್ವಯಂಚಾಲಿತವಾಗಿ ಲೆಕ್ಕಹಾಕಿ ಎಷ್ಟು ಹಣ ಎಂದು ಮೊತ್ತವನ್ನು ತೋರಿಸುತ್ತದೆ. ಆ ಹಣವನ್ನು ಪಾವತಿಸಿದ ನಂತರ ಟಿಕೆಟ್ ಸ್ವಯಂ ಚಾಲಿತವಾಗಿ ಬರುತ್ತದೆ ಎಂದು ಹೇಳಿದ್ದಾರೆ.

ಹ್ಯಾಂಡ್‌ಹೆಲ್ಡ್ ಇಟಿಎಂ RFID ಸಾಧನವನ್ನು ಹೊಂದಿದೆ. ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ಮೌಲ್ಯೀಕರಿಸಲು ಸಹ ಕ್ಯಾಮರಾವನ್ನು ಹೊಂದಿದೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದರೆ, ಅದನ್ನೂ ವ್ಯವಸ್ಥೆಯಡಿ ಅಳವಡಿಸಿಕೊಳ್ಳಬಹುದು ಎಂದು ವಿವರಿಸಿದ್ದಾರೆ.

ಆನ್‌ಲೈನ್ ಕಾಯ್ದಿರಿಸುವಿಕೆ ವ್ಯವಸ್ಥೆಗಳನ್ನು ಟ್ರ್ಯಾಕಿಂಗ್ ಮಾಡುವುದು ಮತ್ತು ಖಾಲಿ ಇರುವ ಆಸನಗಳ ಆಧಾರದ ಮೇಲೆ ಟಿಕೆಟ್‌ಗಳನ್ನು ನೀಡುವುದು, ಸ್ಥಳ ಟ್ರ್ಯಾಕಿಂಗ್ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳಂತಹ ಹಲವು ವೈಶಿಷ್ಟ್ಯಗಳಿದ್ದರೂ, ಅವುಗಳನ್ನು ತಕ್ಷಣಕ್ಕೆ ಸೇರಿಸಲು ಕಷ್ಟಸಾಧ್ಯವೆಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಇಟಿಎಂ ಯಂತ್ರಗಳನ್ನು ಲಾಕ್ ಮಾಡಬಹುದು ಮತ್ತು ಅವುಗಳು ಕಳುವಾದರೆ ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡುವ ಮೂಲಕ ಕಂಡುಹಿಡಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿಕೆಗೆ ಜೆಡಿಎಸ್ ನಾಯಕರಿಂದ ಅದ್ದೂರಿ ಸ್ವಾಗತ ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ - ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ KSRTC: ಬಾನಂದೂರು - ಶ್ರೀಕ್ಷೇತ್ರ ಆದಿ ಚುಂಚನಗರಿ ನಡುವಿನ ಬಸ್‌ ಸಂಚಾರಕ್ಕೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಚಾಲನೆ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಸಂಬಂಧ ಕರೆದಿದ್ದ ಎಂಡಿಗಳ ಸಭೆ ಮುಂದೂಡಿಕೆ KSRTC- 3ನಿಗಮಗಳ 15 ಡಿಸಿಗಳ ವರ್ಗಾವಣೆ ಮಾಡಿ ಆದೇಶ: ಸಿಪಿಎಂ KSRTC: ಅಪಘಾತದಿಂದ ಮೃತಪಟ್ಟ ನಾಲ್ವರು ನೌಕರರ ಕುಟುಂಬಕ್ಕೆ ತಲಾ 1ಕೋಟಿ ರೂ. ಚೆಕ್‌ ವಿತರಣೆ KSRTC: ನಾಳೆಯಿಂದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜನ್ಮಸ್ಥಳ ಬಾನಂದೂರು- ಆದಿ ಚುಂಚನಗಿರಿಗೆ ನೇರ ಬಸ್ ಸೌಕರ್ಯ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ