ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದ್ದು ಒಂದಕಿಗೆ ಸಾವಿನ ಸಂಖ್ಯೆ ಇಳಿದಿದೆ.
ಪೊಲೀಸರ ಕಟ್ಟುನಿಟ್ಟಿನ ಈ ಕ್ರಮಕ್ಕೆ ಅಪಘಾತ ಸಂಖ್ಯೆ ಕಡಿಮೆಯಾಗಿದೆ. ಬೆಂಗಳೂರಿನಿಂದ ಮೈಸೂರಿನವರೆಗೆ ಮೇ ತಿಂಗಳೊಂದರಲ್ಲೇ 29 ಮಂದಿ ಅವಘಡದಲ್ಲಿ ಅಸುನೀಗಿದ್ದರು. ಜೂನ್ ತಿಂಗಳಿನಲ್ಲಿ 28ಮಂದಿ ಮೃತಪಟ್ಟಿದ್ದರು. ಆದರೆ, ಜುಲೈನಲ್ಲಿ ಆ ಸಂಖ್ಯೆ 8ಕ್ಕೆ ಇಳಿದಿತ್ತು.
ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಪ್ರಯಾಣಿಕರು ಅಸುನೀಗಿದ್ದರು. ಇನ್ನು ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ಅಪಘಾತ ಸಂಖ್ಯೆಯಲ್ಲಿ ಇಳಿಮುಖ ವಾಗಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತಷ್ಟು ಇಳಿಮುಖ ಆದರೆ ಈಗ ವಿಧಿಸಿರುವ 80 ಕಿಮೀ ವೇಗ ಮಿತಿಯನ್ನು ಸ್ವಲ್ಪ ಸಡಿಸಿಲಿ ಏರಿಕೆಗೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಗಂಟೆಗೆ 80 ರಿಂದ 100 ಕಿಮೀಗೆ ಏರಿಸುವ ಮೂಲಕ ಹಿಂದೆ ಇದ್ದ ಮಿತಿಯನ್ನು ಕಾಯ್ದುಕೊಳ್ಳುವುದತ್ತಾ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.